ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಗ್ರಾ.ಪಂ ಉಪಚುನಾವಣೆಗೆ ವೇಳಾಪಟ್ಟಿ

Last Updated 6 ಮೇ 2022, 3:12 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಆಳಂದ, ಅಫಜಲಪುರ, ಸೇಡಂ, ಚಿತ್ತಾಪುರ, ಕಾಳಗಿ ಹಾಗೂ ಯಡ್ರಾಮಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 11 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ವೇಳಾಪಟ್ಟಿ ಪ್ರಕಟಿಸಿ ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಮೇ 10ರಂದು ಕೊನೆಯ ದಿನವಾಗಿದ್ದು, ಮೇ 11ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮೇ 13 ಅಂತಿಮ ದಿನ. ಅವಶ್ಯವಿದ್ದಲ್ಲಿ ಮೇ 21ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆಮರುಮತದಾನ ನಡೆಯಲಿದೆದ. ಮೇ 22ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.

ಆಳಂದ ತಾಲ್ಲೂಕಿನ ದಣ್ಣೂರ ತಾಂಡಾ, ಭೂಸನೂರ,ಅಫಜಲಪುರ ತಾಲ್ಲೂಕಿನ ಉಡಚಾಣ,ಸೇಡಂ ತಾಲ್ಲೂಕಿನ ಮಳಖೇಡ, ಯಡಗಾ,ಚಿತ್ತಾಪುರ ತಾಲ್ಲೂಕಿನ ಮಾಲಗತ್ತಿ, ರಾಂಪೂರಹಳ್ಳಿ, ರಾಂಪೂರಹಳ್ಳಿ,ಕಾಳಗಿ ತಾಲ್ಲೂಕಿನ ಕೋಡ್ಲಿ,ಯಡ್ರಾಮಿ ತಾಲ್ಲೂಕಿನ ಯಲಗೋಡ, ಕುಕನೂರ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT