ಹಾವೇರಿ: ರೈತರು ಬೆಳೆದಿರುವ ಕಬ್ಬನ್ನು ಕಾರ್ಖಾನೆಗೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ಹೊತ್ತಿರುವ ಚಾಲಕರ ಜೀವಕ್ಕೆ ಇತ್ತೀಚಿನ ದಿನಗಳಲ್ಲಿ ಕುತ್ತು ಎದುರಾಗುತ್ತಿದೆ. ಹದಗೆಟ್ಟ ರಸ್ತೆಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆಗಳಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಕಬ್ಬಿನ ಸಮೇತ ಟ್ರ್ಯಾಕ್ಟರ್ ಹಾಗೂ ಲಾರಿಗಳು ಉರುಳಿ ಬೀಳುತ್ತಿರುವ ಅವಘಡಗಳು ವರದಿಯಾಗುತ್ತಿವೆ.

ಕಬ್ಬಿನ ಬೆಲೆಯ ವಿಚಾರವಾಗಿ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ‘ಪ್ರತಿ ಟನ್ ಕಬ್ಬಿಗೆ ₹ 3,300 ಬೆಲೆ ನೀಡಬೇಕು’ ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಮಣಿದ ಸರ್ಕಾರ, ರೈತರ ಬೇಡಿಕೆಗೆ ತಕ್ಕಂತೆ ಕಬ್ಬಿಗೆ ಬೆಲೆ ನಿಗದಿ ಮಾಡಿದೆ. ಅದರ ಪ್ರಕಾರ ಕಬ್ಬಿನ ಖರೀದಿ ಶುರುವಾಗಿದೆ.

ಜಿಲ್ಲೆಯಾದ್ಯಂತ ಕಬ್ಬು ಕಟಾವು ಹಾಗೂ ಸಾಗಣೆ ಕೆಲಸಕ್ಕಾಗಿ ಮಹಾರಾಷ್ಟ್ರದಿಂದ ಗ್ಯಾಂಗ್ಗಳು (ಕಾರ್ಮಿಕರ ಗುಂಪು) ಬಂದಿವೆ. ನೂರಾರು ಸಂಖ್ಯೆಯಲ್ಲಿರುವ ಕಾರ್ಮಿಕರು, ಗುಂಪು ಕಟ್ಟಿಕೊಂಡು ಕಬ್ಬು ಕಟಾವು ಮಾಡುತ್ತಿದ್ದಾರೆ. ತಮ್ಮದೇ ವಾಹನಗಳಲ್ಲಿ ಕಬ್ಬನ್ನು ತುಂಬಿ ಕಾರ್ಖಾನೆಗೆ ಸಾಗಿಸುತ್ತಿದ್ದಾರೆ. ಕಬ್ಬು ಕಟಾವು ಸುಗಮವಾಗಿ ಮುಗಿದರೂ, ಸಾಗಣೆ ಕೆಲಸವೇ ಕಾರ್ಮಿಕರಿಗೆ ತಲೆನೋವಾಗಿದೆ.

ಜಿಲ್ಲೆಯ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಜಮೀನುಗಳ ಒಳ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆ. ಇಂಥ ರಸ್ತೆಗಳಲ್ಲಿ ಚಾಲಕರು, ಕಬ್ಬಿನ ಟ್ರ್ಯಾಕ್ಟರ್ ಹಾಗೂ ಲಾರಿ ಚಲಾಯಿಸಬೇಕಾದ ಸ್ಥಿತಿಯಿದೆ. ಪ್ರತಿಯೊಬ್ಬ ಚಾಲಕರು, ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಚಾಲನೆ ಮಾಡುತ್ತಿದ್ದಾರೆ. ಎಷ್ಟೇ ಜಾಗೃತವಿದ್ದರೂ ತಮ್ಮದಲ್ಲದ ತಪ್ಪಿಗೆ ಅಪಘಾತಗಳು ಸಂಭವಿಸುತ್ತಿವೆ. ಕಬ್ಬು ಸಂಪೂರ್ಣವಾಗಿ ರಸ್ತೆ ಪಾಲಾಗುತ್ತಿದ್ದು, ರೈತರಿಗೂ ನಷ್ಟವಾಗುತ್ತಿದೆ.

ಜಿಲ್ಲೆಯ ಶಿಗ್ಗಾವಿ, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಹಾವೇರಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗಿದೆ. ಸವಣೂರು, ರಾಣೆಬೆನ್ನೂರು ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲೂ ಕಬ್ಬಿನ ಬೆಳೆಯಿದೆ. ನವೆಂಬರ್ನಿಂದಲೇ ಎಲ್ಲ ಕಡೆ ಕಟಾವು ಶುರುವಾಗಿದ್ದು, ಅಂದಿನಿಂದಲೇ ಕಬ್ಬಿನ ಸಾಗಣೆ ಶುರುವಾಗಿದೆ.

‘ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿ–ಮುಂಡಗೋಡ ರಸ್ತೆಯು ಅಲ್ಲಲ್ಲಿ ತೀರಾ ಹದಗೆಟ್ಟಿದೆ. ತಗ್ಗುಗಳು ಬಿದ್ದಿವೆ. ಈ ರಸ್ತೆಯಲ್ಲಿ ಕಬ್ಬು ಸಾಗಣೆಗೆ ತೊಂದರೆಯಾಗುತ್ತಿದೆ. ಕಬ್ಬಿನ ಟ್ರ್ಯಾಕ್ಟರ್ನ ಟ್ರೇಲರ್ಗಳು ತಗ್ಗಿನಲ್ಲಿ ಸಿಲುಕಿಕೊಂಡು ಮೇಲಕ್ಕೆ ಏಳುತ್ತಿಲ್ಲ. ಟ್ರೇಲರ್ ಎಳೆಯಲೆಂದು ಹೆಚ್ಚುವರಿ ಎಂಜಿನ್ ಬಳಸುತ್ತಿದ್ದೇವೆ’ ಎಂದು ಚಾಲಕ ಚಂದ್ರಕಾಂತ ಹೇಳಿದರು.

ಚಾಲಕ ಸಿದ್ದಾರ್ಥ, ‘ಬಂಕಾಪುರ ಬಳಿಯ ಬಾಡ ಸಮೀಪದ ರಸ್ತೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ತೆಗೆದುಕೊಂಡು ಹೊರಟಿದ್ದೆ. ಎದುರಿಗೆ ಬರುತ್ತಿದ್ದ ವಾಹನ ಅಡ್ಡಾದಿಡ್ಡಿಯಾಗಿ ಬಂದಿದ್ದರಿಂದ, ಕಬ್ಬಿನ ಸಮೇತ ಟ್ರ್ಯಾಕ್ಟರ್ ಉರುಳಿಬಿತ್ತು. ರಸ್ತೆಯಲ್ಲೆಲ್ಲ ಕಬ್ಬು ಚಿಲ್ಲಾಪಿಲ್ಲಿಯಾಯಿತು. ಅದೃಷ್ಟವಶಾತ್ ನಾನು ಅಪಾಯದಿಂದ ಪಾರಾದೆ’ ಎಂದರು.

‘ಟನ್ಗಟ್ಟಲೇ ಭಾರ ಇರುವ ಕಬ್ಬು ಕೊಂಡೊಯ್ಯುವಾಗ ರಸ್ತೆ ಚೆನ್ನಾಗಿ ಇರಬೇಕು. ಇಲ್ಲದಿದ್ದರೆ, ಟ್ರ್ಯಾಕ್ಟರ್–ಲಾರಿಗಳು ಉರುಳಿ ಬೀಳುತ್ತದೆ. ಕಬ್ಬು ಸಾಗಣೆ ಸಮಯದಲ್ಲಾದರೂ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು’ ಎಂದು ಆಗ್ರಹಿಸಿದರು.

ಬಸವನಕಟ್ಟೆ ರೈತರು, ‘ನಿಗದಿತ ಸಮಯಕ್ಕೆ ಕಬ್ಬು ಕಾರ್ಖಾನೆ ತಲುಪಿದರಷ್ಟೇ ಬೆಲೆ. ಇಲ್ಲದಿದ್ದರೆ, ಕಬ್ಬು ಹಾಳಾಗುತ್ತದೆ. ರೈತರನ್ನು ಉಳಿಸಲು ಚಾಲಕರು ಕಷ್ಟಪಡುತ್ತಿದ್ದಾರೆ. ಇಂಥ ಚಾಲಕರ ಚಾಲನೆಗೆ ಅನುಕೂಲವಾಗುವ ರೀತಿಯಲ್ಲಿ ಉತ್ತಮ ರಸ್ತೆ ಮಾಡಿಕೊಡಬೇಕು’ ಎಂದು ಆಗ್ರಹಿಸುತ್ತಿದ್ದಾರೆ.

ಸಾರ್ವಜನಿಕರ ಜೀವಕ್ಕೂ ಆಪತ್ತು

ಗ್ರಾಮಗಳ ರಸ್ತೆಗಳು ಪ್ರಮುಖ ರಸ್ತೆಗಳು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್–ಲಾರಿಗಳು ಹೆಚ್ಚಾಗಿ ಓಡಾಡುತ್ತಿವೆ. ಕಬ್ಬಿನ ಪೆಂಡಿಗಳನ್ನು ಸರಿಯಾಗಿ ಕಟ್ಟದಿದ್ದರಿಂದ ರಸ್ತೆಯಲ್ಲೆಲ್ಲ ಬೀಳುತ್ತಿವೆ. ರಸ್ತೆಗೆ ಬಿದ್ದ ಕಬ್ಬಿನಿಂದ ದ್ವಿಚಕ್ರ ವಾಹನಗಳು ಉರುಳಿ ಬಿದ್ದು ಅಪಘಾತಗಳಾಗುತ್ತಿದ್ದು ಈ ಬಗ್ಗೆಯೂ ಪ್ರಕರಣಗಳು ದಾಖಲಾಗುತ್ತಿವೆ. ತಡಸ– ಹಾನಗಲ್ ರಾಜ್ಯ ಹೆದ್ದಾರಿಯ ದುಂಡಶಿಯ ಭರಮಪ್ಪ ವಾಗಣ್ಣನವರ ಅವರ ಜಮೀನಿನ ಬಳಿ ಡಿ. 7ರಂದು ಅಪಘಾತವಾಗಿದೆ. ರಸ್ತೆಯಲ್ಲಿ ಹೊರಟಿದ್ದ ಕಬ್ಬು ಸಾಗಣೆ ಟ್ರ್ಯಾಕ್ಟರ್ನಿಂದ ಪೆಂಡಿಯೊಂದು ಕೆಳಗೆ ಬಿದ್ದಿದ್ದರಿಂದ ಅದೇ ಸ್ಥಳದಲ್ಲಿ ದ್ವಿಚಕ್ರ ವಾಹನ ಉರುಳಿಬಿದ್ದಿದೆ. ಬೈಕ್ನಲ್ಲಿದ್ದ ಚನ್ನವೀರಪ್ಪ ಹಾವೇರಿ ಹಾಗೂ ಶಾಂತಾ ಚನ್ನವೀರಪ್ಪ ಹಾವೇರಿ ಎಂಬುವವರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ಆರೋಪದಡಿ ಟ್ರ್ಯಾಕ್ಟರ್ ಚಾಲಕರಾದ ಮಹಾರಾಷ್ಟ್ರದ ವಿಠ್ಠಲ ಬಾಬು ಬಡೆ ಎಂಬುವವರ ವಿರುದ್ಧ ದೂರು ದಾಖಲಾಗಿದೆ.

ಹೊರ ಜಿಲ್ಲೆಗೂ ಕಬ್ಬು

ಹಾವೇರಿ ಜಿಲ್ಲೆಯ ಸಂಗೂರು ಹಾಗೂ ಬೈರನಪಾದದಲ್ಲಿರುವ ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿಯ ಸಕ್ಕರೆ ಕಾರ್ಖಾನೆ ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿ ಬಳಿಯ ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್ ಕಂಪನಿಯ ಕಾರ್ಖಾನೆಗೆ ಕಬ್ಬು ಸಾಗಣೆ ಆಗುತ್ತಿದೆ. ಇದರ ಜೊತೆಯಲ್ಲಿ ದಾವಣಗೇರಿ ವಿಜಯನಗರ ಬಳ್ಳಾರಿ ಧಾರವಾಡ ಬೆಳಗಾವಿ ಜಿಲ್ಲೆಯಲ್ಲಿರುವ ಕಾರ್ಖಾನೆಗೂ ಹಾವೇರಿ ಜಿಲ್ಲೆಯಿಂದ ಕಬ್ಬು ಸಾಗಿಸಲಾಗುತ್ತಿದೆ. ‘ಹೊಲದಲ್ಲಿ ಕಟಾವು ಮಾಡಿದ ಕಬ್ಬನ್ನು ನೆರೆ ಜಿಲ್ಲೆಗಳಿಗೆ ಸಾಗಿಸುವುದು ದೊಡ್ಡ ಸವಾಲಿನ ಕೆಲಸ. ರಸ್ತೆಗಳು ಉತ್ತಮವಾಗಿದ್ದರೆ ಮಾತ್ರ ಕಬ್ಬು ಕಾರ್ಖಾನೆ ತಲುಪುತ್ತದೆ. ಇಲ್ಲದಿದ್ದರೆ ಮಾರ್ಗಮಧ್ಯೆಯೇ ಟ್ರ್ಯಾಕ್ಟರ್ ಉರುಳಿಬಿದ್ದು ಹಾನಿ ಹಾಗೂ ನಷ್ಟ ಹೆಚ್ಚಾಗುತ್ತದೆ’ ಎಂದು ಚಾಲಕ ವಿನಾಯಕ ಹೇಳಿದರು.

ಕಬ್ಬು ಸಾಗಣೆ ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಪೊಲೀಸರು ನಿರಂತರವಾಗಿ ಗಸ್ತು ತಿರುಗಬೇಕು. ಕಬ್ಬು ಸಾಗಣೆ ವಾಹನ ಹಾಗೂ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಬೇಕು
ಮಂಜುನಾಥ್ ಕೆ., ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.