ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ: ಮೆಣಸಿನಕಾಯಿ ಚಿತ್ರವಿರುವ ಅಂಚೆ ಲಕೋಟೆ ಬಿಡುಗಡೆ ಸೆ.6ಕ್ಕೆ

Last Updated 1 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬ್ಯಾಡಗಿ: ಮೆಣಸಿನಕಾಯಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಪ್ರಚಾರ ದೊರಕಿಸಿಕೊಡುವ ನಿಟ್ಟಿನಲ್ಲಿ ‘ಬ್ಯಾಡಗಿ ಮೆಣಸಿನಕಾಯಿ‘ ಚಿತ್ರವಿರುವ ಅಂಚೆ ಲಕೋಟೆಯನ್ನು ಸೆ.6ರಂದು ಅಂಚೆ ಇಲಾಖೆ ಬಿಡುಗಡೆ ಮಾಡಲಿದೆ.

ಮಾದರಿ ಅಂಚೆ ಲಕೋಟೆ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂಚೆ ಲಕೋಟೆಯ ವಿನ್ಯಾಸವನ್ನು ಗುರುವಾರ ಅಂತಿಮಗೊಳಿಸಲಾಗುತ್ತದೆ ಎಂದು ಅಂಚೆ ಇಲಾಖೆ ತಿಳಿಸಿದೆ.

ಈಚೆಗೆ ಅಂಚೆ ಇಲಾಖೆ ಎಪಿಎಂಸಿ ಸಭಾಭವನದಲ್ಲಿ ವರ್ತಕರ ಹಾಗೂ ಎಪಿಎಂಸಿ ಸದಸ್ಯರ ಪೂರ್ವಭಾವಿ ಸಭೆ ನಡೆಸಿ, ಮೆಣಸಿನಕಾಯಿ ಸೇರಿದಂತೆ ಸುಮಾರು 41 ಭೌಗೋಳಿಕ ಹೆಗ್ಗುರುತುಗಳು ಅಂಚೆ ಲಕೋಟೆಯ ಮೇಲೆ ಮುದ್ರಿಸುವ ಕುರಿತು ಮಾಹಿತಿ ನೀಡಲಾಗಿತ್ತು.

ಕೇಂದ್ರ ಸರ್ಕಾರದ ಜಿಐ ಮಾನ್ಯತೆಗೆ ಒಳಪಟ್ಟ ಉತ್ಪನ್ನಗಳನ್ನು ಚಿತ್ರ ಸಹಿತವಾಗಿ ದೇಶ ವಿದೇಶಗಳಿಗೆ ಪರಿಚಯಿಸುವ ಉದ್ದೇಶದಿಂದ ಅಂಚೆ ಇಲಾಖೆ ಅಂಚೆ ಲಕೋಟೆಯನ್ನು ಹೊರತರಲು ನಿರ್ಧರಿಸಿದೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜತಾಂತ್ರಿಕ ಪತ್ರ ವ್ಯವಹಾರಗಳಿಗೆ ಕೆಲ ಅಂಚೆ ಕವರ್‌ಗಳನ್ನು ಬಳಸಲಾಗುತ್ತದೆ ಎನ್ನಲಾಗಿದೆ. ಅಂಚೆ ಲಕೋಟೆಯ ಮುಂಬದಿ ಹಾಗೂ ಹಿಂಬದಿಯಲ್ಲಿ ಮೆಣಸಿನಕಾಯಿ ತಲಾ ಎರಡು ಚಿತ್ರಗಳು, ಅವುಗಳ ಕಿರು ಮಾಹಿತಿ ಹಾಗೂ ಮಹತ್ವ ಒಳಗೊಂಡ ಟಿಪ್ಪಣಿ ಇರುತ್ತದೆ ಎಂದು ಅಂಚೆ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT