ರಾಣೆಬೆನ್ನೂರು: ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಮತ್ತು ಹಾಲಸಿದ್ದೇಶ್ವರ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭಾನುವಾರ ಅರ್ಥಪೂರ್ಣವಾಗಿ ಜರುಗಿತು.

ಮೂರು ದಶಕದ ಬಳಿಕ ವಿದ್ಯಾರ್ಥಿಗಳ ಸಮಾಗಮ, ಹಳೇ ದಿನಗಳ ಮೆಲುಕು, ಶಾಲಾ ಕ್ಷಣಗಳ ಸ್ಮರಣೆಯು ಭಾವ ಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾಯಿತು.

1993-94ನೇ ಸಾಲಿನ ಪ್ರಾಥಮಿಕ ಶಾಲೆ ಮತ್ತು 1996-97ನೇ ಸಾಲಿನ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭ್ರಮದಲ್ಲಿ ಮಿಂದೆದ್ದರು.

ಈ ಮೂರು ಶಾಲೆಗಳಲ್ಲಿ ವಿದ್ಯಾಭ್ಯಾಸ ಕಲಿತ ಅಂದಿನ ವಿದ್ಯಾರ್ಥಿಗಳು ಇದೀಗ ವಿವಿಧ ವೃತ್ತಿಯಲ್ಲಿ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮಗೆ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಲು ಇಂದು ಸಮ್ಮಿಲನಗೊಂಡಿದ್ದರು. ವಿವಿಧ ವಿಷಯಗಳ ಶಿಕ್ಷಕರಿಗೆ ಸನ್ಮಾನಿಸಿ ಕಲಿಕಾ ಋಣ ತೀರಿಸುವ ಕೆಲಸ ಮಾಡಿದರು. ಜತೆಗೆ, ಹಳೇ ಸಹಪಾಠಿಗಳೊಂದಿಗೆ ಹರಟೆ ಹೊಡೆದು ಶಾಲಾ ಜೀವನದ ಚಟುವಟಿಕೆಗಳನ್ನು ಸ್ಮರಿಸಿಕೊಂಡರು.

ಗುರುಗಳಿಗೆ ಗೌರವ ಸಮರ್ಪಣೆ:

ನಿವೃತ್ತ ದೈಹಿಕ ಶಿಕ್ಷಕ ಬಿ.ಎಸ್.ಅರಳಿ, ನಿವೃತ್ತ ಗಣಿತ ಶಿಕ್ಷಕ ಎಚ್.ಪಿ.ಬಗಾಡೆ, ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಹೊಸಳ್ಳಿ, ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಎಸ್.ಅಂಗಡಿ, ಗಣಿತ ಶಿಕ್ಷಕ ಎಸ್.ವಿ.ಬ್ಯಾಳಿ, ಕನ್ನಡ ಶಿಕ್ಷಕ ಸಿ.ಆರ್.ಮುದ್ದಪ್ಪಳವರ, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಚ್.ಐರಣಿ, ಎಫ್.ಕೆ.ಬಿಸಲಹಳ್ಳಿ, ನಿವೃತ್ತ ಶಿಕ್ಷಕ ಎಂ.ಸಿ.ಮಠದ, ನಿವೃತ್ತ ಶಾಲಾ ಸಿಬ್ಬಂದಿಯಾದ ಬಿ.ವೈ.ಘೋಡಕೆ, ಉಮೇಶ್ ಕಂಬಾಳಿಮಠ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಸ್.ಅರಳಿ, ನಿವೃತ್ತ ಶಿಕ್ಷಕ ಎಂ.ಸಿ.ಮಠದ, ಮುಖ್ಯಶಿಕ್ಷಕ ಪ್ರಕಾಶ್ ಹೊಸಳ್ಳಿ ಮಾತನಾಡಿದರು. ಮುಂಜುನಾಥ ಬೋವಿ, ದೀಪು ಗಚ್ಚಿನಮನಿ, ಪ್ರದೀಪ ಬಣಕಾರ, ಸಿಕಂದರ್ ಐರಣಿ, ಹನುಮಂತ ಮಡಿವಾಳ, ಉಮೇಶ ಮುದ್ದಪ್ಪಳವರ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.