ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಸ್‌ವೈ ಮನೆ ಮೇಲೆ ದಾಳಿ: ಕಾಂಗ್ರೆಸ್ ನಾಯಕರ ವ್ಯವಸ್ಥಿತ ಕುತಂತ್ರ ಎಂದ ಬೊಮ್ಮಾಯಿ

Last Updated 28 ಮಾರ್ಚ್ 2023, 9:38 IST
ಅಕ್ಷರ ಗಾತ್ರ

ಕಲಬುರಗಿ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸದ ಮೇಲಿನ ದಾಳಿಯ ಹಿಂದೆ ಕಾಂಗ್ರೆಸ್ ನಾಯಕರ ಕುತಂತ್ರ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ ಎಲ್ಲಕಡೆ ಕುತಂತ್ರ ಮಾಡಿದೆ. ಪೊಲೀಸರಿಗೆ ಸಿಕ್ಕಿರುವ ಕ್ಯಾಮೆರಾದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಈ ಬಗ್ಗೆ ಡಿ.ಕೆ ಶಿವಕುಮಾರ ಮತ್ತೇನು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.

‘ಆ ಜನಾಂಗಕ್ಕೆ(ಬಂಜಾರ ಸಮುದಾಯ) ಏನೂ ಗೊತ್ತಿಲ್ಲ. ಕಾಂಗ್ರೆಸ್ ನಾಯಕರು ಹಿಂದಿನ ದಿನ ಅವರನ್ನು ತಪ್ಪು ದಾರಿಗೆ ಎಳೆದು, ಎಸ್‌ಸಿ ಪಟ್ಟಿಯಿಂದ ತೆಗೆಯುತ್ತಾರೆ ಎಂದು ಸುಳ್ಳು ಹೇಳಿ ಪ್ರಚೋದನೆ ಮಾಡಿದ್ದಾರೆ. ರಾತ್ರಿಯೇ ಕಾಂಗ್ರೆಸ್ ಸಭೆ ನಡೆಸಿ, ಯೋಜನೆ ಹಾಕಿಕೊಂಡು ವ್ಯವಸ್ಥಿತವಾಗಿ ಮಾಡಿರುವುದು. ಸಾಕ್ಷಿ ಸಮೇತವಾಗಿ ಹೇಳುತ್ತಿದ್ದೇನೆ. ಸುಳ್ಳು ಹೇಳುವುದನ್ನು ಡಿ.ಕೆ. ಶಿವಕುಮಾರ ಅವರು ಬಿಡಬೇಕು’ ಎಂದರು.

‘ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಇಲ್ಲ. ರಾಜಕೀಯ ಲಾಭಕ್ಕಾಗಿ ಜವಳಿ ಪಾರ್ಕ್‌ ತಂದಿಲ್ಲ. ಒಂದೂವರೆ ವರ್ಷದಿಂದ ಈ ಬಗ್ಗೆ ಮಾತನಾಡುತ್ತಿದ್ದು, ಹೊಸ ಜವಳಿ ನೀತಿಯಡಿ ಪಾರ್ಕ್‌ ಬಂದಿದೆ. ಕಾಂಗ್ರೆಸ್‌ನವರಿಗೆ ಹೊಟ್ಟೆ ಕಿಚ್ಚು ಆಗಿದೆ. ಅವರಿಂದ ಮಾಡಲು ಆಗದನ್ನು ನಾವು ಮಾಡಿ ಸಾಧಿಸಿ ತೋರಿಸಿದ್ದಕ್ಕೆ’ ಎಂದು ವ್ಯಂಗ್ಯವಾಡಿದರು.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT