ಚಿಂಚೋಳಿ : ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಮೋಯಿನ್, ಮಹಮ್ಮದ್ ಸಮೀರ್, ಗೌಸ್ ಬಂಧಿತರು. ಗ್ರಾಮದ ಹೋಟೆಲ್ಗೆ ಬಂದಿದ್ದ ಆರೋಪಿಗಳು ಖೋಟಾ ನೋಟು ನೀಡಿ ಸಿಗರೇಟು ಖರೀದಿಸಿದ್ದಾರೆ. ಅನುಮಾನ ಬಂದು ವಿಚಾರಿಸಲು ಮುಂದಾದಾಗ ಓಡಿ ಹೋಗಿದ್ದರು. ಈ ಕುರಿತು ಹೋಟೆಲ್ನ ಯಲ್ಲಪ್ಪ ಅವರು ದೂರು ನೀಡಿದ್ದರು.

ಸಬ್ ಇನಸ್ಪೆಕ್ಟರ್ ಗಂಗಮ್ಮ ಜಿನಿಕೇರಿ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಗಳಿಂದ ₹200, ₹500 ಮುಖಬೆಲೆಯ ಸುಮಾರು ₹8 ಸಾವಿರದಷ್ಟು ಖೋಟಾ ನೋಟು ಜಪ್ತಿ ಮಾಡಲಾಗಿದೆ.