ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರದಲ್ಲಿ ಕನಕ ಭವನ ನಿರ್ಮಾಣ: ಶಾಸಕ ಮತ್ತಿಮಡು ಭರವಸೆ

ತಾಲ್ಲೂಕು ಮಟ್ಟದ ಕನಕದಾಸ ಜಯಂತಿ
Published 22 ಡಿಸೆಂಬರ್ 2023, 15:57 IST
Last Updated 22 ಡಿಸೆಂಬರ್ 2023, 15:57 IST
ಅಕ್ಷರ ಗಾತ್ರ

ಕಮಲಾಪುರ: ಕುರುಬ ಸಮಾಜದವರು ಕಾರ್ಯಕ್ರಮಗಳನ್ನು ನಡೆಸಲು ಕಮಲಾಪುರ ಪಟ್ಟಣದಲ್ಲಿ ಕನಕ ಭವನ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಬಸವರಾಜ ಮತ್ತಿಮಡು ಭರವಸೆ ನೀಡಿದರು.

ತಾಲ್ಲೂಕು ಕುರುಬ ಸಮಾಜದ ವತಿಯಿಂದ ಕಮಲಾಪುರ ಪಟ್ಟಣದ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಅವರು ಮಾತನಾಡಿದರು.

ಪಟ್ಟಣ ಪಂಚಾಯಿತಿಯಿಂದ ನಿವೇಶನ ಒದಗಿಸಲು ಸೂಚಿಸಲಾಗುವುದು. ಈಗಾಗಲೇ ಮಹಾಗಾಂವ ಕ್ರಾಸ್‌ನಲ್ಲಿ ಕನಕ ಭವನ ನಿರ್ಮಾಣ ಮಾಡಲಾಗಿದ್ದು ಕೆಲ ದಿನಗಳ ಹಿಂದೆ ಉದ್ಘಾಟಿಸಲಾಗಿದೆ. ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಕಮಲಾಪುರದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.

ಕನಕದಾಸರು ವರ್ಣ, ವರ್ಗ, ಜಾತಿ ಭೇದ ಹೋಗಲಾಡಿಸಿ ಸಮ ಸಮಾಜದ ಕಲ್ಪನೆ ಕಟ್ಟಿಕೊಟ್ಟರು. ಸಮಾಜದ ಕೆಳಸ್ಥರದವರ ಶೋಷಣೆಗೆ ಕಾರಣವಾದ ಮೌಢ್ಯ, ಕಂದಾಚಾರಗಳಿಗೆ ಕಡಿವಾಣ ಹಾಕಿದರು. ಸ್ತ್ರೀಯರ ಸ್ವಾತಂತ್ರ್ಯ ಸಮಾನತೆಗೆ ಒತ್ತಕೊಟ್ಟಿದ್ದರು. ಇಂಥ ಸಂತರನ್ನು ಕುರುಬ ಸಮಾಜಕ್ಕೆ ಅಷ್ಟೆ ಸೀಮಿತಗೊಳಿಸಬಾರದು. ಮನುಜ ಕುಲಕ್ಕೆ ಮಾದರಿಯಾಗಿಟ್ಟುಕೊಳ್ಳಬೇಕು ಎಂದರು.

ಸಿದ್ಧರಾಮಾನಂದಪುರಿ ಸ್ವಾಮೀಜಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಮಾಜಿ ಸದಸ್ಯ ಶರಣಬಸಪ್ಪ ಪಾಟೀಲ, ಶಿವಕುಮಾರ್ ಪಸಾರ, ಉದಯ ಪಾಟೀಲ ರಟಕಲ್, ಗುರುರಾಜ ಮಾಟೂರ, ಶಿವಕುಮಾರ ದೋಶೆಟ್ಟಿ, ಮಲ್ಲಿಕಾರ್ಜುನ ಮರತೂರಕರ್, ಕುರುಬ ಸಮಾಜ ತಾಲ್ಲೂಕು ಅಧ್ಯಕ್ಷ ಮಹದೇವ ದಸ್ತಾಪುರ, ಶಿಕ್ಷಕಿ ವಿಶಾಲಾಕ್ಷಿ ಮಾಯಣ್ಣವರ, ಗುರುನಾಥ ಪೂಜಾರಿ, ಸತೀಶ ಪೂಜಾರಿ, ಅಣ್ಣಪ್ಪ ಪೂಜಾರಿ, ಯಲಗುಂಡ ಹಿರೇಕುರುಬ, ಪೀರಪ್ಪ ಹೋಗೊಂಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT