ಹಾನಗಲ್: ‘ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ನಾಲ್ಕೈದು ದಶಕಗಳಿಂದ ಮನೆ ನಿರ್ಮಿಸಿಕೊಂಡು ದಾಖಲೆ ರಹಿತವಾಗಿ ವಾಸಿಸುತ್ತಿರುವ ತಾಲ್ಲೂಕಿನ 13,622 ಫಲಾನುಭವಿಗಳಿಗೆ ಶಾಶ್ವತವಾಗಿ ಮನೆ ಮಾಲೀಕತ್ವ ದೊರಕಿಸುವ ಭರವಸೆ ಈಡೇರಿಸಿದಂತಹ ಸಂತೃಪ್ತಿ ಇದೆ’ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಸೋಮವಾರ ತಾಲ್ಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಕೆಲವರಕೊಪ್ಪ ಮತ್ತು ಉಪ್ಪುಣಸಿ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಸಾವಿರಾರು ಕುಟುಂಬಗಳು ಅತಂತ್ರದ ಕಡೆಯಿಂದ ಸ್ವತಂತ್ರದ ಕಡೆಗೆ ವಾಲುತ್ತಿವೆ. ಕನಿಷ್ಟ ₹ 8-10 ಲಕ್ಷ ಮೌಲ್ಯದ ಆಸ್ತಿಯನ್ನು ಸಂಪೂರ್ಣ ಉಚಿತವಾಗಿ ಅಳಿಸಲಾಗದ ದಾಖಲೆಗಳೊಂದಿಗೆ ನೀಡಲಾಗುತ್ತಿದೆ. ಇದರಿಂದ ಸಾವಿರಾರು ಕುಟುಂಬಗಳಲ್ಲಿ ಸಂತಸ ಕಾಣುತ್ತಿರುವುದು ಸಾರ್ಥಕ ಭಾವ ಮೂಡಿಸಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಮನೆ ದಾಖಲೆ ಒದಗಿಸಿ, ಶಾಶ್ವತ ಮಾಲಿಕತ್ವ ನೀಡಲಾಗುತ್ತಿದೆ. ಹಿಂದೆ ಇಂದಿರಾ ಗಾಂಧಿ ಕಾಲದಲ್ಲಿ ಉಳುವವ ಭೂಮಿಯ ಒಡೆಯನಾದರೆ, ಇಂದು ಸಿದ್ದರಾಮಯ್ಯ ಅವಧಿಯಲ್ಲಿ ವಾಸಿಸುವವನೆ ಮನೆಯ ಒಡೆಯನಾಗುತ್ತಿದ್ದಾನೆ ಎಂದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಸರ್ಕಾರದ ಎಲ್ಲ ಯೋಜನೆ, ಕಾರ್ಯಕ್ರಮಗಳ ಲಾಭ ಪಡೆಯುವಲ್ಲಿ ಹಾನಗಲ್ ತಾಲ್ಲೂಕು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ 30 ಸಾವಿರ ಹಕ್ಕುಪತ್ರ ವಿತರಿಸಲಾಗುತ್ತಿದ್ದರೆ, 13 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಹಾನಗಲ್ ತಾಲ್ಲೂಕಿಗೆ ಸೇರಿದ್ದಾರೆ. ಜಿಲ್ಲೆಯಲ್ಲಿ 350 ಕಂದಾಯ ಗ್ರಾಮ ಮತ್ತು ಉಪ ಗ್ರಾಮಗಳನ್ನು ರಚಿಸುತ್ತಿದ್ದರೆ, ಇದರಲ್ಲಿ 150 ಕ್ಕೂ ಹೆಚ್ಚು ಹಾನಗಲ್ ತಾಲ್ಲೂಕಿಗೆ ಸೇರಿವೆ ಎಂದರು.

ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿರಾವ್, ತಹಶೀಲ್ದಾರ್ ರೇಣುಕಾ ಎಸ್., ಇಒ ಪರಶುರಾಮ ಪೂಜಾರ, ಕೆಲವರಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಾಲ ಕಾನಮನಿ, ಉಪಾಧ್ಯಕ್ಷೆ ಸುಧಾ ಮ್ಯಾಗಳವರ, ಉಪ್ಪುಣಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಾಬಾಜಾನ ಬಂಕಾಪೂರ ಮತ್ತು ಮುಖಂಡರಾದ ಮಂಜು ಗೊರಣ್ಣನವರ, ಕರಿಯಪ್ಪ ಗಂಟೇರ, ಯಲ್ಲಪ್ಪ ದೊಡ್ಡಚಿಕ್ಕಣ್ಣನವರ, ಫಕ್ಕೀರಪ್ಪ ಮುಂಡರಗಿ, ಲಕ್ಕಪ್ಪ ಗಂಟೇರ, ಬಂಗಾರಪ್ಪ ಹರಿಜನ, ಸಿದ್ದಣ್ಣ ಕಾಡಪ್ಪನವರ, ಶಾಂತಪ್ಪ ಬಡೆಣ್ಣನವರ, ಸಿದ್ದು ವಡ್ಡರ, ವನಜಾಕ್ಷಿ ಮಾಳಣ್ಣನವರ, ಶಿವಾಜೆಪ್ಪ ಬೆಳ್ಳಿಕಟ್ಟಿ, ಸುಭಾಸ ಗೊರಣ್ಣನವರ, ಬಸವರಾಜ ಮಾಳಣ್ಣನವರ, ವಿಜಯಕುಮಾರ ದೊಡ್ಡಮನಿ, ಪುಟ್ಟಪ್ಪ ನರೇಗಲ್, ಟಾಕನಗೌಡ ಪಾಟೀಲ, ಹನುಮಂತಪ್ಪ ಮರಗಡಿ, ಖ್ವಾಜಾಮೊಹಿದ್ದೀನ್ ಜಮಾದಾರ, ಮಹದೇವಪ್ಪ ಬಾಗಸರ, ಚಂದ್ರಪ್ಪ ಜಾಲಗಾರ, ಕೊಟ್ರಪ್ಪ ಕುದರಿಸಿದ್ದನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.