ಹಾವೇರಿ: ‘ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರದಿಂದ ಪೂರೈಕೆಯಾಗಿರುವ ಗೊಬ್ಬರವನ್ನು ರಾಜ್ಯ ಸರ್ಕಾರ, ಕಾಳಸಂತೆಯಲ್ಲಿ ಯಾವುದಾದರೂ ಕಾರ್ಖಾನೆಗಳಿಗೆ ಕೊಡುತ್ತಿದೆಯಾ? ಎಂಬ ಬಗ್ಗೆ ಶಂಕೆ ಮೂಡಿದೆ’ ಎಂದು ಕೃಷಿ ಇಲಾಖೆಯ ಮಾಜಿ ಸಚಿವ, ಬಿಜೆಪಿ ಮುಖಂಡ ಬಿ.ಸಿ.ಪಾಟೀಲ ದೂರಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂಗಾರು ಆರಂಭದ ಬಗ್ಗೆ ಮಾರ್ಚ್– ಏಪ್ರಿಲ್ನಲ್ಲಿಯೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕೃಷಿಗೆ ಅಗತ್ಯವಿರುವ ಗೊಬ್ಬರವನ್ನು ರಾಜ್ಯ ಸರ್ಕಾರ ತರಿಸಿಕೊಳ್ಳಬೇಕಿತ್ತು. ಗೊಬ್ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಾಣುತ್ತಿದೆ’ ಎಂದರು.

‘ಯೂರಿಯಾ ಗೊಬ್ಬರದಿಂದ ಹಲವು ಉತ್ಪನ್ನಗಳನ್ನು ಸಿದ್ಧಪಡಿಸುವ ಕಾರ್ಖಾನೆಗಳು ರಾಜ್ಯದಲ್ಲಿವೆ. ಕೋಲಾರ ಸೇರಿದಂತೆ ಕೆಲ ಕಾರ್ಖಾನೆಗಳಿಗೆ ಕಾಳಸಂತೆಯಲ್ಲಿ ಯೂರಿಯಾ ಗೊಬ್ಬರ ಹೋಗುತ್ತಿತ್ತು. ನಾನು ಸಚಿವನಾದಾಗ, ಕಾರ್ಯಾಚರಣೆ ನಡೆಸಿ ಅದನ್ನು ಪತ್ತೆ ಮಾಡಿ ಕ್ರಮಕೈಗೊಂಡಿದೆ. ಅಂಥ ಜಾಲ ಇಂದು ಸಹ ಸಕ್ರಿಯವಾಗಿರುವ ಅನುಮಾನವಿದೆ’ ಎಂದು ಹೇಳಿದರು.

‘ಯಾವ ಪ್ರದೇಶದಲ್ಲಿ ಯಾವ ಬೆಳೆಯಿದೆ. ಎಷ್ಟು ಪ್ರಮಾಣದ ಗೊಬ್ಬರ ಪೂರೈಸಬೇಕೆಂಬ ಬಗ್ಗೆ ಕೃಷಿ ಸಚಿವರು, ಅಧಿಕಾರಿಗಳ ಸಭೆ ನಡೆಸಿ ನಿರ್ಣಯಿಸಬೇಕು. ಆದರೆ, ಇಂದಿನ ಕೃಷಿ ಸಚಿವರು ಗೊಬ್ಬರ ಪೂರೈಕೆಯ ಮೇಲ್ವಿಚಾರಣೆ ಮಾಡಿಲ್ಲ. ಇದೇ ಕಾರಣಕ್ಕೆ ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಅಭಾವ ಉಂಟಾಗಿದೆ. ರೈತರನ್ನು ಸಂಕಷ್ಟಕ್ಕೆ ದೂಡಿರುವ ಈ ಸರ್ಕಾರ, ಕೇವಲ ಸಾಧನಾ ಸಮಾವೇಶ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದೆ. ಇದೊಂದು ರೈತ ವಿರೋಧಿ ಸರ್ಕಾರ’ ಎಂದು ಕಿಡಿಕಾರಿದರು.

‘ರಾಜ್ಯದ ಹಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಬೆಳೆಯೂ ಹಾಳಾಗುವ ವಾತಾವರಣ ನಿರ್ಮಾಣವಾಗಿದೆ. ಕೆಲವು ಕಡೆಗಳಲ್ಲಿ ಬಿತ್ತನೆ ಸಹ ಮಾಡಿಲ್ಲ. ಅತೀವೃಷ್ಠಿಯಿಂದ ಆಗಿರುವ ಹಾನಿ ಬಗ್ಗೆ ಸರ್ಕಾರ ಕೂಡಲೇ ಸಮೀಕ್ಷೆ ನಡೆಸಬೇಕು. ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು’ ಎಂದೂ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.