ಭಾನುವಾರ, ನವೆಂಬರ್ 27, 2022
26 °C

ಸಿನಿಮಾ ಸಶಕ್ತ ಮಾಧ್ಯಮ: ಚೆರಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ವರ್ತಮಾನದ ಸಿನಿಮಾ; ದಲಿತ ಮತ್ತು ಕಪ್ಪುಜನರ ಪ್ರತಿರೋಧ’ ಎಂಬ ಶೀರ್ಷಿಕೆಯಡಿ ಮನುಜಮತ ಸಿನಿಯಾನ ಮತ್ತು ಜನರಂಗ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಕಲಬುರಗಿ ಸಿನಿ ಹಬ್ಬಕ್ಕೆ ಕೇರಳದ ಚಿತ್ರನಿರ್ದೇಶಕ ಜಯಂತ್ ಚೆರಿಯನ್ ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚೆರಿಯನ್, ‘ಯಹೂದಿಗಳನ್ನು ಇನ್ನಿಲ್ಲದಂತೆ ಕಾಡಿದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಸಿನಿಮಾ ಮಾಧ್ಯಮವನ್ನು ತನಗೆ ಅನುಕೂಲವಾಗುವಂತೆ ದುರ್ಬಳಕೆ ಮಾಡಿಕೊಂಡ. ಸಿನಿಮಾ ಮಾಧ್ಯಮ ಒಂದು ಸಶಕ್ತ ಮಾಧ್ಯಮವಾಗಿದ್ದು, ಇದನ್ನು ಜನರ ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಬಳಸಿಕೊಳ್ಳಬೇಕಾಗಿದೆ’ ಎಂದರು.

ಮನುಜಮತ ಸಿನಿಯಾನದ ಐವಾನ್ ಡಿಸಿಲ್ವ ಮಾತನಾಡಿ, ‘15 ವರ್ಷಗಳ ಹಿಂದೆ ಸಮಾನಮನಸ್ಕರೆಲ್ಲ ಸೇರಿಕೊಂಡು ಪ್ರಮುಖ ಸಿನಿಮಾಗಳನ್ನು ನೋಡುತ್ತಿದ್ದೆವು. ಆ ನಂತರ ಚರ್ಚೆ ನಡೆಸುತ್ತಿದ್ದೆವು. ಇದನ್ನು ಬೇರೆ ಜಿಲ್ಲೆಗಳಲ್ಲಿಯೂ ಮಾಡಿದರೆ ಹೇಗೆ ಎಂಬ ಚಿಂತನೆ ಮೂಡಿತು. ಅದರ ಪರಿಣಾಮ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಿನಿ ಉತ್ಸವಗಳು ನಡೆದಿವೆ. ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಸಿನಿಮೋತ್ಸವ ನಡೆಯುತ್ತಿದೆ. ಸಿನಿಮಾದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳೂ ಭಾಗವಹಿಸಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಶಿವಗಂಗಾ ರುಮ್ಮಾ, ಸಹಾಯಕ ಪ್ರಾಧ್ಯಾಪಕರಾದ ಡಾ. ಕಿರಣ ಗಾಜನೂರ, ಡಾ. ಅಪ್ಪಗೆರೆ ಸೋಮಶೇಖರ್, ಫಣಿರಾಜ್ ಉದ್ಘಾಟನಾ ಸಮಾರಂಭದಲ್ಲಿದ್ದರು.

ಜನರಂಗದ ಅಧ್ಯಕ್ಷ, ರಂಗಕರ್ಮಿ ಶಂಕ್ರಯ್ಯ ಘಂಟಿ ಅಧ್ಯಕ್ಷತೆ ವಹಿಸಿದ್ದರು. ಸುಮಾರು 50ಕ್ಕೂ ಅಧಿಕ ಪ್ರತಿನಿಧಿಗಳು ಎರಡು ದಿನಗಳ ಸಿನಿಮಾ ಉತ್ಸವದಲ್ಲಿ ಭಾಗವಹಿಸಿದ್ದರು.

ಭಾನುವಾರ ಸಿನಿಹಬ್ಬ ಮುಕ್ತಾಯವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು