ಕಲಬುರ್ಗಿ: ಪತ್ನಿ ಸಾವು, ಪತಿ ಆತ್ಮಹತ್ಯೆ

ಮಹಾಗಾಂವ್ ಕ್ರಾಸ್ (ಕಮಲಾಪುರ): ಪತ್ನಿ ಹೃದಯಾಘಾತದಿಂದ ಮೃತಪಟ್ಟ ಮಾರನೇ ದಿನವೇ ರಾತ್ರಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಮಹಾಗಾಂವ ಕ್ರಾಸ್ ಬಳಿ ಶುಕ್ರವಾರ ಬೆಳಕಿಗೆ ಬಂದಿದೆ.
ದೇವೇಂದ್ರ ರವೀಂದ್ರ ಗುತ್ತೇದಾರ (28) ಮತ್ತು ಜ್ಯೋತಿ (23) ಮೃತರು. ತಾಲ್ಲೂಕಿನ ಲಾಡ್ಮುಗಳಿ ಗ್ರಾಮಸ್ಥರಾದ ಅವರು ಮಹಾರಾಷ್ಟ್ರದ ಪುಣೆಯಲ್ಲಿ ವಾಸವಿದ್ದರು.
‘ಮನೆ ಬಾಡಿಗೆ ವಸೂಲಿ ಮತ್ತು ಇತರ ಕಾರ್ಯಕ್ಕೆಂದು ಕಲಬುರ್ಗಿಗೆ ಬಂದಿದ್ದ ವೇಳೆ ಪತ್ನಿ ಜ್ಯೋತಿ ಹೃದಯಾಘಾತದಿಂದ ಮೃತಪಟ್ಟಿದ್ದು ದೇವೇಂದ್ರಗೆ ಗೊತ್ತಾಗಿದೆ. ಶುಕ್ರವಾರ ಬೆಳಿಗ್ಗೆ ಅವರ ಶವ ಮಹಾಗಾಂವ ಕ್ರಾಸ್ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’ ಎಂದು ಮಹಾಗಾಂವ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.