ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಳಿ: ಬಾಳೆ ಬೆಳೆದು ಯಶ ಕಂಡ ಕಾಶಿರಾಯ

ಇಳಿವಯಸ್ಸಿನಲ್ಲೂ ಶ್ರಮಿಸುತ್ತಿರುವ ಉತ್ಸಾಹಿ ರೈತ
Last Updated 3 ಅಕ್ಟೋಬರ್ 2020, 5:01 IST
ಅಕ್ಷರ ಗಾತ್ರ

ಕಾಳಗಿ: ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರಾಗಿದ್ದ ತಾಲ್ಲೂಕಿನ ತೆಂಗಳಿ ಗ್ರಾಮದ ಕಾಶಿರಾಯ ನಾಯಿಕೋಡಿ ನಿವೃತ್ತರಾದ ಬಳಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಒಣ ಬೇಸಾಯಕ್ಕೆ ಒಲವು ತೋರಿರುವ ಅವರು ನಾಲ್ಕು ವರ್ಷಗಳಿಂದ ಬಾಳೆ ಬೆಳೆದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಳಿವಯಸ್ಸಿನಲ್ಲಿ ಉತ್ಸಾಹಿ ಕೃಷಿಕರಾಗಿದ್ದಾರೆ.

ಭೀಮೇಶ್ವರ ದೇವಸ್ಥಾನ ಸಮೀಪದ 4 ಎಕರೆ ಹೊಲಕ್ಕೆ 2ಕಿ.ಮೀ ದೂರದ ಹಳ್ಳದಿಂದ (ಬೆಣ್ಣೆತೊರಾ ನದಿ) ಪೈಪ್‌ಲೈನ್‌ ವ್ಯವಸ್ಥೆ ಮಾಡಿಕೊಂಡು ನೀರಾವರಿ ವ್ಯವಸ್ತೆ ಮಾಡಿಕೊಂಡಿದ್ದಾರೆ.

15 ಎಚ್‌ಪಿ ಚಿಕ್ಕ ಟ್ರ್ಯಾಕ್ಟರ್ ಮತ್ತು ಒಬ್ಬ ಆಳುಮಗನ ನೆರವಿನೊಂದಿಗೆ ಹೆಂಡೆಗೊಬ್ಬರ, ಗೋಮೂತ್ರ, ಕೋಳಿ ಮಲ, ಕುರಿ ಹಿಕ್ಕಿ, ಬೇವಿನ ಹಿಂಡಿ ಹೊಲಕ್ಕೆ ಹಾಕಿ ಅವರು
ಮಣ್ಣು ಹದಗೊಳಿಸಿದ್ದಾರೆ.

ತೋಟಗಾರಿಕೆ ಇಲಾಖೆ ನೆರವಿನೊಂದಿಗೆ 1.5ಎಕರೆ ಜಮೀನಲ್ಲಿ 1800 ಬಾಳೆ ಗಿಡಗಳನ್ನು ನೆಟ್ಟು ಪ್ರತಿ ಗಿಡದಲ್ಲಿ 12ರಿಂದ 14ಡಜನ್ ಫಲ ಪಡೆಯುತ್ತಿದ್ದಾರೆ. 3 ವರ್ಷದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಇನ್ನುಳಿದ ತಮ್ಮ ಜಮೀನಲ್ಲಿ 500 ಹೆಬ್ಬೇವು ಮತ್ತು ಸುಜಲಾ ಯೋಜನೆಯಡಿ 300 ನಿಂಬೆ ಗಿಡಗಳನ್ನು ನೆಟ್ಟಿದ್ದಾರೆ. ಒಂದೊಂದು ನಿಂಬೆಗಿಡದಲ್ಲಿ 300ರಿಂದ 400ನಿಂಬೆಕಾಯಿ ಬರುತ್ತಿವೆ. ಈ ನಿಂಬೆಗಿಡಗಳ ಮಧ್ಯೆ 400 ನುಗ್ಗಿ ಗಿಡಗಳನ್ನು ನೆಡಲಾಗಿದೆ. ಈ ನಡುವೆ ಅಲ್ಪಸ್ವಲ್ಪ ಹೂವು, ತರಕಾರಿ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ.

‘ಮುಂಬರುವ ದಿನಗಳಲ್ಲಿ ಈರುಳ್ಳಿ ಶೆಡ್ ನಿರ್ಮಿಸಿ ಈರುಳ್ಳಿ ಬೆಳೆಯುವ ಉದ್ದೇಶವಿದೆ. ವಿವಿಧ ಕೃಷಿ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಆಸಕ್ತಿಯಿದೆ’ ಎಂದು ಕಾಶಿರಾಯ ನಾಯಿಕೋಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT