ಕಲಬುರಗಿ: ‘ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಇಂಥ ಪ್ರಕರಣಗಳ ಪತ್ತೆಗೆ ಗೋಲ್ಡನ್ ಅವರ್ (24 ಗಂಟೆಗಳ) ತುಂಬಾ ಮುಖ್ಯ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಹೇಳಿದರು.

‘ಸೈಬರ್ ವಂಚನೆಗೆ ಒಳಗಾದ ಸಂತ್ರಸ್ತರು ವಂಚನೆ ನಡೆದ 24 ಗಂಟೆಗಳಲ್ಲಿ ಪ್ರಕರಣ ದಾಖಲಿಸಿದರೆ, ಕಳೆದುಕೊಂಡ ಹಣ ಜಪ್ತಿ ಮಾಡುವ ಸಾಧ್ಯತೆ ಶೇ 70ರಿಂದ ಶೇ 85ರಷ್ಟು ಇರುತ್ತದೆ’ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಸಂತ್ರಸ್ತರು ಬ್ಯಾಂಕ್ ರಜೆ ಇದೆ, ಇಂದು ಸರ್ಕಾರಿ ರಜೆ, ಸಂಜೆಯಾಗಿದೆ ಎಂದೆಲ್ಲ ಉದಾಸೀನ ಮಾಡಬಾರದು. ಯಾವುದೇ ತನಿಖಾ ಸಂಸ್ಥೆಯಲ್ಲಿ ಡಿಜಿಟಲ್ ಅರೆಸ್ಟ್ ಎಂಬುದೇ ಇಲ್ಲ. ಹೀಗಾಗಿ ಜನರಿಗೆ ಅನಗತ್ಯ ಭಯ ಬೇಡ. ಒಂದೊಮ್ಮೆ ವಂಚನೆಗೆ ಒಳಗಾದರೆ ಕೂಡಲೇ ಸೈಬರ್ ಸಹಾಯವಾಣಿ 1930ಗೆ ಕರೆ ಮಾಡಿ ದೂರು ದಾಖಲಿಸಬೇಕು. ಸೆನ್ ಪೊಲೀಸ್ ಠಾಣೆ ಇಲ್ಲವೇ ಹತ್ತಿರದ ಪೊಲೀಸ್ ಠಾಣೆ ಹೋಗಿ ದೂರು ಕೊಡಬೇಕು. ಇದರಿಂದ ಚುರುಕಿನ ತನಿಖೆ ಸಾಧ್ಯವಾಗುತ್ತದೆ’ ಎಂದರು.

‘ವಿವಿಧ ಬಗೆಯ ಸೈಬರ್ ಅಪರಾಧಗಳ ಮೂಲಕ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 2025ರ ಜನವರಿಯಿಂದ ಈ ತನಕ ಸೈಬರ್ ಸಹಾಯವಾಣಿ 1930 ಮೂಲಕ ನಗರದಲ್ಲಿ 2,200ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಜನರು ₹8.93 ಕೋಟಿ ಕಳೆದುಕೊಂಡಿದ್ದಾರೆ. ಅದರಲ್ಲಿ ₹96.82 ಲಕ್ಷ ಜಪ್ತಿ ಮಾಡಿಕೊಂಡು ಸಂತ್ರಸ್ತರಿಗೆ ಮರಳಿಸಲಾಗಿದೆ. ಇದೇ ಅವಧಿಯಲ್ಲಿ ಠಾಣೆಯಲ್ಲಿ ದಾಖಲಾದ 40 ಪ್ರಕರಣಗಳಲ್ಲಿ ನಾಗರಿಕರು ₹12.72 ಕೋಟಿ ಕಳೆದುಕೊಂಡಿದ್ದಾರೆ. ಅದರಲ್ಲಿ ₹1.76 ಕೋಟಿ ಜಪ್ತಿ ಮಾಡಿ ಸಂತ್ರಸ್ತರಿಗೆ ಮರಳಿಸಲಾಗಿದೆ’ ಎಂದರು.

‘ಚುರುಕಿನ ಕಾರ್ಯಾಚರಣೆಯ ಫಲವಾಗಿ ವರ್ಷದಿಂದ ವರ್ಷಕ್ಕೆ ಕಳೆದುಕೊಂಡ ಹಣದ ರಿಕವರಿ ಪ್ರಮಾಣ ಹೆಚ್ಚುತ್ತಿದೆ. 1930 ಸಹಾಯವಾಣಿ ಮೂಲಕ 2023ರಲ್ಲಿ 1029 ದೂರುಗಳು ದಾಖಲಾಗಿದ್ದವು. ವಂಚಕರು ₹6.16 ಕೋಟಿ ದೋಚಿದ್ದರು. ಅದರಲ್ಲಿ ಶೇ 2.78ರಷ್ಟು ಮೊತ್ತ ಜಪ್ತಿಯಾಗಿತ್ತು. 2024ರಲ್ಲಿ 1,592 ದೂರು ದಾಖಲಾಗಿ, ₹18.87 ಕೋಟಿ ಸೈಬರ್ ವಂಚಕರು ದೋಚಿದ್ದರು. ಅದರಲ್ಲಿ ಶೇ 1.84ರಷ್ಟು ಮೊತ್ತ ರಿಕವರಿ ಆಗಿತ್ತು. 2025ರಲ್ಲಿ 2,275 ದೂರು ದಾಖಲಾಗಿ, ₹21.86 ಕೋಟಿ ವಂಚಕರ ಪಾಲಾಗಿತ್ತು. ಅದರಲ್ಲಿ ಶೇ 12.50ರಷ್ಟು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆವು. ಒಟ್ಟು 15 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

ಇದೇ ವೇಳೆ ಸೈಬರ್ ವಂಚನೆಯ ಸಂತ್ರಸ್ತರಿಗೆ ಪೊಲೀಸರು ಹಣ ಮರಳಿಸಿದ ದಾಖಲೆಯನ್ನು ಹಸ್ತಾಂತರಿಸಿದರು.

ಸೈಬರ್ ವಂಚನೆ ಏಕಮುಖವಲ್ಲ. ನಾಗರಿಕರ ಸಹಕಾರವಿಲ್ಲದೇ ವಂಚನೆ ಸಾಧ್ಯವಿಲ್ಲ. ನಾಗರಿಕರು ಆಮಿಷ ಬಿಟ್ಟರೆ ಸುರಕ್ಷಿತವಾಗಿ ಇರಬಹುದು
–ಶರಣಪ್ಪ ಎಸ್.ಡಿ., ನಗರ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.