ಚಿಂಚೋಳಿ: ತಾಲ್ಲೂಕಿನಲ್ಲಿ ರೈತನ ನಿರೀಕ್ಷೆಯಂತೆ ಮಳೆ ಸುರಿದಿದ್ದರಿಂದ ಆಲ್ಪಾವಧಿಯ ಉದ್ದು, ಹೆಸರು ಬೆಳೆಗಳು ಬಂಪರ್ ಇಳುವರಿಯ ನಿರೀಕ್ಷೆ ಮೂಡಿಸಿದ್ದವು. ಆದರೆ ರಾಶಿಯ ವೇಳೆಗೆ ನಿರಂತರ ಸುರಿದ ಮಳೆಯಿಂದ ರೈತರ ಹೊಲದಲ್ಲಿದ್ದ ಬೆಳೆಗಳು ರೈತನ ಮನೆ ಸೇರುವ ಮೊದಲೇ ಹೊಲದಲ್ಲಿಯೇ ಮೊಳಕೆಯೊಡೆದಿವೆ.

ಶೇ 60ರಷ್ಟು ಹೆಸರು ಬೆಳೆ ರೈತರ ಕೈಗೆಟುಕಿದರೆ, ಉದ್ದು ಮಳೆಯಿಂದ ರಾಶಿಗೂ ಮೊದಲೇ ಕಾಯಿಯಲ್ಲಿಯೇ ಕಾಳುಗಳು ನೆನೆದು ಮೊಳಕೆಯೊಡೆದಿವೆ. ಇದರಿಂದ ರೈತರು ನಷ್ಟಕ್ಕೆ ಗುರಿಯಾಗಿದ್ದಾರೆ. ಕಳೆದ ವರ್ಷ ಅನಾವೃಷ್ಟಿಯಿಂದ ರೈತರು ತೊಂದರೆ ಎದುರಿಸಿದರೆ ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ನಷ್ಟ ಅನುಭವಿಸುವಂತಾಗಿದೆ.

ರೈತನಿಗೆ ಉದ್ದಿನ ಬೆಳೆ ಹೊಲದಲ್ಲಿಯೇ ಬಿಡಲು ಆಗದೇ ರಾಶಿಯೂ ಮಾಡಲಾಗದೇ ತ್ರಿಶಂಕು ಸ್ಥಿತಿ ಎದುರಿಸುವಂತಾಗಿದೆ. ಅಳಿದುಳಿದ ಬೆಳೆ ರಾಶಿ ಮಾಡಿಕೊಂಡು ಬರಬೇಕೆಂದರೆ ಮಳೆ ಬಿಡುವು ನೀಡುತ್ತಿಲ್ಲ. ಉದ್ದಿನ ರಾಶಿಗೆ ನಿತ್ಯ ಸುರಿಯುತ್ತಿರುವ ಮಳೆ ಹಾಗೂ ಕಾರ್ಮಿಕರ ಕೊರತೆ ಕಾಡಿದರೆ, ಕಾರ್ಮಿಕರು ದುಬಾರಿ ಹಣಕ್ಕೆ ಬೇಡಿಕೆ ಇಡುತ್ತಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ತಾಲ್ಲೂಕಿನಲ್ಲಿ 13 ಸಾವಿರ ಹೆಕ್ಟೇರ್ ಹೆಸರು, 7 ಸಾವಿರ ಹೆಕ್ಟೇರ್ ಉದ್ದು, 7ಸಾವಿರ ಹೆಕ್ಟೇರ್ ಸೋಯಾ ಬಿತ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿಯೇ ಅತ್ಯಧಿಕ ತೊಗಡಿ ಬೆಳೆಯುವ ತಾಲ್ಲೂಕುಗಳಲ್ಲಿ ಒಂದಾಗಿರುವ ಚಿಂಚೋಳಿ ತಾಲ್ಲೂಕಿನಲ್ಲಿ 60 ಸಾವಿರಕ್ಕೂ ಅಧಿಕ ಪ್ರದೇಶದಲ್ಲಿ ಬೆಳೆಯುತ್ತಿರುವ ತೊಗರಿ ಬೆಳೆಗೂ ಮಳೆರಾಯನ ಕಾಟ ಕಾಡುತ್ತಿದೆ. ಇದರಿಂದ ಸೋಯಾ ಮತ್ತು ತೊಗರಿ ಬೆಳೆಯೂ ರೈತನ ಪಾಲಿಗೆ ಗಗನ ಕುಸುಮವಾಗತೊಡಗಿವೆ.

ಇಲ್ಲಿವರೆಗೆ ಸುರಿದ ಮಳೆಯಿಂದ ಉದ್ದು, ಹೆಸರು ಹಾಳಾದರೆ ಈಗ ತಗ್ಗು ಪ್ರದೇಶದಲ್ಲಿರುವ ಸೋಯಾ ಮತ್ತು ತೊಗರಿ ಬೆಳೆಗೂ ಕಂಟಕ ಎದುರಾಗಿದೆ. ಈಗಾಗಲೇ ಅಲ್ಲಲ್ಲಿ ತಗ್ಗು ಪ್ರದೇಶದಲ್ಲಿ ತೊಗರಿ ಬೆಳೆ ಒಣಗುತ್ತಿರುವುದು ಗೋಚರಿಸಿದೆ.

ರೈತರು ತೊಗರಿ ಬೆಳೆಯಲ್ಲಿ ನೀರು ನಿಲ್ಲದಂತೆ ಮಾಡಲು ಬಸಿಗಾಲುವೆ ನಿರ್ಮಿಸಬೇಕು. ಇದರಿಂದ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯ
ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ ಚಿಂಚೋಳಿ

ತಾಲ್ಲೂಕಿನಲ್ಲಿ ಉದ್ದು ಹೆಸರು ಬೆಳೆ ಮಳೆಯಿಂದ ಹಾಳಾಗಿ ರೈತರು ನಷ್ಟಕ್ಕೆ ಗುರಿಯಾಗಿದ್ದಾರೆ. ಕಳೆದ ವರ್ಷ ಬರಗಾಲದಿಂದ ಕಂಗಾಲಾದರೆ ಈ ವರ್ಷ ಅತಿವೃಷ್ಟಿ ಗಾಯದ ಮೇಲೆ ಬರೆ ಹಾಕಿದೆ
ಹಣಮಂತ ರಾಜಗೀರಾ ರೈತ ಸಾಲೇಬೀರನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.