ಹಾವೇರಿ: ಜಿಲ್ಲೆಯ ಹಾವೇರಿ, ರಾಣೆಬೆನ್ನೂರು ಹಾಗೂ ಹಲವು ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುತ್ತಿರುವ ತುಂಗಭದ್ರಾ ನದಿಯು ಇತ್ತೀಚಿನ ದಿನಗಳಲ್ಲಿ ಕಲುಷಿತವಾಗುತ್ತಿರುವ ಸಂಗತಿ ಪತ್ತೆಯಾಗಿದೆ. ತುಂಗಭದ್ರಾ ನದಿಯ 14 ಪಾಯಿಂಟ್ಗಳ ನೀರಿನ ಪರೀಕ್ಷೆ ನಡೆಸಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಪಿಸಿಬಿ) ಅಧಿಕಾರಿಗಳು, ‘ನೇರವಾಗಿ ಕುಡಿಯಲು ಹಾಗೂ ಬಳಸಲು ನದಿ ನೀರು ಯೋಗ್ಯವಲ್ಲ’ ಎಂದು ವರದಿ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಿಂದ ಹಾವೇರಿ ಜಿಲ್ಲೆ ಮಾರ್ಗವಾಗಿ ವಿಜಯನಗರ ಜಿಲ್ಲೆಯ ಮೈಲಾರದವರೆಗೂ ಹರಿಯುತ್ತಿರುವ ತುಂಗಭದ್ರಾ ನದಿಯ 14 ಪಾಯಿಂಟ್ಗಳ ನೀರು ಸಂಗ್ರಹಿಸಿ ಪ್ರತಿ ತಿಂಗಳು ಪರೀಕ್ಷೆ ನಡೆಸಲಾಗುತ್ತಿದೆ. ಸೆಪ್ಟೆಂಬರ್ ತಿಂಗಳ ಪರೀಕ್ಷಾ ವರದಿ ಬಹಿರಂಗಗೊಂಡಿದ್ದು, ಈ ಮೂಲಕ ತುಂಗಭದ್ರಾ ನದಿಯ ನೀರು ನೇರವಾಗಿ ಕುಡಿಯಲು ಸುರಕ್ಷಿತವಲ್ಲ ಎಂಬುದು ಗೊತ್ತಾಗಿದೆ.

ಹಾವೇರಿ ಹಾಗೂ ರಾಣೆಬೆನ್ನೂರು ಪಟ್ಟಣದ ಜನರಿಗೆ ತುಂಗಭದ್ರಾ ನದಿಯಿಂದಲೇ ಕುಡಿಯಲು ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ತುಂಗಭದ್ರಾ ನದಿ ನೀರಿನ ಗುಣಮಟ್ಟದ ವರದಿ ಬಂದಿರುವುದರಿಂದ, ಎರಡೂ ನಗರಗಳ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ‘ಸಂಸ್ಕರಣೆ ಮಾಡಿಯೇ ಜನರಿಗೆ ಕುಡಿಯುವ ನೀರು ನೀಡಬೇಕು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಅದರಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ನೀರಿನ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ಜನರು ಒತ್ತಾಯಿಸುತ್ತಿದ್ದಾರೆ.

ಕಂಚಾರಗಟ್ಟಿ ಮೂಲಕ ಸರಬರಾಜು: ತುಂಗಭದ್ರಾ ನದಿ ಹರಿಯುತ್ತಿರುವ ಕಂಚಾರಗಟ್ಟಿ ಬಳಿಯಿಂದ ಹಾವೇರಿ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರ ಜೊತೆಯಲ್ಲಿ ಹೆಗ್ಗೇರಿ ಕೆರೆಯ ನೀರನ್ನೂ ಜನರ ಬಳಕೆಗೆ ಮೀಸಲಿಡಲಾಗಿದೆ. ನಗರಕ್ಕೆ ಕುಡಿಯಲು ಬರುವ ಬಹುತೇಕ ನೀರು, ತುಂಗಭದ್ರಾ ನದಿಯಿಂದ ಸರಬರಾಜು ಆಗುತ್ತಿದೆ.

ನದಿಯಿಂದ ಬರುವ ನೀರನ್ನು ಜಿಲ್ಲಾ ಕ್ರೀಡಾಂಗಣ ಬಳಿ ಇರುವ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ. ಸಂಸ್ಕರಣಾ ಘಟಕದಲ್ಲೂ ಆಗಾಗ ಸಮಸ್ಯೆಗಳು ಕಾಣಿಸುತ್ತಿದ್ದು, ಕೆಲವು ಬಾರಿ ಸಂಸ್ಕರಣೆ ನಡೆಸದೆಯೇ ನೀರು ಸರಬರಾಜು ಮಾಡುತ್ತಿರುವ ಆರೋಪಗಳೂ ಇವೆ.

ಸಂಸ್ಕರಣಾ ಘಟಕವನ್ನು ನಗರಸಭೆ ಅಧಿಕಾರಿಗಳು ನಿರ್ವಹಣೆ ಮಾಡುತ್ತಿದ್ದಾರೆ. ಸಂಸ್ಕರಣೆ ಕೆಲಸದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕಲುಷಿತ ನೀರು ಜನರ ಮನೆ ತಲುಪಲಿದೆ. ಇದರಿಂದಾಗಿ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದಾಗಿ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ನಗರದಲ್ಲಿ ಈಗ 10ರಿಂದ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ಗುಣಮಟ್ಟ ನೋಡಿದರೆ, ಕುಡಿಯಲು ಹೆದರಿಕೆ ಆಗುತ್ತದೆ. ಸಂಸ್ಕರಣೆ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಹುಟ್ಟುತ್ತಿದೆ’ ಎಂದು ಶಿವಬಸವನಗರದ ನಿವಾಸಿ ಮಲ್ಲಿಕಾರ್ಜುನ ಹೇಳಿದರು.

‘ತುಂಗಭದ್ರಾ ನದಿ ನೀರು ಸಹ ನೇರವಾಗಿ ಕುಡಿಯಲು ಯೋಗ್ಯವಲ್ಲವೆಂದು ವರದಿ ಬಂದಿದೆ. ಇದನ್ನು ನೋಡಿದರೆ, ಮುಂದಿನ ದಿನಗಳಲ್ಲಿ ನೀರು ಕುಡಿಯುವುದು ಹೇಗೆ ? ಎಂಬ ಭಯ ಶುರುವಾಗಿದೆ. ಹಾವೇರಿ ನಗರಕ್ಕೆ ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕ ಆಗಾಗ ದುರಸ್ತಿಗೆ ಬರುತ್ತದೆ. ಆಲಂ ಇದ್ದರೆ, ಬ್ಲಿಚಿಂಗ್ ಪೌಡರ್ ಇರುವುದಿಲ್ಲ, ಇವೆರಡು ಇದ್ದರೆ ಕ್ಲೋರಿನ ಯಂತ್ರ ಸರಿ ಇರುವುದಿಲ್ಲ. ಹೀಗಾಗಿ, ನಗರಸಭೆ ಯಾವ ರೀತಿ ನೀರು ಸರಬರಾಜು ಮಾಡುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ತಿಳಿಸಿದರು.

ರಾಣೆಬೆನ್ನೂರು ನಗರಕ್ಕೂ ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಹಾವೇರಿಯಲ್ಲಿಯೂ ನಿರಂತರ ನೀರು ಯೋಜನೆ ಮೂಲಕ ಮನೆಗಳಿಗೆ ತುಂಗಭದ್ರಾ ನೀರು ಕೊಡುವ ಕೆಲಸ ನಡೆಯುತ್ತಿದೆ.

‘ಜಾನುವಾರುಗಳಿಗೂ ಇದೇ ನೀರು ಆಸರೆ’

ಜಿಲ್ಲೆಯ ಜನರಿಗೆ ಮಾತ್ರವಲ್ಲದೇ ಜಾನುವಾರುಗಳಿಗೂ ತುಂಗಭದ್ರಾ ನದಿ ನೀರೇ ಆಸರೆಯಾಗಿದೆ. ಹಾವೇರಿ ರಾಣೆಬೆನ್ನೂರು ಬ್ಯಾಡಗಿ ಹಿರೇಕೆರೂರು ತಾಲ್ಲೂಕಿನ ಹಲವು ಗ್ರಾಮಗಳು ನದಿ ಪಾತ್ರದಲ್ಲಿವೆ. ಅದೇ ಗ್ರಾಮದ ಜನರು ಜಾನುವಾರುಗಳಿಗೆ ನದಿಯಲ್ಲಿ ನೀರು ಕುಡಿಸುತ್ತಿದ್ದಾರೆ. ವರದಿಯಿಂದಾಗಿ ಜಾನುವಾರುಗಳ ಮಾಲೀಕರಲ್ಲೂ ಆತಂಕ ಶುರುವಾಗಿದೆ.

ತುಂಗಭದ್ರಾ ನದಿ ನೀರನ್ನು ಪ್ರತಿ ತಿಂಗಳು ಪರೀಕ್ಷೆ ಮಾಡುತ್ತಿದ್ದೇವೆ. ನೇರವಾಗಿ ಕುಡಿಯಲು ಯೋಗ್ಯವಲ್ಲವೆಂಬುದು ಗೊತ್ತಾಗಿದೆ. ಸಂಸ್ಕರಣೆ ಮಾಡಿಯೇ ಜನರು ನೀರು ಕುಡಿಯುವುದು ಸುರಕ್ಷಿತ
-ರಾಜಶೇಖರ್ ಪುರಾಣಿಕ ಕೆಪಿಸಿಬಿ ಹಾವೇರಿಯ ಪರಿಸರ ಅಧಿಕಾರಿ (ಪ್ರಭಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.