ಬುಧವಾರ, ಏಪ್ರಿಲ್ 21, 2021
31 °C
ಕರದಾಳ ಗ್ರಾ.ಪಂ ಸೌಧ ಉದ್ಘಾಟನೆ

ಅಭಿವೃದ್ಧಿ ಕೆಲಸಗಳ ತುಲನೆ ಮಾಡಿ: ಪ್ರಿಯಾಂಕ್ ಎಂ.ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗ, ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿಯನ್ನು ಜನರೇ ತುಲನೆ ಮಾಡಿ ನೋಡಬೇಕು ಎಂದು ಶಾಸಕ ಪ್ರಿಯಾಂಕ್ ಎಂ.ಖರ್ಗೆ ಹೇಳಿದರು.

ತಾಲ್ಲೂಕಿನ ಕರದಾಳ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೊ ಯೋಜನೆ ಅಡಿ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಎಂ.ವೈ.ಘೋರ್ಪಡೆ ಗ್ರಾಮ ಪಂಚಾಯಿತಿ ಸೌಧ ಉದ್ಘಾಟಿಸಿ ಅವರು ಮಾತನಾಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ಮತ್ತು ಈಗಿನ ಸಂಸದ ಡಾ.ಉಮೇಶ ಜಾಧವ ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕಣ್ಣೆದುರಿಗಿದೆ. ಅದನ್ನು ಅರಿಯುವ ಕೆಲಸ ಜಿಲ್ಲೆ, ತಾಲ್ಲೂಕಿನ ಜನತೆ ಮಾಡಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಯಾವುದೇ ಆದೇಶವಿಲ್ಲದೆ ಈ ಭಾಗದಲ್ಲಿ 30 ಸಾವಿರ ಹುದ್ದೆ ಭರ್ತಿ ಮಾಡಿತು. ಈಗಿನ ಸರ್ಕಾರ ನೇರ ನೇಮಕಾತಿ ಮಾಡಲು ಆಗುವುದಿಲ್ಲ ಎಂದು ಆದೇಶ ಹೊರಡಿಸಿದೆ ಎಂದರು.

ಕ್ಷೇತ್ರದಲ್ಲಿ 5 ಲಕ್ಷ ಜನಸಂಖ್ಯೆಯಿದೆ. 2.50 ಲಕ್ಷ ಮತದಾರರಿದ್ದಾರೆ. ಕ್ಷೇತ್ರದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ 150 ಕಿ.ಮೀ ಅಂತರವಿದೆ. ಸಮಗ್ರ ಅಭಿವೃದ್ಧಿ ಏಕಕಾಲದಲ್ಲಿ ಮಾಡಲು ಆಗುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒಟ್ಟು ₹3,600 ಕೋಟಿ ಅನುದಾನ ತಂದಿರುವೆ. ಅಭಿವೃದ್ಧಿಯೆ ನನ್ನ ಮೂಲಮಂತ್ರ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಮಾಜಿ ಅಧ್ಯಕ್ಷ ಶಾಂತಣ್ಣ ಚಾಳಿಕಾರ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಿವರುದ್ರ ಭೀಣಿ, ತಾಲ್ಲೂಕು ಪಂಚಾಯಿತಿ ಉಪಾದ್ಯಕ್ಷ ಹರಿನಾಥ ಚವಾಣ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಪಾಟೀಲ ಮರಗೋಳ, ಶ್ರೀನಿವಾಸ ಸಗರ, ಅಜೀಜ್ ಶೇಠ್ ರಾವೂರ, ಪಂಚಾಯಿತಿ ಕಟ್ಟಡಕ್ಕೆ ಭೂಮಿ ನೀಡಿದ ಶಶಿಧರ್ ದೇಶಮುಖ, ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂಜಯಕುಮಾರ ಮಾನಕರ್, ಎಇಇ ಶ್ರೀಧರ್, ಯುವ ಮುಖಂಡರಾದ ಅಯ್ಯಣ್ಣಗೌಡ ಪಾಟೀಲ, ನಾಗಯ್ಯ ಗುತ್ತೇದಾರ, ಶರಣು ಡೋಣಗಾಂವ, ಸುರೇಶ ಗುತ್ತೇದಾರ, ರಾಜಣ್ಣ ಕರದಾಳ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು