ಒಣಗಲು ಹಾಕಿದ್ದ 50 ಕ್ವಿಂಟಲ್ ಮೆಕ್ಕೆಜೋಳ ಮಳೆಯಿಂದ ಹಾಳಾಗಿದೆ. ಸಾಕಷ್ಟು ರೈತರು ಈ ಗೋಳು ಅನುಭವಿಸುತ್ತಿದ್ದಾರೆ. ಮಳೆಯಿಂದಾದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು
ಶಿವಪ್ಪ ದೇಸೂರು ಜೇಕಿನಕಟ್ಟಿ ರೈತ
‘ನೀರಿನ ಜೊತೆ ತೇಲಿಹೋದ ಕಾಳು’
ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ರಾಜ್ಯ ಹೆದ್ದಾರಿಯ ಒಂದು ಬದಿ ಖಾಲಿ ಜಾಗವಿರುವ ಕಡೆಗಳಲ್ಲಿ ಮೆಕ್ಕೆಜೋಳವನ್ನು ಒಣಗಿಸಲು ಹಾಕಿರುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಕೆಲ ಕಡೆಗಳಲ್ಲಿ ಮೆಕ್ಕೆಜೋಳದ ತೆನೆಗಳಿವೆ. ಉಳಿದ ಕಡೆಗಳಲ್ಲಿ ಮೆಕ್ಕೆಜೋಳದ ಕಾಳುಗಳಿವೆ. ಮಳೆ ಸುರಿದ ಸಂದರ್ಭದಲ್ಲಿ ಕಾಳುಗಳು ನೀರಿನ ಜೊತೆಯಲ್ಲಿ ತೇಲಿಹೋಗುತ್ತಿರುವುದು ರೈತರನ್ನು ಕಂಗಲಾಗಿಸಿದೆ. ‘ಬಂಕಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮೆಕ್ಕೆಜೋಳದ ಕಾಳುಗಳನ್ನು ಒಣಗಲು ಹಾಕಿದ್ದೆವು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನೀರಿನ ಜೊತೆಯಲ್ಲಿಯೇ ಕಾಳುಗಳು ತೇಲಿಹೋಗಿವೆ. ರಸ್ತೆಯಲ್ಲಿ ಸಿಕ್ಕ ಅಲ್ಪ ಕಾಳುಗಳನ್ನು ಸಂಗ್ರಹಿಸಿ ಪುನಃ ಒಣಗಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಬಂಕಾಪುರ ರೈತ ಚನ್ನವೀರಪ್ಪ ಹೇಳಿದರು.
ಹಾವೇರಿ ಜಿಲ್ಲೆಯ ಸವಣೂರು ಎಪಿಎಂಸಿಯಲ್ಲಿ ಒಣಗಲು ಹಾಕಿದ್ದ ಮೆಕ್ಕೆಜೋಳದ ಕಾಳುಗಳು ಮಳೆಯಿಂದಾಗಿ ಮೊಳಕೆಯೊಡೆದಿರುವುದು