ಸೋಮವಾರ, ಜುಲೈ 26, 2021
27 °C

ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ರೈಲ್ವೆ ಇಲಾಖೆಯ ಹೌಸ್ ಕೀಪಿಂಗ್ ವಿಭಾಗದ ಮೇಲ್ವಿಚಾರಕ ಬಸವರಾಜ ಆನಂದ ಅಮಟೆ (23) ಎಂಬುವರ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಪರಾರಿಯಾಗಿದ್ದಾರೆ. 

ನಗರದ ಐವಾನ್‌ ಇ ಶಾಹಿ ಅತಿಥಿ ಗೃಹದ ಬಳಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಕುತ್ತಿಗೆ ಹಾಗೂ ಮುಖಕ್ಕೆ ತೀವ್ರ ಗಾಯಗಳಾಗಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

30ಕ್ಕೆ ಮದುವೆ: ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರುವ ಬಸವರಾಜ ಅವರ ಮದುವೆ ಇದೇ 30ಕ್ಕೆ ನಿಶ್ಚಯವಾಗಿತ್ತು. ಅದಕ್ಕಾಗಿ ಜಿಲ್ಲಾಡಳಿತದಿಂದ ಅನುಮತಿಯನ್ನೂ ಪಡೆದಿದ್ದರು.‌ ಸಹೋದರನ ವಿವಾಹವೂ ಇದೇ ದಿನ ನೆರವೇರಬೇಕಿತ್ತು.

ರೈಲ್ವೆ ನಿಲ್ದಾಣದಲ್ಲಿ ಹೌಸ್ ಕೀಪಿಂಗ್‌ ಮೇಲ್ವಿಚಾರಣೆಯ ಕೆಲಸ ಮುಗಿಸಿ ಆರ್‌ಟಿಒ ಕಚೇರಿ ಬಳಿಯ ಜಗಜೀವನರಾಂ ನಗರದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಇವರನ್ನೇ ಕಾಯುತ್ತಿದ್ದ ಇಬ್ಬರು ಯುವಕರ ತಂಡ ಬೈಕ್‌ನಲ್ಲಿ ಬಸವರಾಜ ತೆರಳುವಾಗಲೇ ಮಾರಕಾಸ್ತ್ರಗಳಿಂದ ಮುಖಕ್ಕೆ ಹೊಡೆದರು. ಹೊಡೆದ ಏಟಿಗೆ ಬೈಕ್ ಸುಮಾರು 15 ಅಡಿ ಮುಂದಕ್ಕೆ ಹೋಗಿ ಬಿದ್ದರೆ, ಬಸವರಾಜ ಎಸಿಬಿ ಕಚೇರಿಯ ಎದುರಿನ ರಸ್ತೆಯ ಮೇಲೆ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು