ಚಿತ್ತಾಪುರ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅವರು ಸೋಮವಾರ ತಾಲ್ಲೂಕಿನ ಅಲ್ಲೂರ್(ಬಿ) ಗ್ರಾಮದ ಪತ್ರಕರ್ತ ದಿ.ನಾಗಯ್ಯ ಸ್ವಾಮಿ ಅಲ್ಲೂರ್ ಮನೆಗೆ ಭೇಟಿ ನೀಡಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಾಗಯ್ಯ ಅವರ ಸಹೋದರ ಜಂಬಯ್ಯ ಸ್ವಾಮಿ, ರಾಚಯ್ಯ ಸ್ವಾಮಿ ಹಾಗೂ ಪುತ್ರ, ಪುತ್ರಿಯನ್ನು ಮಾತನಾಡಿಸಿದ ಪ್ರಿಯಾಂಕ್ ಅವರು, ‘ಸಾವಿನಿಂದ ನಮಗೂ ದುಃಖವಾಗಿದೆ. ನಿಮ್ಮ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಿಂದ ಬೇಗ ಅನಾರೋಗ್ಯದಿಂದ ಗುಣಮುಖರಾಗಲಿ ಎಂದು ಆಶಿಸಿದ್ದೇವು. ನಿಮ್ಮೊಂದಿಗೆ ನಾವಿದ್ದೇವೆ. ಧೈರ್ಯಗುಂದಬೇಡಿ, ಚೆನ್ನಾಗಿ ಅಭ್ಯಾಸ ಮಾಡಿ ಎಂದು ಕಾನೂನು ವ್ಯಾಸಾಂಗ ಮಾಡುತ್ತಿರುವ ನಾಗಯ್ಯ ಅವರ ಪುತ್ರಿಗೆ ಧೈರ್ಯ ತುಂಬಿದರು.

‘ಹಿರಿಯ ಪತ್ರಕರ್ತರಾಗಿದ್ದ ನಾಗಯ್ಯ ಅವರು ಪತ್ರಿಕೋದ್ಯಮ ವೃತ್ತಿ ಜತೆಗೆ ತಾಲ್ಲೂಕಿನಲ್ಲಿ ಸಾಹಿತ್ಯಕ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ನುಡಿ ಸೇವೆ ಮಾಡುತ್ತಿದ್ದರು. ಕನ್ನಡ ಸಾಹಿತ್ಯ ಚಟುವಟಿಕೆ, ಸಾಹಿತ್ಯ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದಾಗಿ ಪತ್ರಿಕೋಧ್ಯಮ ಕ್ಷೇತ್ರವು ಒಬ್ಬ ಹಿರಿಯ ಮಾರ್ಗದರ್ಶಿ, ಸಾಮಾಜಿಕ ಕಳಕಳಿಯ ಪತ್ರಕರ್ತನನ್ನು ಕಳೆದುಕೊಂಡಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಪತ್ರಕರ್ತ ನಾಗಯ್ಯ ಸ್ವಾಮಿ ಅವರ ಕುಟುಂಬ ಕಡುಬಡತನದಲ್ಲಿದೆ. ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಒದಗಿಸಬೇಕು ಎಂದು ಪತ್ರಕರ್ತರು ಮನವಿ ಮಾಡಿದಾಗ, ‘ಅವರ ವ್ಯಕ್ತಿತ್ವ ನನಗೆ ಚಿರಪರಿಚಿತ. ಖಂಡಿತಾ ಆರ್ಥಿಕ ನೆರವು ಕೊಡಿಸುತ್ತೇನೆ. ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ’ ಎಂದು ಪ್ರಿಯಾಂಕ್ ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಕೆಪಿಸಿಸಿ ಕಾರ್ಯದರ್ಶಿ ರಮೇಶ ಪಾಟೀಲ ಮರಗೋಳ, ಕಾಂಗ್ರೆಸ್ ಮುಖಂಡರಾದ ಶಿವಾನಂದ ಪಾಟೀಲ ಮರತೂರು, ಜಗಣ್ಣಗೌಡ ರಾಮತೀರ್ಥ, ಶಿವರುದ್ರ ಭೀಣಿ, ಶಾಂತಣ್ಣ ಚಾಳಿಕಾರ, ಶರಣಪ್ಪ ನಶಿ, ರಾಮಲಿಂಗ ಕೊನಿಗೇರಿ, ಮಹಾದೇವ ಬೂನಿ, ಮಹಾದೇವ ಕೊನಿಗೇರಿ, ರಾಮು ನಾಟೀಕಾರ, ಸಂಜಯ ಬುಳಕರ, ಶರಣು ಡೋನಗಾಂವ, ದುರ್ಜನ ನಾಟೀಕಾರ, ಜಿಲ್ಲಾ ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣವರ, ಸೇಡಂ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಡಿವೈಎಸ್ಪಿ ಶಂಕರಗೌಡ ಪಾಟೀಲ, ತಾ.ಪಂ ಅಧಿಕಾರಿ ಮಹ್ಮದ್ ಅಕ್ರಂ ಪಾಷಾ, ಸಿಪಿಐ ಚಂದ್ರಶೇಖರ ತಿಗಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.