ಬ್ಯಾಡಗಿ: ಬೇಳೆಯಲ್ಲಿ ಹುಳು ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡ ತಾಲ್ಲೂಕಿನ ತಡಸ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಎಂದಿನಂತೆ ಬಿಸಿಯೂಟ ಪುನರ್ ಆರಂಭಗೊಂಡಿದೆ.

ಅಲ್ಲಿಯ ಸಿಬ್ಬಂದಿ ನಿರ್ಲಕ್ಷ್ಯದಿಂದ ತಯಾರಿಸಿದ ಆಹಾರದಲ್ಲಿ ನುಸಿ ಮತ್ತು ಸಣ್ಣ ಹುಳುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಕ್ಕಳು ಊಟ ಮಾಡಲು ನಿರಾಕರಿಸಿದ್ದರು. ಈ ವಿಷಯವನ್ನು ಪಾಲಕರ ಮುಂದೆ ಹೇಳಿದಾಗ ಪಾಲಕರು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಎರಡು ದಿನ ಬಿಸಿಯೂಟವನ್ನು ಸ್ಥಗಿತಗೊಳಿಸಲಾಗಿತ್ತು.

ಮಂಗಳವಾರ ಮತ್ತು ಬುಧವಾರ ಶಾಲೆಗೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಇಒ ಕೆ.ಎಂ.ಮಲ್ಲಿಕಾರ್ಜುನ ಮತ್ತು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಸಂತ ಬೀರಣ್ಣನವರ ಪರಿಶೀಲನೆ ನಡೆಸಿದ್ದು, ಬೇರೆ ಬೇಳೆಯನ್ನು ಪೂರೈಸುವ ಭರವಸೆ ನೀಡಿದ್ದಾರೆ. ಸದ್ಯ ಖಾಸಗಿ ಅಂಗಡಿಯಲ್ಲಿ ಬೇಳೆ ಖರೀದಿಸಿ ಮಕ್ಕಳಿಗೆ ಊಟ ತಯಾರಿಸಬೇಕು. ಹುಳು ಹಿಡಿದ ಬೇಳೆಯನ್ನು ವಾಪಸ್ ನೀಡುವಂತೆ ಸೂಚಿಸಿರುವುದಾಗಿ ಅವರು ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು. ಬಿಸಿಯೂಟ ಸ್ಥಗಿತಗೊಳಿಸಲು ಅವಕಾಶವಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಮಕ್ಕಳಿಗೆ ಬಿಸಿಯೂಟ ನೀಡಬೇಕಾಗಿರುವುದನ್ನು ಸಿಬ್ಬಂದಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.