‘ಉಸಿರಿರುವ ತನಕ ರೈತರ ಧ್ವನಿ’
ರೈತರ ಸಂಕಷ್ಟ ಆಲಿಸಿದ ನಿಖಿಲ್ ಕುಮಾರಸ್ವಾಮಿ ‘ವೇದಿಕೆಗಳಲ್ಲಿ ರೈತರ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಬರೀ ಕೇಂದ್ರದಲ್ಲಿ ಸಚಿವರಾದ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಬಳಿ ಪರಿಹಾರ ಕೇಳಲಿ ಎಂದು ಟೀಕಿಸುತ್ತಾರೆ. ಕೇಂದ್ರದಲ್ಲಿ ಕುಮಾರಸ್ವಾಮಿ ಅವರೇನೂ ಕೃಷಿ ಸಚಿವರಾ? ಆದರೂ ಕುಮಾರಸ್ವಾಮಿ ಅವರು ನಿರಂತರವಾಗಿ ರೈತರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಸಚಿವ ಸ್ಥಾನದಲ್ಲಿ ಇರಲಿ–ಬಿಡಲಿ ಅಧಿಕಾರದಲ್ಲಿ ಇರಲಿ–ಬಿಡಲಿ ಹಿಂದಿನಂತೆಯೇ ದೇವೇಗೌಡರ ಕುಟುಂಬ ಕೊನೆಯ ಉಸಿರು ಇರುವ ತನಕ ರೈತರ ಪರವಾಗಿ ಧ್ವನಿ ಎತ್ತು ಕೆಲಸ ಮಾಡಲಿದೆ’ ಎಂದರು. ಫೋನ್ ಮೂಲಕ ಎಚ್‌ಡಿಕೆ ಭರವಸೆ ಬಳಿಕ ನಿಖಿಲ್ ಕುಮಾರಸ್ವಾಮಿ ದೂರವಾಣಿ ಮೂಲಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ರೈತರೊಂದಿಗೆ ಮಾತನಾಡಿಸಿದರು. ‘ಕಲಬುರಗಿಯ ಮಹಾಜನತೆ ರೈತ ಬಂಧುಗಳಿಗೆ ನಮಸ್ಕಾರ. ನಿಮ್ಮೆಲ್ಲರ ಸಂಕಷ್ಟ ನಾನು ಗಮನಿಸುತ್ತಿರುವೆ. ಬೆಳೆ ಹಾನಿಯಾದ ಬಗೆಗೆ ಒಂದು ಮನವಿ ಪತ್ರ ಕಳುಹಿಸಿಕೊಡಿ. ನಾನು ಪ್ರಧಾನಿ ಅವರನ್ನೊ ಇಲ್ಲವೇ ಗೃಹ ಸಚಿವರನ್ನೊ ಭೇಟಿ ಮಾಡಿ ಆರ್ಥಿಕ ನೆರವು ಒದಗಿಸಲು ಪ್ರಯತ್ನಿಸುವೆ’ ಎಂದು ಕುಮಾರಸ್ವಾಮಿ ಅವರು ಫೋನ್ ಮೂಲಕ ಭರವಸೆ ನೀಡಿದರು.