ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ತರಗತಿ ಆರಂಭಿಸಲು ಆಗ್ರಹ

Last Updated 16 ಜನವರಿ 2021, 3:24 IST
ಅಕ್ಷರ ಗಾತ್ರ

ಹಾವೇರಿ: ಪದವಿ ವಿದ್ಯಾರ್ಥಿನಿಯರ ತರಗತಿಗಳನ್ನು ಪ್ರಾರಂಭ ಮಾಡದಿರುವುದನ್ನು ಖಂಡಿಸಿಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಯಿತು.

ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕು ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಶಾಸಕ ನೆಹರು ಓಲೇಕಾರ ಅವರಿಗೆ ಮನವಿ ಸಲ್ಲಿಸಿದರು.

ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ, ‘ರಾಜ್ಯದಾದ್ಯಂತ ಜ.1ರಿಂದ ತರಗತಿಗಳು ಪ್ರಾರಂಭವಾಗಿದ್ದು, ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಹಾವೇರಿಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 15 ದಿನ ಕಳೆದರೂ ಇನ್ನೂ ತರಗತಿಗಳು ಪ್ರಾರಂಭವಾಗಿಲ್ಲ. ಲಾಕ್‌ಡೌನ್‌ ಇದ್ದಾಗ ಕೂಡ ಯಾವುದೇ ಆನ್‌ಲೈನ್‌ ತರಗತಿಗಳನ್ನು ನಡೆಸದೆ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ನೇತ್ರಾವತಿ ಬಿ.ಎಂ. ಮಾತಾನಾಡಿ, ‘ವಿದ್ಯಾರ್ಥಿನಿಯರು ನಿತ್ಯವೂ ಕಾಲೇಜು ಮತ್ತು ಮನೆಗೆ ಅಲೆದಾಡುತ್ತಿದ್ದು, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಪ್ರಾಚಾರ್ಯರಿಗೆ ಮನವಿ ಮಾಡಿದರೆ ಮೇಲಧಿಕಾರಿಗಳಿಗೆ, ಶಾಸಕರಿಗೆ ಪತ್ರ ಬರೆದಿದ್ದೇವೆ ಎಂದು ಕೈಚೆಲ್ಲಿದ್ದು, ತರಗತಿಗಳನ್ನು ಪ್ರಾರಂಭ ಮಾಡಲು ಮುಂದಾಗುತ್ತಿಲ್ಲ’ ಎಂದರು.

ವಿಶ್ವವಿದ್ಯಾಲಯದ ಸುತ್ತೋಲೆಯ ಪ್ರಕಾರ 1,2 ಮತ್ತು 5ನೇ ಸೆಮಿಸ್ಟರ್ ಗೆ ವಿದ್ಯಾರ್ಥಿನಿಯರು ಜ.18ರಿಂದ ಜ.30ರವರೆಗೆ ಪರೀಕ್ಷಾ ಅರ್ಜಿಗಳನ್ನು ಭರ್ತಿ ಮಾಡಬೇಕೆಂದು ಆದೇಶ ಹೊರಡಿಸಿದ್ದು, ವಿದ್ಯಾರ್ಥಿನಿಯರು ಆತಂಕ ಪಡುವಂತಾಗಿದೆ. ಅತಿಥಿ ಶಿಕ್ಷಕರನ್ನು ನೇಮಿಸದೆ, ಪಾಠ ಮಾಡದೆ, ಪುಸ್ತಕ ಮುದ್ರಿಸದೆ, ವಿದ್ಯಾರ್ಥಿನಿಯರ ಜೀವನದ ಜೊತೆಗೆ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರ ಚೆಲ್ಲಾಟವಾಡುತ್ತಿದೆ’ ಎಂದು ದೂರಿದರು.

ಶಾಸಕ ನೆಹರು ಓಲೇಕಾರ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ‘ತರಗತಿಗಳನ್ನು ಪ್ರಾರಂಭ ಮಾಡಲು ಅತಿಥಿ ಶಿಕ್ಷಕರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ನಾಳೆಯಿಂದ ತರಗತಿಗೆ ಬರಲು ಮನವಿ ಮಾಡಿದರು. ಕಾಯಂ ಉಪನ್ಯಾಸಕರನ್ನು ನೇಮಕ ಮಾಡಲು ಸರ್ಕಾರಕ್ಕೆ ಪತ್ರ ಬರೆದು ಸಚಿವರೊಂದಿಗೆ ಚರ್ಚಿಸುವೆ’ ಎಂದು ಭರವಸೆ ನೀಡಿದರು.

ಕಾವ್ಯ ಹಡಗಲಿ, ಸೌಂದರ್ಯ ಕೆ.ಕೆ, ಗಾಯತ್ರಿ ಎಸ್.ಎಚ್, ಸುಧಾ ಎಫ್.ಡಿ, ವಿದ್ಯಾ ಎಸ್.ವಿ, ನೀಲಮ್ಮ ವಿ.ಎಂ, ಪ್ರಿಯಾಂಕಾ ಕೆ.ವಿ, ಸುಮಲತಾ ಬಿ.ಕೆ, ಪೂರ್ಣಿಮಾ ಯು.ಎಂ, ಪೂಜಾ ಎಲ್.ಡಿ, ಸುಮೀನಾ ಎಸ್.ಎಸ್, ಸೀಮಾ ಎಮ್.ಎನ್, ಉಮೀಶಾಲಮ್ ಐ.ಎಸ್, ಮಲಾನ ಎಂ.ಎಂ, ರಾಜೇಶ್ವರಿ ರೆಡ್ಡಿ , ಅಕ್ಷತಾ ಬಿ.ಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT