ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಂಟು

Last Updated 24 ಮಾರ್ಚ್ 2023, 6:00 IST
ಅಕ್ಷರ ಗಾತ್ರ

ಕಲಬುರಗಿ: ಹಾಸನ ಜಿಲ್ಲೆಯ ಶ್ರವಣಬೆಳಗೊಳದ ದಿಗಂಬರ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಕಲಬುರಗಿ ಜಿಲ್ಲೆಯೊಂದಿಗೆ ನಂಟು ಹೊಂದಿದ್ದರು.

‘ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು 1982ರಲ್ಲಿ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ ನೇಮಿನಾಥ ತೀರ್ಥಂಕರ ಬಸದಿ ಮತ್ತು ಶಹಾಬಾದ್ ತಾಲ್ಲೂಕಿನ ಭಂಕೂರು ಗ್ರಾಮಗಳ ಬಸದಿಗಳಿಗೆ ಭೇಟಿ ನೀಡಿದ್ದರು. ಜಿಲ್ಲೆಯ ಅಂದಿನ ಜೈನ್ ಸಮುದಾಯದ ಗಣ್ಯರೊಂದಿಗೆ ಭೇಟಿಯಾಗಿ, ಬಸದಿಗಳ ಜೀರ್ಣೋದ್ಧಾರ ಮತ್ತು ಪರಿಶೀಲನೆ ನಡೆಸಿದ್ದರು’ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಸುರೇಶ ತಂಗಾ ಸ್ಮರಿಸಿದರು.

‘ಇಂದಿನ ಮಳಖೇಡ(ಮಾನ್ಯಖೇಟ) ಈ ಹಿಂದೆ ರಾಷ್ಟ್ರಕೂಟರ ರಾಜ್ಯಧಾನಿ ಆಗಿತ್ತು. ಹೀಗಾಗಿ, ಈ ಭಾಗದ ಅಲ್ಲಲ್ಲಿ ಜೈನ ಬಸದಿಗಳಿವೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಬಸದಿಗಳ ಜಿರ್ಣೋದ್ಧಾರಕ್ಕೆ ಸಾಕಷ್ಟು ಸಲಹೆ ನೀಡಿ ಸಹಕರಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಭಂಕೂರು ಬಸಿದ ಜೀವರ್ಣೋದ್ಧಾರ ಮಾಡಲಾಯಿತು. ಅದಾದ ಬಳಿಕ ಜಿಲ್ಲೆಗೆ ಮತ್ತೆ ಭೇಟಿ ನೀಡಲಿಲ್ಲ’ ಎಂದರು.

ನಗರದ ಮಹಾವೀರ ವೃತ್ತದಲ್ಲಿ ಗುರುವಾರ ಜಿಲ್ಲೆಯ ಜೈನ ಸಮಾಜದ ಮುಖಂಡರು, ಸಮಾಜದವರು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ, ನುಡಿನಮನ ಸಲ್ಲಿಸಿದರು.

‘ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿರುವುದು ಜೈನ ಸಮಾಜವೂ ಸೇರಿದಂತೆ ನಾಡಿನ ಜನತೆಗೆ ಅತೀವ ದುಃಖ ತರಿಸಿದೆ. ಸ್ವಾಮೀಜಿ ಅವರ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳು ಸದಾ ಸ್ಮರಣೀಯ. ಸ್ವಾಮಿತ್ವದ ಬದುಕು ಸಮಾಜಕ್ಕಾಗಿ ಮೀಸಲಿಟ್ಟು, ಸಮಾಜದ ಕುರಿತು ಆಲೋಚಿಸುತ್ತಿದ್ದರು. ಕಾವಿ ಕುಲದ ಶ್ರೇಷ್ಠ ಯತಿರಣ್ಯರೂ ಆಗಿದ್ದರೂ’ ಎಂದು ಸುರೇಶ ತಂಗಾ ಅಭಿಪ್ರಾಯಪಟ್ಟರು.

ಶ್ರವಣಬೆಳಗೊಳದಲ್ಲಿ ಇದ್ದುಕೊಂಡು ಜೈನ ಧರ್ಮದ ತತ್ವ ಮತ್ತು ಸಿದ್ಧಾಂತಗಳನ್ನು ಮನುಕುಲದ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನೆ ಮತ್ತು ಮನಗಳಿಗೆ ತಲುಪಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ’ ಎಂದರು.

ಜೈನ ಸಮಾಜದ ಮುಖಂಡರಾದ ನಾಗನಾಥ ಚಿಂದೆ, ಸುಭಾಷ ಪಾಟೀಲ, ಧನ್ಯಕುಮಾರ ಕುಣಚಗಿ, ರಮೇಶ ಗಡಗಡೆ, ಪ್ರಕಾಶ ಜೈನ, ದೀಪಕ ಪಂಡಿತ, ವಿಜಯಕುಮಾರ ಪಾಂಡ್ರೆ, ಶ್ರೇಣಿಕ ಡೊಳ್ಳೆ, ಪಾರ್ಶ್ವನಾಥ ಚಿಂದೆ, ವಜ್ರಕುಮಾರ ಪಾಟೀಲ, ಭರಮ ಜಗಶೆಟ್ಟಿ, ವಿನೋದಕುಮಾರ ಪಾಟೀಲ, ಬಿ.ಕೆ.ಪಾಟೀಲ, ಜೀತು ಚಿಂದೆ, ಮಹಾವೀರ ಬಪ್ಪಣಕರ, ವಿನೋದಕುಮಾರ ಬಬಲಾದಕರ, ವೈಭವ ವನಕುದರೆ, ಬಂಡುಕುಮಾರ ವನಕುದರೆ, ರಾಜೇಂದ್ರ ಕುಣಚಗಿ, ನಾಗಲಿಂಗಯ್ಯ ಮಠಪತಿ, ಶ್ರೇಣಿಕ ಪಾಟೀಲ, ಕಿರಣ ಪಂಡಿತ, ರಾಹುಲ ಕುಂಬಾರೆ, ಮಹಿಳಾ ಮುಖಂಡರಾದ ಶೀತಲ ಕುಲಕರ್ಣಿ, ಶಿಲ್ಪಾ ಕುಲಕರ್ಣಿ, ಭಾರತಿ ಚಿಂದೆ, ಶ್ರೀಮತಿ ಓರಾ, ಪದ್ಮಶ್ರೀ ಚಿಂದೆ, ದೀಪಾ ಪಾಟೀಲ, ಭಾರತೀ ವಿಭೂತೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT