ಶಿಗ್ಗಾವಿ: ‘ತಾಯಿ ಮೃತರಾಗಿದ್ದಾರೆ’ ಎಂದು ಪುರಸಭೆಗೆ ಸುಳ್ಳು ಅರ್ಜಿ ನೀಡಿ ಮರಣ ಪ್ರಮಾಣ ಪತ್ರ ಪಡೆದುಕೊಂಡಿರುವ ಮಗನ ವಿರುದ್ಧ ತಾಯಿಯೇ ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ.

ಶಿಗ್ಗಾವಿ ಪಟ್ಟಣದ ಖಾಜೆಖಾನಗಲ್ಲಿಯ ನಿವಾಸಿ ಹೂರಾಂಬಿ ಜಂಗ್ಲಿಸಾಬ ಮುಲ್ಕಿ(60) ಹಾಗೂ ಹುಬ್ಬಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿರುವ ಆಕೆಯ ಪುತ್ರ ಶೌಕತ್ಅಲಿ ಜಂಗ್ಲಿಸಾಬ ಮುಲ್ಕಿ ಇಬ್ಬರ ಹೆಸರಿನಲ್ಲಿ ಜಂಟಿಯಾಗಿ ಎರಡು ಎಕರೆ ಆಸ್ತಿಯಿದೆ.

‘ಆಸ್ತಿಯನ್ನು ಸಂಪೂರ್ಣವಾಗಿ ಕಬಳಿಸಬೇಕು ಎಂಬ ದುರುದ್ದೇಶದಿಂದ ಜೀವಂತವಾಗಿರುವ ತಾಯಿ ಮೃತರಾಗಿದ್ದಾರೆ ಎಂದು ಪುರಸಭೆಗೆ ಖೊಟ್ಟಿ ದಾಖಲೆ ನೀಡಿ ಮರಣ ಪತ್ರ ಪಡೆದಿದ್ದಾನೆ. ಅವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ತಾಯಿ ಹೂರಾಂಬಿ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಮೇ 6ರಂದು ತಾಯಿ ಮೃತರಾಗಿದ್ದಾರೆಂದು ಪುರಸಭೆಗೆ ಸುಳ್ಳು ಮಾಹಿತಿ ನೀಡಿದ್ದು ಜೂನ್ 9ರಂದು ಪುರಸಭೆಯಲ್ಲಿ ನೋಂದಣಿ ಆಗಿದೆ. ಈ ಕುರಿತು ಗಲ್ಲಿಯಲ್ಲಿನ ಜನರಿಂದ ಮಾಹಿತಿ ತಿಳಿದಾಗ, ಜೂನ್ 11ರಂದು ಪುರಸಭೆಯಲ್ಲಿ ಮಗ ಮರಣ ಪ್ರಮಾಣ ಪತ್ರ ಪಡೆದಿರುವುದನ್ನು ತಿಳಿದುಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ’ ಎಂದು ಹೂರಾಂಬಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.