ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ವಾಡಿ ಪೊಲೀಸ್ ಠಾಣೆಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಐವರು ಪೊಲೀಸ್ ಕಾನ್ಸ್ಟೆಬಲ್ಗಳು ಇಸ್ಪೀಟ್ ಆಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಖಾಕಿ ಬಟ್ಟೆಯ ಸಮವಸ್ತ್ರದಲ್ಲಿ ಇಬ್ಬರು ಹಾಗೂ ಸಾಮಾನ್ಯ ಬಟ್ಟೆ ಧರಿಸಿದ ಮೂವರು ಕಾನ್ಸ್ಟೆಬಲ್ಗಳು ಇಸ್ಪೀಟ್ ಆಡುತ್ತಿದ್ದಾರೆ. ಪಕ್ಕದಲ್ಲಿಯೇ ಗುಟ್ಕಾ, ತಂಬಾಕು ಮತ್ತು ಸುಣ್ಣದ ಪ್ಯಾಕೇಟ್ಗಳು ಇರುವುದು 7 ಸೆಕೆಂಡ್ಗಳ ವಿಡಿಯೊದಲ್ಲಿ ಸೆರೆಯಾಗಿವೆ. ವಿಡಿಯೊ ಮಾಡುತ್ತಿರುವುದನ್ನು ಗಮನಿಸಿದ ಕಾನ್ಸ್ಟೆಬಲ್ ಒಬ್ಬರು, ವಿಡಿಯೊ ಮಾಡಬೇಡ ಎಂದು ಸನ್ನೆಯ ಮೂಲಕ ಸೂಚಿಸಿದ ದೃಶ್ಯವೂ ಇದೆ.

‘ಕಾನ್ಸ್ಟೆಬಲ್ಗಳ ಇಸ್ಪೀಟ್ ಜೂಜಾಟದ ವಿಡಿಯೊ ಹಳೆಯದ್ದು. ದಸರಾ ಹಬ್ಬದ ಆಯುಧಪೂಜೆಯ ದಿನ ಮಧ್ಯಾಹ್ನದ ವೇಳೆ ಕಾನ್ಸ್ಟೆಬಲ್ಗಳು ಇಸ್ಪೀಟ್ ಆಡುತ್ತಿದ್ದರು. ಅದನ್ನು ಮಹಿಳಾ ಕಾನ್ಸ್ಟೆಬಲ್ ಒಬ್ಬರು ಸೆರೆಹಿಡಿದಿದ್ದರು. ಈ ವಿಡಿಯೊ ಮುಂದಿಟ್ಟುಕೊಂಡು ಬ್ಲ್ಯಾಕ್ಮೇಲ್ ಸಹ ಮಾಡಿದ್ದರು. ಈ ವಿಚಾರ ಮೇಲಧಿಕಾರಿಗಳ ಗಮನಕ್ಕೆ ಬಂದು ಅವರನ್ನು ವರ್ಗಾವಣೆ ಮಾಡಿದ್ದಾರೆ. ಈಗ ವಿಡಿಯೊವನ್ನು ಬಹಿರಂಗಪಡಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ‘ಇಸ್ಪೀಟ್ ಜೂಜಾಟದ ವಿಡಿಯೊ ಹಳೆಯದ್ದು ಎನ್ನುತ್ತಿದ್ದಾರೆ. ಈ ಸಂಬಂಧ ತಕ್ಷಣವೇ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇನೆ. ವಿಡಿಯೊ ಎಷ್ಟೇ ಹಳೆಯದ್ದು ಆಗಿದ್ದರೂ ಠಾಣೆಯಲ್ಲಿ ಇಸ್ಪೀಟ್ ಆಡಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.