ಆಳಂದ: ತಾಲ್ಲೂಕಿನಲ್ಲಿ ಅಧಿಕ ಮಳೆ, ಪ್ರವಾಹದಿಂದ ಅಮರ್ಜಾ ನದಿ ದಡ ಹಾಗೂ ಕಾರ್ಖಾನೆಯ ವ್ಯಾಪ್ತಿಯ ರೈತರ ಹಾಳಾದ ಕಬ್ಬಿಗೆ ಎಕರೆ ₹50 ಸಾವಿರ ಪರಿಹಾರ ನೀಡಬೇಕು’ ಎಂದು ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗುರುಲಿಂಗ ಜಂಗಮ ಮಾಲಿ ಪಾಟೀಲ್ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಮರ್ಜಾ ಅಣೆಕಟ್ಟೆಯ ಕೆಳ ಭಾಗದ ರೈತರ ಹೋಲಗಳಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಮುಂಗಾರು ಬೆಳೆ ಹಾಗೂ ಕಬ್ಬು ಹಾಳಾಗಿವೆ. ತಕ್ಷಣ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು’ ಎಂದರು.

ಕಬ್ಬು ಸಾಗಿಸಿದ ರೈತರಿಗೆ ಪ್ರತಿ ಟನಗೆ 1 ಕೆಜಿ ಸಕ್ಕರೆ, ಎಸ್.ಎಸ್.ಕೆ.ಎನ್ ಕಾರ್ಖಾನೆಯ ಸರ್ವ ಸದಸ್ಯರಿಗೆ 25 ಕೆಜಿ ಸಕ್ಕರೆ ವಿತರಣೆ ಮಾಡಬೇಕು. ಕಬ್ಬು ಬೆಳೆಗಾರರ ಗದ್ದೆಗಳಿಗೆ ಭೇಟಿ ನೀಡಿದ ಕಾರ್ಖಾನೆ ಅಧಿಕಾರಿಗಳು ರೈತರಿಗೆ ಉಳಿದ ಕಬ್ಬು ಬೆಳೆ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಬೇಕು, ಜತೆಗೆ ಕಾರ್ಖಾನೆಯ ಕಬ್ಬು ಕಟಾವು ಬೇಗ ಆರಂಭಿಸುವ ಸಿದ್ದತೆ ಕೈಗೊಳ್ಳಲು ಎನ್ ಎಸ್ ಎಲ್ ಕಾರ್ಖಾನೆ ಆಡಳಿತ ಮಂಡಳಿಗೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.