ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: ಅಶ್ಲೀಲ ವಿಡಿಯೊ ಶೇರ್ ಮಾಡಿದ ಜನಪ್ರತಿನಿಧಿ!

ಗಣ್ಯರು, ಮಹಿಳೆಯರು ಇದ್ದ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ನಡೆದ ಅವಾಂತರ
Last Updated 9 ಫೆಬ್ರುವರಿ 2021, 1:00 IST
ಅಕ್ಷರ ಗಾತ್ರ

ಚಿತ್ತಾಪುರ: ಇಲ್ಲಿನ ಪುರಸಭೆ ಚುನಾಯಿತ ಪ್ರತಿನಿಧಿಯೊಬ್ಬರು ‘ಚಿತ್ತಾಪುರ ವಿವಿಐಪಿ ವಾಟ್ಸ್‌ಆ್ಯಪ್ ಗ್ರೂಪ್‌’ ಎಂಬ ತಂಡದಲ್ಲಿ ಭಾನುವಾರ ಎರಡು ಅಶ್ಲೀಲ ವಿಡಿಯೊ ಹರಿಬಿಟ್ಟಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿವಿಧ ರಾಜಕೀಯ ಪಕ್ಷಗಳ ಗಣ್ಯರು, ಹಿರಿಯರು, ಸರ್ಕಾರಿ ನೌಕರರು, ಪೊಲೀಸರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಿವಿಧ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಸಂಘಟನೆಗಳ ಸದಸ್ಯರು ಸೇರಿ 205ಕ್ಕೂ ಅಧಿಕ ಜನರು ಈ ಗ್ರೂಪ್‌ನಲ್ಲಿ ಇದ್ದಾರೆ. ಇದರಲ್ಲಿ ಹಲವು ಮಹಿಳೆಯರು, ಯುವತಿಯರೂ ಇದ್ದಾರೆ. ಇದೆಲ್ಲ ಗೊತ್ತಿದ್ದರೂ ಜನಪ್ರತಿನಿಧಿ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೊ ಹರಿಬಿಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವಿಡಿಯೊ ಬಂದ ಕೆಲವೇ ನಿಮಿಷಗಳಲ್ಲಿ ಗ್ರೂಪ್‌ನಲ್ಲಿಯೇ ಹಲವರು ತರಾಟೆ ತೆಗೆದುಕೊಂಡರು.

ಕೆಟ್ಟ ಅಭಿರುಚಿಯ ವಿಡಿಯೊ ನೋಡಿದ ತಕ್ಷಣ ಹಲವರು ತೀವ್ರ ಮುಜುಗರಕ್ಕೆ ಒಳಗಾದರು. ಹಲವರು ಇದನ್ನು ಖಂಡಿಸಿ, ಗ್ರೂಪ್‌ನಿಂದ ಹೊರಹೋದರು. ಇದರಿಂದ ಕಂಡ ಜನಪ್ರತಿನಿಧಿ ತಕ್ಷಣ ವಿಡಿಯೊ ಡಿಲಿಟ್‌ ಮಾಡಲು ಯತ್ನಿಸಿದರು. ಆದರೆ, ಒಂದು ವಿಡಿಯೊ ಮಾತ್ರ ಡಿಲಿಟ್‌ ಆಗಿಯಿತು. ಇನ್ನೊಂದು ಬೇರೆಬೇರೆ ಗುಂಪುಗಳಿಗೆ ಹರಿದಾಡಿತು.

ಅಷ್ಟರೊಳಗೆ ಗ್ರೂಪ್‌ ಅಡ್ಮಿನ್ ಕೂಡ ಬೇರೊಬ್ಬರನ್ನು ಅಡ್ಮಿನ್ ಮಾಡಿ ಗ್ರೂಪ್‌ನಿಂದ ಹೊರ ಹೋಗಿದ್ದರು. ವಿಡಿಯೊ ಹಾಕಿದ ಜನಪ್ರತಿನಿಧಿಯ ಮಗ ಹೊಸ ಅಡ್ಮಿನ್ ಅವರ ಮನೆಗೆ ಹೋಗಿ ಗ್ರೂಪ್‌ನಲ್ಲಿರುವ ಎಲ್ಲ ಸದಸ್ಯರನ್ನು ರಿಮೂವ್ ಮಾಡಿ, ಗ್ರೂಪ್‌ ಡಿಲಿಟ್‌ ಮಾಡಿದರು ಎಂದು ಈ ಗ್ರೂಪ್‌ನಲ್ಲಿರುವ ಹಲವಾರು ಜನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT