ಶನಿವಾರ, ಜುಲೈ 24, 2021
21 °C
ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂತಸ

ವೀರೇಶ ಅಜೂರ ಬಿಜೆಪಿಗೆ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ‘ಮನೆ ಮಗ ಮನೆಗೆ ಮರಳಿದ್ದಾನೆ. ವೀರೇಶ ಅಜೂರ ನಮ್ಮ ಪಕ್ಷದವರೇ, ಬಿಜೆಪಿ ಅವಕಾಶವನ್ನು ನೀಡದಿದ್ದಕ್ಕೆ ಕಾಂಗ್ರೆಸ್ ಸೇರಿದ್ದರು. ಈಗ ಮರಳಿ ಬಿಜೆಪಿಗೆ ಬಂದಿದ್ದಾರೆ, ನಮ್ಮವರೇ ನಮ್ಮ ಮನೆಗೆ ಮರಳಿ ಬಂದಿರುವದು ಸಂತಸ ತಂದಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಅವರ ನಿವಾಸದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾಂಗ್ರೆಸ್ ಮುಖಂಡ ವಿರೇಶ ಆಜೂರ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ಆಜೂರ ಅವರು ಕ್ರೀಯಾಶೀಲರು, ನಾಡು, ಸಮುದಾಯಗಳ ಬಗ್ಗೆ ಅಭಿಮಾನ ಹೊಂದಿದ ವ್ಯಕ್ತಿ, ಯಾವುದೇ ಪಕ್ಷದಲ್ಲಿದ್ದರು ಒಳ್ಳೆಯ ಒಡನಾಟ ಹೊಂದಿದ್ದಾರೆ. ನನ್ನ ಹತ್ತಿರ ಬಂದು ಮಾತನಾಡಿದಾಗ ಸಂತೋಷದ ಜೊತೆ ಆಶ್ಚರ್ಯವೂ ಆಯಿತು, ಅವರು ಬಿಜೆಪಿಯ ಕಾರ್ಯಗಳನ್ನು ಮತ್ತು ಜನಬೆಂಬಲ ಹಾಗೂ ಬಿಜೆಪಿಯಲ್ಲಿ ನೆಮ್ಮದಿಯ ಕೆಲಸ ನೋಡಿ ಬಂದಿರುವದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.

‘ಅವರು ಒಪ್ಪಂದವಿಲ್ಲದೆ ಪಕ್ಷಕ್ಕೆ ಬಂದಿರುವುದು ಸಂತಸ ತಂದಿದೆ’ ಎಂದರು.

ಮುಖಂಡ ವಿರೇಶ ಅಜೂರ ಮಾತನಾಡಿ, ‘ಪಕ್ಷ ಸಂಘಟನೆಯ ಜೊತೆಗೆ ಜನ ಸೇವೆಗೆ ಬಸವರಾಜ ಬೊಮ್ಮಾಯಿ ಅವರ ಜೊತೆ ಕೈ ಜೊಡಿಸುತ್ತೇನೆ. ಅಭಿಮಾನದೊಂದಿಗೆ ಅವರ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತೆನೆ ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಯುವ ಮೋಚಾ ರಾಜ್ಯ ಸದಸ್ಯ ನರಹರಿ ಕಟ್ಟಿ, ಮುಖಂಡರಾದ ಉಮೇಶ ಅಂಗಡಿ, ಶಿವರಾಜ ರಾಯಣ್ಣವರ, ದೇವಣ್ಣ ಚಾಕಲಬ್ಬಿ, ಶಿವಪ್ರಸಾದ ಸುರಗಿಮಠ, ರೇಣುಕಗೌಡ ಪಾಟೀಲ, ಎಸ್.ಕೆ.ಅಕ್ಕಿ ‌, ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು