ಹಾವೇರಿ: ‘ಶಿಗ್ಗಾವಿ ಹಂಡ್ರೆಡ್ ಪರ್ಸೆಂಟ್ ಕಾಂಗ್ರೆಸ್ ಗೆಲ್ಲುವ ಕ್ಷೇತ್ರ. ಸಿಎಂ ವಿರುದ್ಧ ಸ್ಪರ್ಧೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪಷ್ಟಪಡಿಸಿದರು.
‘ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿನಯ ಕುಲಕರ್ಣಿ ಸ್ಪರ್ಧಿಸಲಿದ್ದಾರೆ’ ಎನ್ನುವ ಚರ್ಚೆಯ ಬೆನ್ನಲ್ಲೇ ಸವಣೂರಿನ ದೊಡ್ಡ ಹುಣಸೆಮಠಕ್ಕೆ ಸೋಮವಾರ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದರು.
‘ಹೈಕಮಾಂಡ್ ನನ್ನ ಜೊತೆ ಮಾತನಾಡಿದೆ. ಶಿಗ್ಗಾವಿಗೆ ನಾನು ಅರ್ಜಿ ಹಾಕಿಲ್ಲ. ಹೈಕಮಾಂಡ್ ಸ್ಪರ್ಧಿಸುವಂತೆ ಹೇಳಿದೆ. ಆದರೆ ನಾನು ಹೈಕಮಾಂಡ್ ಗೆ ಭರವಸೆ ಕೊಟ್ಟಿಲ್ಲ’ ಎಂದರು.
‘ಶಿಗ್ಗಾವಿ ಟಾರ್ಗೆಟ್ ಮಾಡ್ತಿಲ್ಲ. ಯಾವುದೇ ಕ್ಷೇತ್ರದಲ್ಲಿ ನಿಂತರೂ ರಾಜಕಾರಣ ಮಾಡುತ್ತೇವೆ. ಅಷ್ಟಕ್ಕೂ ನನಗೆ ನನ್ನ ಕ್ಷೇತ್ರವಿದೆ; ದುರಾಸೆ ಇಲ್ಲ’ ಎಂದು ಹೇಳಿದರು. ‘ನಾನು ಧಾರವಾಡಕ್ಕೆ ಹೋಗಲು ಸರ್ಕಾರ ಸಾಕಷ್ಟು ಅಡ್ಡಿಪಡಿಸಿದೆ. ಪ್ರಜಾಪ್ರಭುತ್ವದ ವ್ಯವಸ್ಥೆ ದಮನ ಆಗುತ್ತಿದೆ. ಇತ್ತೀಚಿನ ರಾಹುಲ್ ಗಾಂಧಿಯವರ ಮೇಲಿನ ಪ್ರಕರಣ ನೋಡಿದರೆ ರಾಜ ಕಾರಣ ಬೇಡವೆನಿಸುತ್ತಿದೆ. ಆದಾಗ್ಯೂ ನಮ್ಮ ಜನರಿಗಾಗಿ ರಾಜಕಾರಣ ಮಾಡಬೇಕಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.