ಯಾದಗಿರಿ: ಜಿಲ್ಲೆಯಲ್ಲಿ 1,568 ಅಂಗನವಾಡಿ ಕೇಂದ್ರಗಳಿದ್ದು ಸರ್ಕಾರದಿಂದ ಅನುದಾನ ಬಿಡುಗಡೆ ಆಗದೇ ಇರುವುದರಿಂದ 627 ಕೇಂದ್ರಗಳಲ್ಲಿ ನಾಲ್ಕೈದು ತಿಂಗಳುಗಳಿಂದ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಹೀಗಾಗಿ, ₹ 11.82 ಲಕ್ಷಕ್ಕೂ ಅಧಿಕ ಮೊತ್ತ ಬಾಕಿ ಇದೆ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1,568 ಅಂಗನವಾಡಿ ಕೇಂದ್ರಗಳ ಪೈಕಿ 924 ಕೇಂದ್ರಗಳಿಗೆ ಸ್ವಂತ ಕಟ್ಟಡ ಇದೆ. 475 ಕೇಂದ್ರಗಳು ಬಾಡಿಗೆ ಮೇಲೆ ನಡೆಯುತ್ತಿದ್ದು, ಉಳಿದವು ಗ್ರಾಮ ಪಂಚಾಯಿತಿ, ಸಮುದಾಯ ಭವನ, ಶಾಲಾ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸರಿಯಾದ ಅಡುಗೆ ಕೋಣೆ, ಹಾಳಾಗಿರುವ ನೆಲಹಾಸು, ಶಿಥಿಲ ಕಟ್ಟಡ, ಬಿರುಕು ಬಿಟ್ಟ ಗೋಡೆಗಳು, ಬಯಲಲ್ಲೇ ಮಕ್ಕಳ ಶೌಚಾಲಯ, ಬಾಲ ಸ್ನೇಹಿ ಗೋಡೆ ಬರಹವಿಲ್ಲದೆ, ಮಕ್ಕಳ ಆಟಿಕೆ ಸಾಮಾನುಗಳ ಕೊರತೆಗಳ ನಡುವೆ ಅಂಗನವಾಡಿ ಕೇಂದ್ರಗಳು ಸಾಗುತ್ತಿವೆ. ಇತ್ತ ವಿದ್ಯುತ್ ಬಿಲ್ ಪಾವತಿಸಬೇಕಾದ ಇಲಾಖೆಯ ವಿಳಂಬದಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ವಿದ್ಯುತ್ ಸಂಪರ್ಕ ಕಡಿತದ ಭೀತಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಒದಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯಾದಗಿರಿ ವಿಭಾಗವು ಯಾದಗಿರಿ ನಗರ, ಗ್ರಾಮೀಣ ಹಾಗೂ ಗುರುಮಠಕಲ್ ಒಳಗೊಂಡು 267 ಅಂಗನವಾಡಿ ಕೇಂದ್ರಗಳಿಂದ ಜೆಸ್ಕಾಂಗೆ ₹ 5.80 ಲಕ್ಷದಷ್ಟು ವಿದ್ಯುತ್ ಬಿಲ್ ಮೊತ್ತ ಪಾವತಿ ಮಾಡಬೇಕಿದೆ. ಈ ಅಂಗನವಾಡಿ ಕೇಂದ್ರಗಳಲ್ಲಿ ಕನಿಷ್ಠ ₹ 92ರಿಂದ ಗರಿಷ್ಠ ₹ 29,548ರವರೆಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ.

ಸುರಪುರ ವಿಭಾಗದ ಸುರಪುರ, ಹುಣಸಗಿ ಮತ್ತು ಶಹಾಪುರ ಒಳಗೊಂಡು 360 ಅಂಗನವಾಡಿ ಕೇಂದ್ರಗಳಿಂದ ₹ 6 ಲಕ್ಷ ವಿದ್ಯುತ್ ಬಿಲ್ ಬಾಕಿ ಪಾವತಿ ಆಗಬೇಕಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಜೆಸ್ಕಾಂನ ಲೆಕ್ಕ ವಿಭಾಗದ ಅಧಿಕಾರಿಗಳು ನಿರಂತರವಾಗಿ ಪತ್ರ ಬರೆಯುತ್ತಿದ್ದಾರೆ. ವಿದ್ಯುತ್ ಬಿಲ್ಗಳನ್ನು ಇಲಾಖೆಗೆ ಕಳುಹಿಸಿ, ಅಲ್ಲಿಂದ ಅನುಮೋದನೆಯಾಗಿ ಬರುವ ವೇಳೆಗೆ ನಾಲ್ಕೈದು ತಿಂಗಳು ಕಳೆಯುತ್ತಿದೆ ಎನ್ನುತ್ತಾರೆ ಯಾದಗಿರಿಯ ಜೆಸ್ಕಾಂ ಸಿಬ್ಬಂದಿ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯಾದಗಿರಿ ವಿಭಾಗದ ಅಂಗನವಾಡಿ ಕೇಂದ್ರಗಳ ₹ 3.90 ಲಕ್ಷ ವಿದ್ಯುತ್ ಬಿಲ್ ಅನ್ನು ಮಾರ್ಚ್ 3ರಂದು ಪಾವತಿ ಮಾಡಿತ್ತು. ಆ ಬಳಿಕ ಮತ್ತೆ ಪಾವತಿಗೆ ಮುಂದೆ ಬರಲಿಲ್ಲ. ಕಳೆದ ಜೂನ್ ತಿಂಗಳಲ್ಲಿ ಸೈದಾಪುರ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳ ₹ 71 ಸಾವಿರ, ಯಾದಗಿರಿ ನಗರ ಮತ್ತು ಗ್ರಾಮೀಣ ವ್ಯಾಪ್ತಿಯ ₹ 2.30 ಲಕ್ಷ ಹಾಗೂ ಗುರುಮಠಕಲ್ ತಾಲ್ಲೂಕಿನಿಂದ ಬಾಕಿ ಇರುವ ₹ 1.25 ಲಕ್ಷ ವಿದ್ಯುತ್ ಬಿಲ್ ಕಟ್ಟುವಂತೆ ಸಿಡಿಪಿಒಗೆ ಪತ್ರಗಳನ್ನು ಬರೆಯಲಾಗಿದೆ’ ಎನ್ನುತ್ತಾರೆ ಜೆಸ್ಕಾಂನ ಯಾದಗಿರಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ನೋಡಲ್ ಅಧಿಕಾರಿ.

ಬಾಕಿ ಇರುವ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಪತ್ರಗಳನ್ನು ಬರೆಯಲಾಗಿದೆ. ಸರ್ಕಾರದ ಬಳಿ ಅನುದಾನ ಇಲ್ಲ ಬಂದ ಬಳಿಕ ಕೊಡುವುದಾಗಿ ಹೇಳುತ್ತಾರೆ
- ಬಸವರಾಜ, ಜೆಸ್ಕಾಂ, ಯಾದಗಿರಿ ಲೆಕ್ಕ ವಿಭಾಗದ ಅಧಿಕಾರಿ

‘ಅನುದಾನದ ಕೊರತೆ ಇಲ್ಲ ಒಂದಿಷ್ಟು ಅಂತರವಿದೆ’

‘ವಿದ್ಯುತ್ ಬಿಲ್ ಬಾಕಿ ಹಣ ಪಾವತಿಯಲ್ಲಿ ಯಾವುದೇ ಅನುದಾನದ ಕೊರತೆ ಇಲ್ಲ. ತಾಂತ್ರಿಕ ಕಾರಣಗಳಿಂದ ತಡವಾಗುತ್ತಿದ್ದು ಒಂದಿಷ್ಟು ಅಂತರವಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ 6ರಂದು ಜಿಲ್ಲಾಧಿಕಾರಿಗಳು ಸೂಪರ್ ವೈಸರ್ಗಳನ್ನು ಕರೆಯಿಸಿ ಸಭೆ ನಡೆಸುವರು. ಅಂಕಿಸಂಖ್ಯೆಗಳ ಬದಲು ವಾಸ್ತವದಲ್ಲಿ ಏನು ಆಗಿದೆ ಎಂಬುದನ್ನು ಕೇಳಿದ್ದಾರೆ. ಪ್ರತಿಯೊಂದಕ್ಕೂ ಕಾರಣ ಕೊಡುವಂತೆಯೂ ಸೂಚಿಸಿದ್ದಾರೆ’ ಎಂದರು.

‘ಮೂಲಸೌಕರ್ಯಗಳೊಂದಿಗೆ ಕಟ್ಟಡ ಕೊಡುವ ಜವಾಬ್ದಾರಿ ಆರ್ಡಿಪಿಆರ್ನದ್ದು. ಸ್ಥಳೀಯ ಸಂಸ್ಥೆಗಳು (ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಪುರಸಭೆ ನಗರ ಸಭೆಗಳು) ತಮ್ಮಲ್ಲಿನ ಹೆಚ್ಚುವರಿ ಅಥವಾ ಪ್ರತ್ಯೇಕವಾಗಿ ಅನುದಾನವನ್ನು ತೆಗೆದಿರಿಸಿ ವಿದ್ಯುತ್ ಶುಲ್ಕವನ್ನು ಭರಿಸಬೇಕಾಗುತ್ತದೆ. ನಮ್ಮ ಇಲಾಖೆಗೆ ಇದಕ್ಕಾಗಿಯೇ ಪ್ರತ್ಯೇಕವಾಗಿ ಯಾವುದೆ ಅನುದಾನ ಬರುವುದಿಲ್ಲ. ಸ್ಥಳೀಯ ಸಂಸ್ಥೆಗಳು ಭರಿಸಿದರೆ ನಮ್ಮ ಹೊರೆಯೂ ಕಡಿಮೆ ಆಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.