ಕಲಬುರಗಿ: ಗಣರಾಜ್ಯೋತ್ಸವ ದಿನದಂದು ರಾಯಚೂರು ನ್ಯಾಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಿದ ಘಟನೆಯ ತನಿಖೆ ನಡೆಸಿ ತಪ್ಪಿತಸ್ಥ ನ್ಯಾಯಾಧೀಶರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳವರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗಂಜ್ ಬಳಿಯ ನಗರೇಶ್ವರ ಶಾಲೆಯಿಂದ ಆರಂಭವಾದ ಮೆರವಣಿಗೆಯು ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಹಾಯ್ದು ಜಿಲ್ಲಾಧಿಕಾರಿ ಕಚೇರಿ ತಲುಪಿತು.

ನೀಲಿ ಧ್ವಜ, ಅಂಬೇಡ್ಕರ್ ಅವರ ಭಾವಚಿತ್ರ, ಸಂವಿಧಾನದ ಪ್ರಸ್ತಾವನೆಯ ಫಲಕ ಹಾಗೂ ಅಂಬೇಡ್ಕರ್ ಅವರ ಭಾಷಣಗಳುಳ್ಳ ಪುಸ್ತಕಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ‘ರಾಯಚೂರು ನ್ಯಾಯಾಲಯದ ಆವರಣದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ತೆರವುಗೊಳಿಸಲಾಗಿದೆ. ಆದ್ದರಿಂದ ಈ ಸೂಚನೆ ನೀಡಿದ ನ್ಯಾಯಾಧೀಶರ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿಗಳು ಮಧ್ಯಪ್ರವೇಶಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕಲಬುರಗಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿಯೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಿರಲಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಜಿಲ್ಲಾ ಗಣರಾಜ್ಯೋತ್ಸವ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ದಲಿತ ಮುಖಂಡ ಡಾ.ವಿಠ್ಠಲ ದೊಡ್ಡಮನಿ, ಡಾ. ಮಲ್ಲೇಶಿ ಸಜ್ಜನ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಹಾದಿಮನಿ, ರಿಪಬ್ಲಿಕನ್ ಪಾರ್ಟಿಯ ಮುಖಂಡ ಎ.ಬಿ. ಹೊಸಮನಿ, ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಚಾಲಕ ಅರ್ಜುನ್ ಭದ್ರೆ, ಮುಖಂಡರಾದ ರವಿ ಚವ್ಹಾಣ, ಪ್ರಕಾಶ ಮೂಲಭಾರತಿ, ಸಂತೋಷ ಮೇಲ್ಮನಿ, ಹಣಮಂತ ಇಟಗಿ, ಪರಮೇಶ್ವರ ಖಾನಾಪುರ, ಮರೆಪ್ಪ ಹಳ್ಳಿ, ಅಶ್ವಿನಿ ಮದನಕರ,ದ್ಯಾವಮ್ಮ, ಭಾಗಮ್ಮ, ಪಾರ್ವತಿ, ಶಾರದಾಬಾಯಿ, ನೀಲಮ್ಮ, ಶಿವಕಾಂತಮ್ಮ, ಕಸ್ತೂರಿಬಾಯಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದಲಿತ ಸೇನೆ: ಅಂಬೇಡ್ಕರ್ ಭಾವಚಿತ್ರ ತೆರವು ಖಂಡಿಸಿ ದಲಿತ ಸೇನೆಯ ಕಾರ್ಯಕರ್ತರು ನಗರದ ಎಂಎಸ್ಕೆ ಮಿಲ್ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೆಲ ಹೊತ್ತು ಮಿನಿ ವಿಧಾನಸೌಧದ ಎದುರಿನ ರಸ್ತೆಯನ್ನು ದಿಢೀರ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಘೋಷಣೆ ಕೂಗಿದರು. ಗಣರಾಜ್ಯೋತ್ಸವದ ದಿನ ಸಂವಿಧಾನ ಕರ್ತೃವಿಗೆ ಉದ್ದೇಶಪೂರ್ವಕವಾಗಿ ಅವಮಾನಿಸಿ, ಸಂವಿಧಾನಕ್ಕೆ ಅಗೌರವ ತೋರಿರುವವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ಅವಮಾನ, ದೇಶದ್ರೋಹ ಮತ್ತು ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಸಂಘಟನೆಯ ಅಧ್ಯಕ್ಷ ಹಣಮಂತ ಯಳಸಂಗಿ ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಶಿವಲಿಂಗ ಚಲಗೇರಿ, ಮಂಜುನಾಥ ಭಂಡಾರಿ, ಗುರು ಮಾಳಗೆ, ಶ್ರೀಕಾಂತ ರೆಡ್ಡಿ, ಮಲ್ಲಿಕಾರ್ಜುನ ಭೋಳಣಿ, ಜಗನ್ನಾಥ ಮುದ್ದಡಗಾ, ಕಾಶನಾಥ ಸಿಂಧೆ ಇತರರು ಇದ್ದರು.

ವಕೀಲರ ಮಧ್ಯೆ ಚಕಮಕಿ

ಕಲಬುರಗಿ: ರಾಯಚೂರಿನಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಿದ ಘಟನೆಯನ್ನು ಖಂಡಿಸಲು ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ವಕೀಲರ ಸಂಘದವರು ಬಂದಿದ್ದಾಗ ರಸ್ತೆ ತಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ವಕೀಲರ ಮಧ್ಯೆ ಚಕಮಕಿ ನಡೆಯಿತು.

ಕೆಲವರು ರಸ್ತೆ ತಡೆ ಮಾಡೋಣವೆಂದು ಪಟ್ಟಿ ಹಿಡಿದು ವಾಹನಗಳನ್ನು ತಡೆದರು. ಇನ್ನು ಕೆಲವರು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಕೊಡೋಣ ಎಂದರು. ಇದಕ್ಕೆ ಒಮ್ಮತ ಮೂಡಲಿಲ್ಲ. ಈ ಸಂದರ್ಭದಲ್ಲಿ ವಾಗ್ವಾದ, ನೂಕಾಟ ನಡೆಯಿತು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸ್ ಅಧಿಕಾರಿಗಳು, ನಿಮ್ಮ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಅವರು ಬಂದಿದ್ದಾರೆ ಎಂದು ಹೇಳಿ ಕರೆದೊಯ್ದರು. ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಮನವಿ ಸ್ವೀಕರಿಸಿದರು. ಅಲ್ಲಿಯೂ ಕೆಲ ವಕೀಲರು ಗಂಟೆಗಟ್ಟಲೇ ನಮ್ಮನ್ನು ಬಿಸಿಲಲ್ಲಿ ನಿಲ್ಲಿಸಿದ್ದೀರಿ. ತಕ್ಷಣ ಬರಬೇಕಿತ್ತು ಎಂದು ತಕರಾರು ಮಾಡಿದರು. ಆದರೆ, ಗುರುಕರ್ ಇದಕ್ಕೆ ಪ್ರತಿಕ್ರಿಯಿಸದೇ ಮನವಿ ಸ್ವೀಕರಿಸಿ ಕಚೇರಿಯೊಳಗೆ ತೆರಳಿದರು.

ಈ ಸಂದರ್ಭದಲ್ಲಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಎಸ್. ಕಡಗಂಚಿ, ಉಪಾಧ್ಯಕ್ಷೆ ಫತ್ರುಬಿ ಎ.ಖಾಸಿಮಶಾ, ಪ್ರಧಾನ ಕಾರ್ಯದರ್ಶಿ ಪಿ.ಎನ್. ಕಪನೂರ, ಖಜಾಂಚಿ ವಿಶ್ವರಾಧ್ಯ ಕೆ. ಇಜೇರಿ, ಜಂಟಿ ಕಾರ್ಯದರ್ಶಿ ದೇವನಾಥ ಎಸ್. ಮಳಗಿ, ಸಂಘದ ಮಾಜಿ ಅಧ್ಯಕ್ಷ ಅರುಣಕುಮಾರ ಕಿಣ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.