ರಾಮ ನವಮಿ ಆಚರಣೆ

ಶನಿವಾರ, ಏಪ್ರಿಲ್ 20, 2019
23 °C

ರಾಮ ನವಮಿ ಆಚರಣೆ

Published:
Updated:
Prajavani

ಹಾವೇರಿ: ನಗರದ ರಾಮ ಮಂದಿರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಅಭಿಷೇಕ, ಅಲಂಕಾರಗಳ ಪೂಜೆ ಸಲ್ಲಿಸಿದರು. ನವಮಿ ತಿಥಿ ಪುನರ್ವಸು ನಕ್ಷತ್ರ ಮುಹೂರ್ತದಲ್ಲಿ (ಮಧ್ಯಾಹ್ನ 12.40) ರಾಮನನ್ನು ಬೆಳ್ಳಿ ತೊಟ್ಟಿಲಿಗೆ ಹಾಕಿ ಪೂಜೆ ಸಲ್ಲಿಸಲಾಯಿತು. ಪಲ್ಲಕ್ಕಿಯಲ್ಲಿ ರಾಮನನ್ನು ಮಂದಿರಕ್ಕೆ ಪ್ರದಕ್ಷಿಣೆ ಹಾಕಲಾಯಿತು. ನಂತರ ಮಹಾಮಂಗಳಾರತಿ ಮಾಡಲಾಯಿತು.

ರಾಮ ಕಥಾ ಪುರಾಣ, ಭಕ್ತರಿಂದ ಭಜನೆ ನಡೆಯಿತು. ದೇವರಿಗೆ ರೇಷ್ಮೆ ಪೋಷಾಕು, ಆಭರಣ, ತುಳಸಿ ಮಾಲೆ ಹೂವುಗಳಿಂದ ಅಲಂಕರಿಸಲಾಗಿತ್ತು.

ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದೇ ರೀತಿಯ ಪ್ರಸಾದ ವ್ಯವಸ್ಥೆ ಮಾಡಿರಲಿಲ್ಲ. ಭಕ್ತರೇ ತಂದ ಪ್ರಸಾದವನ್ನು ಹಂಚಲಾಯಿತು ಎಂದು ದೇವಸ್ಥಾನದ ಪ್ರಮುಖರಾದ ಹನುಮಂತ ನಾಯ್ಕ ಬಾದಾಮಿ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !