ರಾಣೆಬೆನ್ನೂರು: ‘ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕು. ಆಧುನಿಕತೆ ಬೆಳೆದೆಂತಲ್ಲಾ ವಿಜ್ಞಾನವನ್ನು ಆಶ್ರಯಿಸುವುದು ಹೆಚ್ಚಾಗಿದೆ. ಮಕ್ಕಳು ವಿಜ್ಞಾನಿಗಳಾಗಲು ಚಿಂತನೆ ಮಾಡಬೇಕು. ಪದವಿ ಓದಿ ವಿಜ್ಞಾನ ಕ್ಷೇತ್ರದಲ್ಲೂ ಕೆಲಸ ಮಾಡಿ ದೇಶದ ಪ್ರಗತಿಗೆ ಕೊಡುಗೆ ನೀಡಿ’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಇಲ್ಲಿನ ಸಿದ್ದೇಶ್ವರ ಗ್ರಾಮಾಂತರ ವಸತಿ ಪ್ರೌಢಶಾಲೆಯಲ್ಲಿ ಬುಧವಾರ ಹಾವೇರಿ ಉಪನಿರ್ದೇಶಕರ ಕಾರ್ಯಾಲಯ (ಆಡಳಿತ ಮತ್ತು ಅಭಿವೃದ್ದಿ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ತಾಲ್ಲೂಕುಮಟ್ಟದ ಪ್ರೌಢಶಾಲಾ ವಿಜ್ಞಾನ ಮತ್ತು ಗಣಿತ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಜ್ಞಾನ ಪರಿಕಲ್ಪನೆಗಳಾದ ಪ್ರಚ್ಛನ್ನ ಶಕ್ತಿ, ಯಾಂತ್ರಿಕ ಶಕ್ತಿ, ಶಕ್ತಿ ಸಂರಕ್ಷಣಾತತ್ವ ಮತ್ತು ನಕ್ಷತ್ರಗಳ ದೂರದ ಜ್ಯೋತಿವರ್ಷದ ಮೂಲ ಮಾರ್ಗಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ನಂತರ ಸ್ಪಷ್ಟೀಕರಣ ನೀಡಿ, ವಿದ್ಯಾರ್ಥಿಗಳು ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದರು.
ಉಪನಿರ್ದೇಶಕ ಗಿರೀಶ ಹುಗ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಮುಖ್ಯಶಿಕ್ಷಕ ಪ್ರಶಾಂತ ಮಾಸಣಗಿ, ಕ್ಷೇತ್ರ ಸಮನ್ವಯಾಧಿಕಾರಿ ಮಂಜಾ ನಾಯಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ವಿ.ಅಡಿವೇರ, ವಿಜ್ಞಾನ ವೇದಿಕೆ ಅಧ್ಯಕ್ಷ ಪ್ರಭು ಯರೇಶೀಮಿ, ಆರ್.ವಿ.ಸೂರಗೊಂಡ, ಎಂ.ಎಂ.ಮಾಗನೂರ, ಎಸ್.ಎಂ.ಬನ್ನಿಕೋಡ, ನಾಗರಾಜ್ ಎನ್., ನಾಗರಾಜ ಮತ್ತೂರ ಹಾಗೂ ಸಿಆರ್‌ಪಿ, ಬಿಆರ್‌ಪಿ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು: ಎಸ್‌ಎಸ್‌ಎಸ್‌ಎಚ್‌ಎಸ್ ಸುಣಕಲ್ಲಬಿದರಿ ಪ್ರೌಢಶಾಲೆಯ ಶಿವಾನಂದ ದೊಡ್ಡನಾಗಳ್ಳಿ ಅವರ ಜೈವಿಕ ವಿಜ್ಞಾನ ಮಾದರಿ(ಪ್ರಥಮ), ಎಸ್.ಎನ್.ಎಚ್.ಎಸ್ ಅಸುಂಡಿ ಸ್ಕೂಲಿನ ವಿದ್ಯಾರ್ಥಿ ಪೂಜಾ ಅಂಗಡಿ ಅವರ ಎಂಜಿನಿಯರಿಂಗ್ ಮಾದರಿ (ದ್ವಿತೀಯ)ಸರ್ಕಾರಿ ಪ್ರೌಢ ಶಾಲೆ ಹೂಲಿಹಳ್ಳಿಯ ವಿದ್ಯಾರ್ಥಿ ಅಭಿನವ ಗುಡ್ಲಾನೂರ ಅವರ ಕಂಪ್ಯೂಟರ್ ವಿಜ್ಞಾನ ಮಾದರಿ (ತೃತೀಯ) ಸ್ಥಾನ ಪಡೆದಿದ್ದಾರೆ.
ಗುಂಪು ವಿಭಾಗದಲ್ಲಿ: ನಗರದ ಕೆಎಲ್‌ಇ ಆರ್‌ಆರ್ ಸ್ಕೂಲ್ ವಿದ್ಯಾರ್ಥಿ ದೃಷ್ಠಿ ಮೀಸೆ ಮತ್ತು ಸಂಗಡಿಗರು ಪರಿಸರ ವಿಜ್ಞಾನ ಮಾದರಿ (ಪ್ರಥಮ)ಸರ್ಕಾರಿ ಪ್ರೌಢ ಶಾಲೆ ಹೆಡಿಯಾಲದ ಹರೀಶ ಹತ್ತಿಮತ್ತೂರು ಹಾಗೂ ತಂಡದ ಗಣಿತ ಮಾದರಿ (ದ್ವಿತೀಯ) ಹಾಗೂ ಸರ್ಕಾರಿ ಪ್ರೌಢ ಶಾಲೆ ಹರನಗಿರಿ ವಿದ್ಯಾರ್ಥಿ ಹೊನ್ನೇಶ ತೋಪಿನ ಹಾಗೂ ತಂಡದ ಭತಶಾಸ್ತ್ರದ ಮಾದರಿ (ತೃತೀಯ )ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.