ಶನಿವಾರ, ಮೇ 30, 2020
27 °C

ಕಳ್ಳತನ ಪ್ರಕರಣ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಈಚೆಗೆ ನಡೆದ ಎರಡು ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ, ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ₹5.18 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಸಂತೋಷ ವಿಜಯಕುಮಾರ ತಿಳಿಸಿದರು. 

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ವ್ಯಾಪಾರಿಗಳಾದ ಚಿತ್ರಗಿ ಪ್ಲಾಟ್‌ ಭದ್ರಾಪುರ ಗ್ರಾಮದ ಉಮರ್‌ ಫಾರೂಕ್‌ ಮತ್ತು ಪಾಳಾ ಗ್ರಾಮದ ಮಹಮದ್‌ ಜಾಫರ್‌ ಖಾನ್‌ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಹಾವೇರಿ ನಗರದಲ್ಲಿ ಜನವರಿ 29ರಂದು ಶ್ರೀಕಂಠೇಶ್ವರ ಗೃಹೋಪಯೋಗಿ ಮಳಿಗೆಯ ಕಿಟಕಿ ಮುರಿದು ಒಟ್ಟು ₹4.59 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಮತ್ತು ನಗದನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು. 

ಆರೋಪಿಗಳಿಂದ ಎರಡು ಟಿ.ವಿ., 8 ಮೊಬೈಲ್‌ ಫೋನ್‌, 1 ಮೈಕ್ರೋವೇವ್‌ ಮತ್ತು ಇತರೆ ಗೃಹೋಪಯೋಗಿ ಸಾಮಾನುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಹಾನಗಲ್‌ ನಗರದಲ್ಲಿ ಕಳ್ಳತನ ಮಾಡಿದ್ದ ಬೈಕ್‌ ಅನ್ನೂ ಜಪ್ತಿ ಮಾಡಲಾಗಿದೆ. ಇನ್ನೂ ಎರಡು ಟಿ.ವಿ, 5 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡುವ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಹೇಳಿದರು. 

ಸಿಪಿಐ ಪ್ರಭಾವತಿ ಸಿ.ಶೇತಸನದಿ, ಎಸ್‌ಐ ಪಿ.ಜಿ.ನಂದಿ, ಪ್ರೊಬೇಷನರಿ ಎಸ್‌ಐ ಚಂದನ್‌, ಎಎಸ್‌ಐ ಎಸ್‌.ಡಿ. ಸಾಗರ ಮತ್ತು ಸಿಬ್ಬಂದಿ ಹಾಜರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು