ಮಂಗಳವಾರ, ಮೇ 24, 2022
27 °C

ಕಲಬುರಗಿ: ಗಮನ ಸೆಳೆದ ಮಕ್ಕಳ ಸಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಲಬುರಗಿ ರಂಗಾಯಣ ಚಿಣ್ಣರ ಮೇಳದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಬೇಸಿಗೆ ಶಿಬಿರದ ಮಕ್ಕಳ ಸಂತೆ ಗಮನ ಸೆಳೆಯಿತು. ವೈವಿಧ್ಯಮಯ ವಸ್ತುಗಳನ್ನು ಚಿಣ್ಣರು ಮಾರಾಟ ಮಾಡಿ ಗಮನ ಸೆಳೆದರು.

ವಿವಿಧ ತರಕಾರಿಗಳು, ತಟ್ಟೆಯ ಊಟ, ಖಡಕ್ ರೊಟಿ, ಶೇಂಗಾ ಹಿಂಡಿ, ಕಡಲೆಕಾಯಿ, ಜೂಸ್‌, ಐಸ್ಕ್ರೀಮ್‌, ಚಕ್ಕುಲಿ, ಕೋಡಬಳೆ, ಅವಲಕ್ಕಿ, ಚಾಟ್ಸ್‌ ಹೀಗೆ ವಿವಿಧ ನಮೂನೆಯ ತಿಂಡಿ– ತನಿಸುಗಳ ಜತೆಗೆ ಹಣ್ಣುಗಳು, ಪುಸ್ತಕಗಳನ್ನೂ ಮಕ್ಕಳು ಮಾರಿದರು.

ಸಾಯಿಗಣೇಶನ ಪಾನಿಪುರಿ, ಪ್ರಾಚೀನ್ ಮೋದಿಯ ಚಾಟ್ ಭಂಡಾರ, ಶ್ರಾವ್ಯಾಳ ಕಡಗಂಚಿ ಶಾಪ್, ಅರ್ನಾರ, ಪವಿತ್, ಸಾಯಿಪ್ರಸಾದ, ಗಾಯತ್ರಿ, ಪ್ರಣವ ಸತ್ಯಂಪೇಟೆ, ಪ್ರಣವ ಪಟ್ಟಣಕರ, ಪ್ರತೀಕ ಪಟ್ಟಣಕರ, ಇಂಚರ ಮತ್ತು ಇತರ ಮಕ್ಕಳೆಲ್ಲರೂ ವೈವಿಧ್ಯಮಯ ಪದಾರ್ಥಗಳ ಮಳಿಗೆ ತರೆದು ತಮನ ಸೆಳೆದರು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಆಡಳಿತಾಧಿಕಾರಿ ಜಗದೀಶ್ವರಿ ನಾಸಿ, ಶಿಬಿರ ನಿರ್ದೇಶಕ ಸಂದೀಪ ಬಿ., ಸಂಪನ್ಮೂಲ ವ್ಯಕ್ತಿಗಳಾಗಿ ರಂಗಾಯಣ ಕಲಾವಿದರಾದ ಜಗದೀಶ್ ಪಾಟೀಲ, ಉಮೇಶ ಪಾಟೀಲ, ನಾಗೇಶ ಕುಂದಾಪೂರ, ಶ್ತೀನಿವಾಸ ದೋರನಹಳ್ಳಿ, ಭಾಗ್ಯಾ ಪಾಳಾ, ಅಕ್ಷತಾ ಕುಲಕರ್ಣಿ, ರಾಜಕುಮಾರ, ರಾಜು ಉಪ್ಪಾರ ಹಾಗೂ ಮೈಮ್ ಮುರುಗೇಂದ್ರ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು