ಸೋಮವಾರ, ಮಾರ್ಚ್ 1, 2021
24 °C

ಅಕ್ರಮ ಮದ್ಯ ಜಪ್ತಿ, ಬೈಕ್‌ಗಳ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಇಲ್ಲಿನ ಅಬಕಾರಿ ಇಲಾಖೆಯ ಉಪ ವಿಭಾಗದ ಅಧಿಕಾರಿಗಳು ತಾಲ್ಲೂಕಿನ ವಾಡಿ ಪಟ್ಟಣದ ಬಲರಾಮ್ ಚೌಕ್ ಹತ್ತಿರ ಹಾಗೂ ಶಹಾಬಾದ್ ಎಬಿಎಲ್ ಕ್ರಾಸ್ ಹತ್ತಿರ ಸೋಮವಾರ, ಪ್ರತ್ಯೇಕ ದಾಳಿ ಮಾಡಿ ಮದ್ಯ ಮತ್ತು ಎರಡು ಬೈಕ್ ಜಪ್ತಿ ಮಾಡಿದ್ದಾರೆ.

ಅಕ್ರಮ ಮದ್ಯ ಸಾಗಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅಬಕಾರಿ ಅಧಿಕಾರಿ, ಸಿಬ್ಬಂದಿ ಮದ್ಯ ಸಾಗಾಟ ಮಾಡುತ್ತಿದ್ದ ಎರಡು ಬೈಕ್, ಮೂರು ಬಾಕ್ಸ್ 26 ಲೀಟರ್ ಸ್ವದೇಶಿ ಮದ್ಯ, ಎರಡು ಬಾಕ್ಸ್ 15 ಲೀಟರ್ ಬಿಯರ್ ಜಪ್ತಿ ಮಾಡಿದ್ದಾರೆ. ದಾಳಿ ಸಮಯದಲ್ಲಿ ಬೈಕ್ ಸವಾರರು ಪರಾರಿಯಾಗಿದ್ದಾರೆ.

ಅಬಕಾರಿ ವಲಯ ನಿರೀಕ್ಷಕ ರಮೇಶ ಬಿರಾದಾರ, ಅಬಕಾರಿ ನಿರೀಕ್ಷಕ ಧನರಾಜ ನೇತೃತ್ವದಲ್ಲಿ ದಾಳಿ ನಡೆದಿದೆ. ಸಿಬ್ಬಂದಿ ಶಿವಾನಂದ, ಶರಣಬಸಪ್ಪ, ಮಹಾಂತೇಶ, ನಾಗರಾಜ, ಸುಭಾಷ, ಭಾಷಾಸಾಬ್, ಮಲ್ಲು ಅವರು ಭಾಗವಹಿಸಿದ್ದಾರೆ. ಚಿತ್ತಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.