ಶುಕ್ರವಾರ, ಅಕ್ಟೋಬರ್ 23, 2020
28 °C

ನಿಂಬರ್ಗಾ: ಮೂವರು ಬೈಕ್‌ ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ತಾಲ್ಲೂಕಿನ ನಿಂಬರ್ಗಾ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡುತ್ತಿದ್ದ ಮೂವರನ್ನು ಶುಕ್ರವಾರ ಪೊಲೀಸರು ಬಂಧಿಸಿ ಅವರಿಂದ 11 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಸೋಮಲಿಂಗ ಕೊಂಬಿನ್, ಶಿವಾನಂದ ಜಿಡಗಾ, ದಿಲೀಪ ದೊಡ್ಡಮನಿ ಬಂಧಿತರು. ನಿಂಬರ್ಗಾ, ಗಾಣಗಾಪುರ, ಆಳಂದ, ಕಲಬುರ್ಗಿ ಮತ್ತಿತರ ಸ್ಥಳಗಳಲ್ಲಿ ಬೈಕ್‌ ಕಳವು ಮಾಡಿ ಪರಾರಿಯಾಗುತ್ತಿದ್ದ ಇವರು ಬೇರೆ ವ್ಯಕ್ತಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದರು.

ಬೈಕ್‌ ಕಳೆದುಕೊಂಡವರು ಸೂಕ್ತ ದಾಖಲೆ ಒದುಗಿಸಿ ತಮ್ಮ ಬೈಕ್‌ ತೆಗೆದುಕೊಂಡು ಹೋಗಬಹುದು ಎಂದು ನಿಂಬರ್ಗಾ ಠಾಣೆ ಪಿಎಸ್ಐ ಸುರೇಶ ಚವ್ಹಾಣ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.