ಬುಧವಾರ, 1 ಅಕ್ಟೋಬರ್ 2025
×
ADVERTISEMENT
ADVERTISEMENT

ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ: ಅಧ್ಯಕ್ಷರಾದ ‘ಕೈ’ ಸದಸ್ಯ; ಬಿಜೆಪಿ ಬೆಂಬಲ

Published : 1 ಅಕ್ಟೋಬರ್ 2025, 5:17 IST
Last Updated : 1 ಅಕ್ಟೋಬರ್ 2025, 5:17 IST
ಫಾಲೋ ಮಾಡಿ
Comments
ಶಿವಕುಮಾರ ಉಪ್ಪಾರ
ಶಿವಕುಮಾರ ಉಪ್ಪಾರ
ರವಿ ಮುದಿಯಪ್ಪನವರ ವಿಪ್ ಉಲ್ಲಂಘಿಸಿದ್ದಾರೆ. ಪಕ್ಷಾಂತರ ಕಾಯ್ದೆಯಡಿ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಮುಂದೆ ಉಚ್ಚಾಟನೆಗೂ ಅವಕಾಶವಿದೆ
ಸಂಜೀವಕುಮಾರ ನೀರಲಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ನಾನು ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಕೇಳಿದ್ದೆ. ಅದಕ್ಕೆ ಒಪ್ಪದಿದ್ದರೆ ಬಿಜೆಪಿ ಸದಸ್ಯರ ಬೆಂಬಲದಿಂದ ಅಧ್ಯಕ್ಷನಾಗಿದ್ದೇನೆ
ರವೀಂದ್ರ ಮುದಿಯಪ್ಪನವರ ನೂತನ ಅಧ್ಯಕ್ಷ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ
ಜನಮಾನಸದಲ್ಲಿ ಬಿಜೆಪಿಗೆ ನೆಲೆಯಿದೆ. ಕಾಂಗ್ರೆಸ್ಸಿನಿಂದ ಅಸಮಾಧಾನಗೊಂಡು ರವಿಯವರು ನಮ್ಮ ಪಕ್ಷ ಸೇರಿದ್ದಾರೆ. ಅಧ್ಯಕ್ಷ ಸ್ಥಾನ ಬಿಜೆಪಿಯವರಿಗೆ ಸಿಗಬೇಕಿತ್ತು. ರವಿ ಮುದಿಯಪ್ಪನವರ ತೀರ್ಮಾನದಿಂದ ಸಿಕ್ಕಿದೆ
ಬಸವರಾಜ ಬೊಮ್ಮಾಯಿ, ಸಂಸದ
‘ಸಿ.ಎಂ. ಡಿ.ಸಿ.ಎಂ. ಭೇಟಿ’
ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಪಕ್ಷೇತರ ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆದಿದ್ದ ಕಾಂಗ್ರೆಸ್‌ ಮುಖಂಡರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ತಮ್ಮ ಪಕ್ಷದೆಂದು ಹೇಳಿಕೊಂಡಿದ್ದರು.  ಪಕ್ಷೇತರ ಅಭ್ಯರ್ಥಿ ಲಲಿತಾ ಚನ್ನಗೌಡ್ರ ಅವರ ಮಗ ಶಂಕರಗೌಡ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಳಿ ಕರೆದೊಯ್ದಿದ್ದ ಮುಖಂಡರು ಭೇಟಿ ಮಾಡಿಸಿ ಪಕ್ಷಕ್ಕೆ ಆಹ್ವಾನ ಕೊಡಿಸಿದ್ದರು. ಈ ಸಂದರ್ಭದಲ್ಲಿ ರವೀಂದ್ರ ಸಹ ಜೊತೆಗಿದ್ದರು. ಶಂಕರಗೌಡ ಅವರು ಕೊನೆ ಕ್ಷಣದಲ್ಲೂ ಕಾಂಗ್ರೆಸ್ ಜೊತೆಗಿದ್ದು ತಮ್ಮ ತಾಯಿ ಲಲಿತಾ ಅವರಿಂದ ಅಧ್ಯಕ್ಷಕ್ಕಾಗಿ ನಾಮಪತ್ರ ಕೊಡಿಸಿದ್ದರು. ಆದರೆ ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಶಿವಕುಮಾರ ಹಾಗೂ ರವೀಂದ್ರ ಮುದಿಯಪ್ಪನವರ ಅವರು ಬಿಜೆಪಿ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT