ರಾಣೆಬೆನ್ನೂರು: ಭಗವಂತ ಕೊಟ್ಟ ಈ ಬದುಕು ಸಾರ್ಥಕವಾಗಬೇಕಾದರೆ ಧರ್ಮಾಚರಣೆ ಅವಶ್ಯಕ. ಬದುಕಿನ ಉನ್ನತಿಗೆ ಅಧ್ಯಾತ್ಮದ ಅರಿವು ಮುಖ್ಯ. ಆಷಾಢ ಮಾಸದಲ್ಲಿ ಗುರು ಪೂಜೆಯನ್ನು ಮಾಡಿದರೆ ಹೆಚ್ಚು ಫಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪ್ರಾಪ್ತವಾಗುತ್ತದೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಚನ್ನೇಶ್ವರಮಠದ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ಆಷಾಢ ಮಾಸದ ಇಷ್ಟಲಿಂಗ ಪೂಜೆ ಮತ್ತು ಜನಜಾಗೃತಿ ಧರ್ಮ ಸಭೆಯಲ್ಲಿ ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿರೇಶ ಮೋಟಗಿ ಅವರು ಧರ್ಮ ಸಭೆ ಉದ್ಘಾಟಿಸಿ ಮಾತನಾಡಿ, ನೆಮ್ಮದಿಯ ಬದುಕಿಗೆ, ಮಾನವ ಕಲ್ಯಾಣಕ್ಕಾಗಿ ಅಧ್ಯಾತ್ಮಿಕ ಚಿಂತನೆಗೆಳು, ಧರ್ಮ ಬೋಧನೆಗಳು ಅವಶ್ಯ ಎಂದರು.

ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಸ್ವಾಮೀಜಿ, ಕೊಡಿಯಾಲ ಹೊಸಪೇಟೆ ಪುಣ್ಯಕೋಟಿಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಣಕೂರ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ನಿವೃತ್ತ ಮುಖ್ಯಶಿಕ್ಷಕಿ ಕಸ್ತೂರಮ್ಮ ಪಾಟೀಲ ಸ್ವಾಗತಿಸಿದರು. ರಿಂದಮ್ಮ ಶಿವಪ್ಪ ಕೆಂಚರಡ್ಡಿ ಕುಟುಂಬದವರು ಪ್ರಸಾದ ವಿತರಣೆ ಮಾಡಿದರು. ಅಜ್ಜೋಡಿಮಠದ ಕುಟುಂಬದವರು ಚನ್ನೇಶ್ವರಮಠದ ವಟುಗಳಿಗೆ ವಸ್ತ್ರ ದಾನ ಮಾಡಿದರು.

ನಗರಸಭೆ ಸದಸ್ಯೆ ಚಂಪಕಾ ಬಿಸಲಹಳ್ಳಿ, ನಗರಸಭೆ ಸದಸ್ಯೆ ಸುಮಂಗಲಾ ಪಾಟೀಲ, ರಾಜಶೇಖರ ಅಜ್ಜೋಡಿಮಠ, ಬಿ.ಎಸ್.ಪಟ್ಟಣಶೆಟ್ಟಿ, ಫಕ್ಕೀರೇಶ ಭಸ್ಮಾಂಗಿಮಠ, ಜಗದೀಶ ಅಜ್ಜೋಡಿಮಠ, ಅಮೃತಗೌಡ ಪಾಟೀಲ, ಗಾಯತ್ರಮ್ಮ ಕುರುವತ್ತಿ, ರಾಜಶೇಖರ ತಿಳುವಳ್ಳಿ, ಸುನಂದಮ್ಮ ತಿಳವಳ್ಳಿ, ಪ್ರೊ.ಎಸ್.ವಿ.ಉಜ್ಜೈನಿಮಠ, ವಿ.ಎಸ್. ಹಿರೇಮಠ, ಶಿವಯೋಗಿಸ್ವಾಮಿ ಹಿರೇಮಠ, ವಾಗೀಶ ಮಳೇಮಠ, ಗೌರೀಶ ನೆಗಳೂರಮಠ ಶಾಸ್ತ್ರಿ, ರಾಜಶೇಖರಮಠ, ಅಷಾಡ ಮಾಸದ ಇಷ್ಟಲಿಂಗ ಸೇವಾ ಸಮಿತಿ ಸದಸ್ಯರು, ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘದ ಪದಾಧಕಾರಿಗಳು ಭಾಗವಹಿಸಿದ್ದರು.

ಸಾರೋಟ ಮೆರವಣಿಗೆ: ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮೃತ್ಯುಂಜಯನಗರದ ಮೃತ್ಯುಂಜಯ ಕಲ್ಯಾಣ ಮಂಟಪದಿಂದ ಸಾರೋಟಿನಲ್ಲಿ ಸಕಲ ವಾಧ್ಯಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಮತ್ತು ಕದಳಿ ವೇದಿಕೆ ಪದಾಧಿಕಾರಿಗಳು ಕುಂಭ ಹೊತ್ತು ಸಾಗಿದರು. ಮೆರವಣಿಗೆ ಸಾಗುವ ಬೀದಿಯಲ್ಲಿ ತಳಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.