ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ನಿಯಮ ಉಲ್ಲಂಘಿಸಿ 35 ವಾಣಿಜ್ಯ ಸಂಕೀರ್ಣ ನಿರ್ಮಾಣ

ವಿಧಾನಪರಿಷತ್ ಸದಸ್ಯ ಸುನೀಲ ವಲ್ಯಾಪುರೆ ಕೇಳಿದ ಪ್ರಶ್ನೆಗೆ ನಗರಾಭಿವೃದ್ಧಿ ಇಲಾಖೆ ಉತ್ತರ
Last Updated 14 ಸೆಪ್ಟೆಂಬರ್ 2021, 12:11 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ 35 ವಾಣಿಜ್ಯ ಸಂಕೀರ್ಣಗಳನ್ನು ಮಹಾನಗರ ಪಾಲಿಕೆಯ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಉತ್ತರ ನೀಡಿದೆ.

ವಿಧಾನಪರಿಷತ್ ಸದಸ್ಯ ಸುನೀಲ ವಲ್ಯಾಪುರೆ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸದನದಲ್ಲಿ ಉತ್ತರ ನೀಡಿದ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ, ‘ಮೂರನೇ ಮಹಡಿಯವರೆಗೆ ಕಟ್ಟಡ ಕಟ್ಟಿದ 12 ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಒಟ್ಟು 35 ಕಟ್ಟಡಗಳು ನಿಯಮಗಳನ್ನು ಉಲ್ಲಂಘಿಸಿವೆ’ ಎಂದು ಉತ್ತರ ನೀಡಿದ್ದಾರೆ.

ನಗರದಲ್ಲಿ ಒಟ್ಟಾರೆ 155 ವಾಣಿಜ್ಯ ಸಂಕೀರ್ಣಗಳಿವೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ನಿಯಮ ಉಲ್ಲಂಘಿಸಿದ ಕಟ್ಟಡಗಳ ವಿವರ: ಐವಾನ್ ಇ ಶಾಹಿ ರಸ್ತೆಯ ಆರ್‌.ಕೆ. ಟವರ್ಸ್‌, ಎಂಎಸ್‌ಕೆ ಮಿಲ್ ರಸ್ತೆಯ ಶರಿಯಾ ಕಾಂಪ್ಲೆಕ್ಸ್, ಖೂಬಾ ಪ್ಲಾಟ್‌ನ ಕ್ಯಾನ್ಸರ್ ಆಸ್ಪತ್ರೆ, ದೇವತಾ ಆಸ್ಪತ್ರೆ, ಸರ್ದಾರ್‌ ವಲ್ಲಭಭಾಯಿ ವೃತ್ತದಲ್ಲಿರುವ ಇಂಟರನ್ಯಾಷನಲ್ ಕಾಂಪ್ಲೆಕ್ಸ್, ಕೋರ್ಟ್‌ ರಸ್ತೆಯ ಮೆಹತಾ ಕಾಂಪ್ಲೆಕ್ಸ್, ಅಸೆಂಬ್ಲಿ ಟವರ್ಸ್, ಸಾಯಿ ವಿನಾಯಕ ಸಂಧ್ಯಾಲಾಲ, ಅಲಹಾಬಾದ್ ಬ್ಯಾಂಕ್, ಹಳೆ ಜೇವರ್ಗಿ ರಸ್ತೆಯ ಕೃತಿಕ ಚೌಡ, ಮುಖ್ಯ ರಸ್ತೆಯ ನಿದಿಶಾ ಶೋರೂಂ, ಪಂಜಾಬ್ ಬೂಟ್ ಹೌಸ್, ಸೂಪರ್ ಮಾರ್ಕೆಟ್‌ನಲ್ಲಿರುವ ಚೀನಾ ಕಾಂಪ್ಲೆಕ್ಸ್, ಪಾಲ್ ಕಾಂಪ್ಲೆಕ್ಸ್, ಸಂಗಮ ಕಾಂಪ್ಲೆಕ್ಸ್, ಸೆಂಚುರಿ ಕಾಂಪ್ಲೆಕ್ಸ್, ಆಳಂದ ಮುಖ್ಯ ರಸ್ತೆಯ ನ್ಯಾಷನಲ್ ಕಾಂಪ್ಲೆಕ್ಸ್, ಸೂಪರ್ ಮಾರ್ಕೆಟ್‌ನ ಗಂಪಾ ಕಾಂಪ್ಲೆಕ್ಸ್, ಹುಮನಾಬಾದ್‌ ಬೇಸ್‌ನ ಬಿಯಾನಿ ಕಾಂಪ್ಲೆಕ್ಸ್, ಎಸ್‌.ಬಿ. ಟೆಂಪಲ್ ರಸ್ತೆಯ ಎನ್‌.ವಿ. ಕಾಂಪ್ಲೆಕ್ಸ್, ಫೈರ್‌ ಸ್ಟೇಶನ್‌ ಎದುರುಗಡೆಯ ಘನಶಾಮ ಕಾಂಪ್ಲೆಕ್ಸ್, ಬಾಳಿ ಕಾಂಪ್ಲೆಕ್ಸ್, ಎಸ್‌.ಬಿ. ಟೆಂಪಲ್ ರಸ್ತೆಯ ಅಶೋಕ ಕಾಂಪ್ಲೆಕ್ಸ್, ಲಾಲಗೇರಿ ಕ್ರಾಸ್‌ನ ದೇಶಮುಖ ಕಾಂಪ್ಲೆಕ್ಸ್, ಮಿಸ್ಬಾ ನಗರ ರಿಂಗ್ ರಸ್ತೆಯ ಐಕಾನ್ ಕಾಂಪ್ಲೆಕ್ಸ್, ಅಮುರ್ ಕಾಂಪ್ಲೆಕ್ಸ್, ಜಿಎನ್‌ಪಿ ಕಾಂಪ್ಲೆಕ್ಸ್, ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಇರುವ ದರ್ಶನ ಟವರ್ ಕಾಂ‍ಪ್ಲೆಕ್ಸ್, ಅಂಬಾರಾಯ ಗುತ್ತೇದಾರ ಕಾಂಪ್ಲೆಕ್ಸ್, ನ್ಯೂ ರಾಘವೇಂದ್ರ ಕಾಲೊನಿಯ ಮೋರೆ ಕಾಂಪ್ಲೆಕ್ಸ್, ಪಟೇಲ್ ಐಕಾನ್ ಪ್ಲಾಜಾ ಗಂಜ್, ಸೂಪರ್‌ ಮಾರ್ಕೆಟ್‌ನ ಘಂಟೋಜಿ ಕಾಂಪ್ಲೆಕ್ಸ್, ಗಾಂಧಿನಗರ ಗ್ಯಾಲಕ್ಸಿ ಕಾಂಪ್ಲೆಕ್ಸ್, ಬ್ರಹ್ಮಪುರದ ಧಂಗಾಪೂರ ಕಾಂಪ್ಲೆಕ್ಸ್, ಸೂಪರ್‌ ಮಾರ್ಕೆಟ್‌ನ ಕಾರ್ಪೊರೇಶನ್ ಕಾಂಪ್ಲೆಕ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT