ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಜಿಲ್ಲೆಯಲ್ಲಿ ಒಂದೇ ದಿನ 105 ಸೋಂಕಿತರು: 15 ಮಕ್ಕಳಿಗೂ ಕೋವಿಡ್

ಮಹಾರಾಷ್ಟ್ರದಿಂದ ವಾಪಸಾದವರ ಮೇಲೆ ನಿಗಾ
Last Updated 3 ಜೂನ್ 2020, 14:23 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 105 ಜನರಲ್ಲಿ ಕೋವಿಡ್‌–19 ಸೋಂಕು ಕಾಣಿಸಿಕೊಳ್ಳುವ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಕಲಬುರ್ಗಿ ಮೊದಲ ಸ್ಥಾನ ಪಡೆದಿದೆ. ಮಂಗಳವಾರ 100 ಜನರಿಗೆ ಸೋಂಕು ಇರುವುದು ದೃಢವಾಗಿತ್ತು.

ಬುಧವಾರ ಪತ್ತೆಯಾದ ಸೋಂಕಿತರ ಪೈಕಿ 1 ವರ್ಷದಿಂದ 8 ವರ್ಷದೊಳಗಿನ 15 ಮಕ್ಕಳಲ್ಲಿಯೂ ಕೋವಿಡ್‌ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಜಿಲ್ಲೆಯ ಚಿಂಚೋಳಿ, ಕಾಳಗಿ ಹಾಗೂ ಚಿತ್ತಾಪುರ ತಾಲ್ಲೂಕಿನವರೇ ಸೋಂಕಿತರ ಪೈಕಿ ಹೆಚ್ಚು ಜನರಿದ್ದಾರೆ. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಕಳೆದ ಮೇ 29ರಂದು ಜಿಲ್ಲಾಡಳಿತ 28,857 ಜನರನ್ನು ಕ್ವಾರಂಟೈನ್ ಕೇಂದ್ರಗಳಿಂದ ಮನೆಗೆ ಕಳುಹಿಸಿದೆ. ಅವರಲ್ಲಿ ಗಂಟಲು ದ್ರವ ನೀಡಿ ಕೊರೊನಾ ಫಲಿತಾಂಶಕ್ಕಾಗಿ ಕಾಯುತ್ತಿರುವವರೂ ಇದ್ದರು.

ಜಿಲ್ಲೆಯಲ್ಲಿ ಒಟ್ಟು 510 ಜನರಿಗೆ ಸೋಂಕು ಹರಡಿದಂತಾಗಿದ್ದು, ಅವರ ಪೈಕಿ 128 ಜನರು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. 375 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 7 ಜನ ಮೃತರಾಗಿದ್ದಾರೆ.

ಎರಡು ಶ್ರಮಿಕ ರೈಲು ಹಾಗೂ 700ಕ್ಕೂ ಅಧಿಕ ಬಸ್‌ಗಳ ಮೂಲಕ ಮಹಾರಾಷ್ಟ್ರದ ವಿವಿಧೆಡೆ ಇದ್ದ ಕಾರ್ಮಿಕರನ್ನು ಜಿಲ್ಲೆಗೆ ವಾಪಸ್‌ ಕರೆತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT