ತಡಸ: ಸಹ್ಯಾದ್ರಿ ಪರ್ವತ ಶ್ರೇಣಿಯ ಸುಂದರವಾದ ದಟ್ಟ ಅರಣ್ಯದ ಮಧ್ಯೆ ತಾಯಮ್ಮ ದೇವಿಯ ಜಾತ್ರಾ ರಥೋತ್ಸವ ಸಾವಿರಾರು ಭಕ್ತರ ನಡುವೆ ಮಂಗಳವಾರ ಜರುಗಿತು. ಪ್ರತಿ ವರ್ಷ ದೀಪಾವಳಿಯ ನಂತರ ರಥೋತ್ಸವ ಜರಗುತ್ತದೆ.

ತಾಯಮ್ಮ ದೇವಿಯ ದೇವಿಯ ದೇವಸ್ಥಾನದ ಮುಂಭಾಗದಿಂದ ಹೊರಟ ರಥೋತ್ಸವವು ಸಾವಿರಾರು ಭಕ್ತರ ಡೊಳ್ಳು ಕುಣಿತ ಝಾಂಜ ಮೇಳ ಮುಂತಾದ ವಾದ್ಯಗಳ ಮೂಲಕ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯ ತನಕ ತೇರನ್ನು ತದನಂತರ ಮರಳಿ ಅದೇ ಮಾರ್ಗವಾಗಿ ತಂದು ದೇವಸ್ಥಾನದ ಹತ್ತಿರ ತಲುಪಿತು.

ಜೋಡೆತ್ತು ಚಕ್ಕಡಿ ಮೂಲಕ ಬಂದ ಭಕ್ತರು:

ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜೋಡೆತ್ತು ಚಕ್ಕಡಿ ಕಟ್ಟಿಕೊಂಡು ಎತ್ತುಗಳನ್ನು ಶೃಂಗರಿಸಿ ಬೆಳಗ್ಗೆಯಿಂದ ಬರತೊಡಗಿದರು ವಿಶೇಷವಾಗಿ ಒಂದು ಕುದುರೆ ಒಂದು ಎತ್ತು ಚಕ್ಕಡಿಯನ್ನು ಹೂಡಿಕೊಂಡು ಬಂದಿರುವುದು ಈ ಒಂದು ಜಾತ್ರೆ ಮೆರುಗನ್ನು ಹೆಚ್ಚಿಸಿತು.

ಸಹ ಪಂಕ್ತಿ ಭೋಜನ ಸವಿದ ಭಕ್ತರು :

ಮನೆಯಲ್ಲಿ ವಿವಿಧ ಬಗ್ಗೆ ಅಡುಗೆಯನ್ನು ತಯಾರಿಸಿಕೊಂಡು ಬಂದು ತಮ್ಮ ಕುಟುಂಬ ಹಾಗೂ ಸಂಬಂಧಿಕರೊಡನೆ ಸಮೃದ್ಧವಾಗಿ ಬೆಳೆದಿರುವ ಉತ್ತರ ಕನ್ನಡ ದಟ್ಟ ಅರಣ್ಯದಲ್ಲಿ ಪರಿಸರದ ಮಧ್ಯೆ ಊಟವನ್ನು ಸವಿದ ಭಕ್ತರು.

ದೇವಸ್ಥಾನದಲ್ಲಿ ತೊಟ್ಟಿಲನ್ನು ಕಟ್ಟಿ ಹರಕೆ ತೀರಿಸಲು ಭಕ್ತಿ ಸಮರ್ಪಣೆ ಜೊತೆಗೆ ಹರೇಕೆಗಾಗಿ ಬೀಗ ಹಾಕಿ ಉಡಿ ತುಂಬುವ ದೀರ್ಘ ದಂಡ ನಮಸ್ಕಾರ ಹಲವಾರು ಭಕ್ತರು ಕಾಲ್ನಡಿಗೆ ಮುಖಾಂತರ ಬಂದು ತಾಯಿಯ ದರ್ಶನಕ್ಕೆ ಪಾತ್ರರಾದರು.

ಹುಬ್ಬಳ್ಳಿ ಶಿರಿಸಿ ಮಾರ್ಗ ಬದಲಾಯಿಸಿ ಸಂಚರಿಸಿದ ವಾಹನಗಳು: ಹುಬ್ಬಳ್ಳಿ–ಶಿರಸಿ ಮಾರ್ಗವಾಗಿ ರಾಜ್ಯ ಹೆದ್ದಾರಿಗೆ ಓಡಾಡುವ ವಾಹನಗಳು ಇಂದು ಮಾರ್ಗ ಬದಲಾಯಿಸಿ ತಡಸ ಗ್ರಾಮದಿಂದ ಅಡವಿಸೋಮಪುರ, ಕುನ್ನೂರು ಮಮದಾಪುರ, ತರ್ಲಗಟ್ಟ , ಜೇನಮುರಿ ಮಾರ್ಗವಾಗಿ ಮುಂಡಗೋಡ ಸುಮಾರು 3 ಗಂಟೆಗಳ ಕಾಲ ಈ ಮಾರ್ಗದಲ್ಲಿ ಸಂಚರಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.