ಗುರುವಾರ , ಮಾರ್ಚ್ 23, 2023
22 °C

ಸನ್ನತಿಗೆ ನೇರ ಬಸ್ ಸೌಲಭ್ಯಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಶಕ್ತಿಪೀಠ ಸನ್ನತಿಯ ಚಂದ್ರಲಾ ಪರಮೇಶ್ವರಿ ಕ್ಷೇತ್ರಕ್ಕೆ ಕಲಬುರಗಿಯಿಂದ ನೇರವಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ್ ಅವರಿಗೆ ಭಕ್ತರ ನಿಯೋಗದಿಂದ ಮನವಿ ಪತ್ರ ಸಲ್ಲಿಸಲಾಯಿತು.

ಇತಿಹಾಸ ಪ್ರಸಿದ್ಧ ಸನ್ನತಿಗೆ ಬಸ್ ಸೌಲಭ್ಯವೇ ಇಲ್ಲ. ಕೇವಲ ರಾತ್ರಿ ವಸ್ತಿ ಬಸ್ ಬಿಟ್ಟರೆ ಬಸ್ ಸೌಕರ್ಯವೇ ಇಲ್ಲ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಕಲಬುರಗಿ ಕೇಂದ್ರ ಸ್ಥಾನದಿಂದ ಬೆಳಿಗ್ಗೆ 8ಕ್ಕೆ ಬಸ್ ಸಂಚಾರ ಆರಂಭಿಸಬೇಕು ಎಂದು ಕೋರಿದರು.

ಮನವಿಗೆ ಸ್ಪಂದಿಸಿದ ತೆಲ್ಕೂರ ಎರಡು ದಿನಗಳಲ್ಲಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಚಂದ್ರಲಾಂಬಾ ಸೇವಾ ಸಮಿತಿ ಅಧ್ಯಕ್ಷ ಬಿಂದುರಾವ್ ಶಿರವಾಳ, ಚಂದ್ರಕಾಂತ ಯರಗೋಳ, ಮೋಹನರಾವ್ ಮಾರಡಗಿ, ವೆಂಕಟೇಶ್ ಮಳ್ಳಿ, ರಾಘವೇಂದ್ರ ಕುಲಕರ್ಣಿ, ಕೊಪ್ರೇಶ ದೇಶಪಾಂಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.