ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಿ ಸಮಾಜವನ್ನು ಮತಕ್ಕಾಗಿ ಬಳಿಸಿಕೊಂಡ ಬಿಜೆಪಿ: ಸಚಿವ ಶರಣಪ್ರಕಾಶ ಪಾಟೀಲ

Published 3 ಮೇ 2024, 16:07 IST
Last Updated 3 ಮೇ 2024, 16:07 IST
ಅಕ್ಷರ ಗಾತ್ರ

ಅಫಜಲಪುರ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಬಡ ಜನರಿಗೆ ಅನಕೂಲ ಮಾಡಿದೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಅಲ್ಲಿಯೂ ಸಹ ಗ್ಯಾರಂಟಿಗಳನ್ನ ನೀಡಲಾಗುವುದು’ ಎಂದು ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.

ಪಟ್ಟಣದ ನ್ಯಾಷನಲ್ ಫಂಕ್ಷನ್‌ ಹಾಲ್‌ನಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ನಡೆದ ಕೋಲಿ ಸಮಾಜದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಕೃಷ್ಣ ದೊಡ್ಡಮನಿ ಪರ ಮತಯಾಚನೆ ಮಾಡಿ ಮಾತನಾಡಿ ಮಾತನಾಡಿದರು.

‘ಬಿಜೆಪಿಯವರಿಗೆ ಬಡ ಜನರ ಬಗ್ಗೆ ಕಾಳಜಿಯಿಲ್ಲ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ  ರಾಧಾಕೃಷ್ಣ ದೊಡ್ಡಮನಿ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ’ ಎಂದು ಮನವಿ ಮಾಡಿದರು.

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ರಾಜ್ಯಕ್ಕೆ ಮತ್ತು ಕಲ್ಯಾಣ ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯನವರು ನೀಡಿರುವ ಅಭಿವೃದ್ಧಿ ಯೋಜನೆಗಳು, ನಾನು ಶಾಸಕನಾಗಿ ಕಳೆದ 5 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಮತದಾರರು ಕೂಲಿ ಕೊಡುತ್ತಾರೆ ಎಂಬ ಭರವಸೆಯಿದೆ’ ಎಂದರು.

ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ ಮಾತನಾಡಿದರು.

ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ, ‘ನನಗೆ ನನ್ನ ಸಮಾಜ ಬಾಂಧವರು ಮಕ್ಕಳಾಗಿದ್ದು ನಿಮಗೆ ಎಸ್‌ಟಿ ಮಾಡಿಯೇ ಪ್ರಾಣ ಬಿಡುತ್ತೇನೆ‘ ಎಂದು ಹೇಳಿದರು. 

ಜಿ.ಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ ಮಾತನಾಡಿದರು. 

ಸಭೆಯಲ್ಲಿ ಪ್ರಮುಖರಾದ ಗುರುಬಾಳ ಜಕಾಪೂರ, ಪ್ರಕಾಶ ಜಮಾದಾರ, ಮಕಬುಲ್ ಪಟೇಲ್, ಲಚ್ಚಪ್ಪ ಜಮಾದಾರ, ಚಂದು ದೇಸಾಯಿ ಮತೀನ ಪಟೇಲ್, ಪಪ್ಪು ಪಟೇಲ್, ಭೀಮಾಶಂಕರ ಹೊನ್ನಕೇರಿ, ರಾಮಣ್ಣ ನಾಯಕೋಡಿ, ರಮೇಶ ನಾಟೀಕಾರ, ಕಲ್ಲಪ್ಪ ಪ್ಯಾಟಿ, ವಿಠಲ್ ನಾಟೀಕಾರ, ಶಿವಾನಂದ ಗಾಡಿಸಾಹುಕಾರ, ದುಂಡು ಜಮಾದಾರ, ಸಾಯಬಣ್ಣ ನೀಲಪ್ಪಗೋಳ, ಶಿವು ಗಾಣೂರ, ಸಂಗನಗೌಡ ಪಾಟೀಲ್ ಸೊನ್ನ, ಅವಧೂತ ಜಮಾದಾರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT