ರಾಣೆಬೆನ್ನೂರು: ‘ಸಮಾಜದಲ್ಲಿ ಮಹಿಳೆಯರನ್ನು ಸಮಾನತೆಯಿಂದ ನೋಡುವುದು ಅವಶ್ಯವಾಗಿದೆ. ಸಮಾಜದಲ್ಲಿ ಮಹಿಳೆಯರಿಗೆ ಗೌರವಯುತವಾದ ಸ್ಥಾನವಿದ್ದು, ಇಂದು ಎಲ್ಲ ರಂಗಗಳಲ್ಲಿಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆದರೆ ಸಮಾಜದಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಬುಧವಾರ ಇನ್ನರ್ವೀಲ್ ಸಂಸ್ಥೆ ರಾಣೆಬೆನ್ನೂರು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಏರ್ಪಡಿಸಿದ್ದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವ ಆರೇಂಜ್ ದಿ ವರ್ಲ್ಡ ಮಹಿಳಾ ಜಾಗೃತಿ ಪಥ ಸಂಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ, ‘ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಾಗಿಯೇ ವಿಶೇಷ ಕಾನೂನುಗಳಿವೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಬಗ್ಗೆ ದೂರುಗಳು ಬಂದಲ್ಲಿ ಕಾನೂನು ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ’ ಎಂದರು.

ಇನ್ನರ್ವೀಲ್ ಸಂಸ್ಥೆ ಅಧ್ಯಕ್ಷೆ ದೀಪಾಲಿ ಪುನೀತ, ವಿದ್ಯಾ ಕುರವತ್ತಿ, ಓಂ ಸಮೂಜ ಸಂಸ್ಥೆಯ ಅಧ್ಯಕ್ಷೆ ರುಕ್ಮಿಣಿ ಸಾವುಕಾರ, ಪೂರ್ಣಿಮಾ ಕೋಳಿವಾಡ, ಮೀನಾ ಗುಪ್ತಾ, ಭಾರತಿ ಜಂಬಿಗಿ ಮಾತನಾಡಿದರು.

ಮಂಗಳಗೌರಿ ಪೂಜಾರ, ಸಂಜನಾ ಕುರುವತ್ತಿ, ರೂಪಾ ಕಾಕಿ, ನಗರಸಭೆ ಮಾಜಿ ಅಧ್ಯಕ್ಷೆ ಚಂಪಾ ರಮೇಶ ಬಿಸಲಹಳ್ಳಿ, ಲಲಿತಾ ಸುರೇಶ, ಸುಮಾ ಹೊಟ್ಟಿಗೌಡ್ರ, ಸುಮಾ ಉಪ್ಪಿನ, ಜಿ.ಎಸ್.ರಾಮಚಂದ್ರ, ಜಿ.ಜಿ.ಹೊಟ್ಟಿಗೌಡ್ರ, ಪ್ರಕಾಶ ಬುರಡೀಕಟ್ಟಿ, ವೈದ್ಯ ಡಾ. ಬಸವರಾಜ ಕೇಲಗಾರ, ಶಿಲ್ಪಾ ಸಾವುಕಾರ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ, ಸುಮಾ ಪಾಟೀಲ, ವಸಂತಾ ಹುಲ್ಲತ್ತಿ, ವೈದ್ಯೆ ಡಾ.ವಿದ್ಯಾವಾಸುದೇವಮೂರ್ತಿ, ಪರಿಮಳಾ ಜಂಬಿಗಿ, ಡಾ.ಶೈಲಜಾ ನೆಲೋಗಲ್, ಪೂಜಾ ವಿರುಪಣ್ಣನವರ, ಸುಜಾತಾ, ರಾಜೇಶ್ವರಿ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕಿಯರು ಭಾಗವಹಿಸಿದ್ದರು.

ನಗರಠಾಣೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.