ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಒಡಲು ಬಗೆದರೂ ಹನಿ ನೀರಿಲ್ಲ...

ಕುಡಿಯುವ ನೀರು ಕೊರತೆಯ 282 ಸಂಭವನೀಯ ಗ್ರಾಮಗಳ ಪೈಕಿ ಅಫಜಲಪುರ, ಆಳಂದ, ಕಲಬುರಗಿಯಲ್ಲೇ ಅತ್ಯಧಿಕ
Published : 19 ಫೆಬ್ರುವರಿ 2024, 5:56 IST
Last Updated : 19 ಫೆಬ್ರುವರಿ 2024, 5:56 IST
ಫಾಲೋ ಮಾಡಿ
Comments
ಅಫಜಲಪುರ ತಾಲ್ಲೂಕಿನಲ್ಲಿ ಬತ್ತಿರುವ ಭೀಮಾ ನದಿಯ ಒಡಲು
ಅಫಜಲಪುರ ತಾಲ್ಲೂಕಿನಲ್ಲಿ ಬತ್ತಿರುವ ಭೀಮಾ ನದಿಯ ಒಡಲು
ಜಲ ಮೂಲಗಳಿಂದ ಕೊಳವೆ ಮೂಲಕ ತೀರ ಅಗತ್ಯ ಇದ್ದಲ್ಲಿ ವಾಹನಗಳ ಮುಖೇನ ನೀರು ಸರಬರಾಜು ಮಾಡಲಾಗುವುದು. 151 ಕೊಳವೆ ಬಾವಿಗಳನ್ನು ಪತ್ತೆ ಹಚ್ಚಿ ಅವುಗಳ ದುರಸ್ತಿಗೂ ಟಾಸ್ಕ್‌ ಪೋರ್ಸ್‌ ಸಭೆಯಲ್ಲಿ ಸೂಚಿಸಲಾಗಿದೆ
ಅಲ್ಲಮಪ್ರಭು ಪಾಟೀಲ ಕಲಬುರಗಿ ದಕ್ಷಿಣ ಶಾಸಕರು
ಆಳಂದದಲ್ಲಿ ಕೊಳವೆ ಬಾವಿ ಕೊರೆಸಿದರು ಸಮರ್ಪಕ ನೀರು ಸಿಗುತ್ತಿಲ್ಲ. ಖಾಸಗಿ ಕೊಳವೆ ಬಾವಿ ತೆರೆದ ಬಾವಿಯ ಮೂಲಕ ನೀರು ಪೂರೈಸಲಾಗುವುದು
ಮಾನಪ್ಪ ಕಟ್ಟಿಮನಿ ಆಳಂದ ತಾ.ಪಂ ಇಒ
ಸರ್ಕಾರ ಆಲಮಟ್ಟಿ ಜಲಾಶಯದಿಂದ ಇಂಡಿ ಕಾಲುವೆ 18ರ ಮೂಲಕ ಭೀಮಾ ನದಿಗೆ ನೀರು ಹರಿಸಿದರೆ ಜಿಲ್ಲೆಯ ನೀರಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗುತ್ತದೆ
ಸಿದ್ದು ದಣ್ಣೂರ ಅಫಜಲಪುರ ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ
ಬೇಸಿಗೆಯಲ್ಲಿ ಮೂರು ದಿನಕ್ಕೊಮ್ಮೆ ನಲ್ಲಿ ನೀರು ಸರಬುರಾಜು ಮಾಡುತ್ತಾರೆ. ಕಟ್ಟಿಸಂಗಾವಿ ಸಮೀಪ ಭೀಮಾ ನದಿಯಲ್ಲಿ ನೀರು ಸಂಗ್ರಹಿಸಿಟ್ಟುಕೊಂಡರೆ ನೀರಿನ ಸಮಸ್ಯೆ ಎದುರಾಗುವುದಿಲ್ಲ
ಭೀಮರಾಯ ಮಡಿವಾಳ ಜೇವರ್ಗಿ ನಿವಾಸಿ
ಜೇವರ್ಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು
ಮರೆಪ್ಪ ಹಸನಾಪುರ ಜೇವರ್ಗಿ ನಿವಾಸಿ
ರಾಸಣಗಿ ಗ್ರಾಮದಲ್ಲಿ ಸುಮಾರು ₹ 42 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಕುಡಿಯುವ ನೀರು ಶುದ್ಧೀಕರಣ ಘಟಕ ಉಪಯೋಗಕ್ಕೆ ಬರುತ್ತಿಲ್ಲ. ಭೀಮಾ ನದಿ ನೀರು ಕಲುಷಿತವಾಗಿದ್ದು ಯಾರೂ ಉಪಯೋಗಿಸುತ್ತಿಲ್ಲ
ಮಲ್ಲೇಶಿ ಹೊಸಮನಿ ರಾಸಣಗಿ ಗ್ರಾಮಸ್ಥ
ಕಲಬುರಗಿ ಸಿಟಿಗೆ 26.68 ಎಂಎಲ್‌ಡಿ ಕೊರತೆ!
ಕಲಬುರಗಿ ನಗರದ ಸುಮಾರು 5.50 ಜನಸಂಖ್ಯೆಗೆ 108.68ಕ್ಕೂ ಅಧಿಕ ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್‌ ಡೇ) ಬೇಡಿಕೆ ಇದೆ. ಭೀಮಾ ನದಿಯಿಂದ 60 ಎಂಎಲ್‌ಡಿ ಹಾಗೂ ಬೆಣ್ಣೆತೋರಾ ನದಿಯಿಂದ 22 ಎಂಎಲ್‌ಡಿ ಸೇರಿ ಒಟ್ಟು 82 ಎಂಎಲ್‌ಡಿ ಸರಬರಾಜು ಆಗುತ್ತಿದೆ. ಆದರೆ ಇನ್ನೂ 26.68 ಎಂಎಲ್‌ಡಿ ಕೊರತೆ ಇದೆ.‌
20 ಬೋರ್‌ವೆಲ್ ನಿರುಪಯುಕ್ತ
ಚಿತ್ತಾಪುರ: ತಾಲ್ಲೂಕಿನ ರಾಜೋಳಾ ಡೋಣಗಾಂವ ದಿಗ್ಗಾಂವ ತೊನಸನಹಳ್ಳಿ (ಟಿ) ಚಾಮನೂರು ತುರನೂರು ಮಳಗ (ಎನ್) ನಾಲವಾರ ‌ಆಲೂರ ಹೊಸೂರು ಹಾಬಾನಾಯಕ ತಾಂಡಾ ಸನ್ನತಿ ಮತ್ತಿಮಡು ಮತ್ತು ಯಾಗಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯ ಸಂಭವನೀಯ ಗ್ರಾಮಗಳಾಗಿವೆ. 52 ಕೊಳವೆ ಬಾವಿಗಳ ಪೈಕಿ 32 ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. 20 ಕೊಳವೆ ಬಾವಿಗಳು ನಿರುಪಯುಕ್ತವಾಗಿದ್ದು ಕೆಲವು ಕೊಳವೆ ಬಾವಿಗಳ ಆಳಕ್ಕಿಳಿಸುವ ಕೆಲಸ ನಡೆಯುತ್ತಿದೆ. ‘ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಸಲಾಗಿದೆ. ನೀರು ಸರಬರಾಜು ವ್ಯವಸ್ಥೆಯ ಮೇಲೆ ನಿಗಾವಹಿಸಿದ್ದು ಕೆಲವು ಸಣ್ಣಪುಟ್ಟ ದುರಸ್ತಿ ಕೆಲಸಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಲಾಗುತ್ತಿದೆ’ ಎಂದು ತಾ.ಪಂ. ಇಒ ನೀಲಗಂಗಾ ಬಬಲಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಗತ್ಯ ಕ್ರಮಕ್ಕೆ ಸೂಚನೆ
‘ಜೇವರ್ಗಿ: ಚಿಗರಳ್ಳಿ ಯಾಳವಾರ ಲಕಣಾಪುರ ಕೆಲ್ಲೂರ ಹಾಗೂ ಮಂದೇವಾಲ ತಾಂಡಾ ನೀರಿನ ಸಮಸ್ಯೆ ಎದುರಿಸುವ ಸಾಧ್ಯತೆಗಳಿವೆ. ‘ಬೇಸಿಗೆಯ ಆರಂಭದಲ್ಲಿ ನೀರಿನ ಕೊರತೆ ಕಂಡುಬಂದರೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಮಲ್ಲಣ್ಣ ಯಲಗೋಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಐದು ದಿನಕ್ಕೊಮ್ಮೆ ನೀರು ಸರಬರಾಜು
ಆಳಂದ: ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಕಟ ಹೆಚ್ಚಾಗುತ್ತಿದ್ದು ಪಟ್ಟಣದಲ್ಲಿ ಐದು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ. ಸರಸಂಬಾ ಸಕ್ಕರಗಾ ಝಳಕಿ (ಕೆ) ಹಾಗೂ ಮದಗುಣಕಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಮೂಲ ಬತ್ತಿದ್ದು ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಯಿಂದ ಕುಡಿಯುವ ನೀರು ಖರೀದಿಸಿ ಗ್ರಾಮಸ್ಥರಿಗೆ ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT