ಕಲಬುರಗಿ: ಪ್ರಕರಣ 1: ಅದು ಅ.2ರ ಗುರುವಾರ. ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದ ಯುವ ರೈತ ಮೌನೇಶ ಕಟ್ಟಿಮನಿ ಜಮೀನಿನಲ್ಲೇ ಮರಕ್ಕೆ ನೇಣು ಹಾಕಿಕೊಂಡರು. ಈಚೆಗೆ ಸುರಿದ ಭಾರಿ ಮಳೆಗೆ ಅವರು ಬೆಳೆದಿದ್ದ ಹತ್ತಿ, ಸೂರ್ಯಕಾಂತಿ ಕೈಕೊಟ್ಟಿತ್ತು.

ಪ್ರಕರಣ 2: ಅಂದು ಅ.3. ಭೀಮಾನದಿಗೆ ಹಾರಿ ಕಲಬುರಗಿ ತಾಲ್ಲೂಕಿನ ಬಸವಪಟ್ಟಣ ರೈತ ಮರೆಪ್ಪ ಬರ್ಮಾ ಆತ್ಮಹತ್ಯೆಗೆ ಶರಣಾದರು. ಸ್ವಂತ ಹಾಗೂ ಕಡತಕ್ಕೆ ಹಾಕಿಕೊಂಡಿದ್ದ ಜಮೀನಿನಲ್ಲಿ ಅತಿವೃಷ್ಟಿಯಿಂದಾದ ಬೆಳೆ ಹಾನಿ ಆಗಿತ್ತು. ಅದರಿಂದ ನೊಂದು ಬದುಕಿಗೆ ಪೂರ್ಣ ವಿರಾಮವಿಟ್ಟರು.

ಪ್ರಕರಣ 3: ಅ.4ರಂದು ಕ್ರಿಮಿನಾಶಕ ಕುಡಿದು ರೈತ ಆತ್ಮಹತ್ಯೆ. ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಕೃಷಿಕ ಜಾಫರ್ ಮೃತ ರೈತ.

ಪ್ರಕರಣ 4: ಅಂದು ಅಕ್ಟೋಬರ್ 4. ಸಂಜೆ ಹೊತ್ತು. ಚಿಂಚೋಳಿ ತಾಲ್ಲೂಕಿನ ಬೆಡಕಪಳ್ಳಿಯ ರೈತ ಶಾಂತಪ್ಪ ತಳವಾರ ಮನೆಯಲ್ಲೇ ನೇಣಿಗೆ ಶರಣಾದರು. ಬೆಳೆ ಹಾನಿಯಿಂದಾದ ನಷ್ಟ ಜೀವಕ್ಕೇ ಎರವಾಯಿತು.

ಇದು ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹ, ಬೆಳೆಹಾನಿಯಿಂದ ನೊಂದಿರುವ ರೈತರ ಸರಣಿ ಸಾವಿನ ನೋಟ. ಒಂದೇ ವಾರದ ಅವಧಿಯಲ್ಲಿ ನಾಲ್ವರು ರೈತರ ಆತ್ಮಹತ್ಯೆಗಳು ವರದಿಯಾಗಿವೆ.

ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ 8.90 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ 8.85 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು. ಇದರಲ್ಲಿ ಪ್ರಾಥಮಿಕ ಅಂದಾಜಿನಂತೆ 3 ಲಕ್ಷ ಹೆಕ್ಟೇರ್ಗಳಷ್ಟು ಬೆಳೆ ಹಾನಿಯಾಗಿದೆ.

ಒಂದೆಡೆ ಸ್ವಂತ ಹೊಲದಲ್ಲಿ ಬೆಳೆ ಅತಿವೃಷ್ಟಿ ಪಾಲಾದ ಸಂಕಟ. ಮತ್ತೊಂದೆಡೆ ಕಡತಕ್ಕೆ ಹಾಕಿಕೊಂಡ ಜಮೀನು ಮಾಲೀಕರಿಗೆ ‘ಬಾಡಿಗೆ’ ಕೊಡಬೇಕಾದ ಸಂಕಷ್ಟ. ಜೊತೆಗೆ ಸಾಲದ ಹೊರೆ. ಇಂಥ ತ್ರಿಶಂಕು ಸಂಕಷ್ಟದಲ್ಲಿ ಜಿಲ್ಲೆಯ ಅನ್ನದಾತರು ಸಿಲುಕಿದ್ದಾರೆ. ಬೇಸಾಯದ ಬದುಕಿನಲ್ಲಿ ಎದುರಾದ ಸಂಕಷ್ಟ ಹಾಗೂ ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಜಿಲ್ಲೆಯ ರೈತರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2024ರ ಜನವರಿಯಿಂದ 2025ರ ಅಕ್ಟೋಬರ್ 5ರ ಅವಧಿಯಲ್ಲಿ 132 ರೈತರ ಆತ್ಮಹತ್ಯೆಗಳು ವರದಿಯಾಗಿವೆ. ಅವುಗಳಲ್ಲಿ 109 ರೈತರ ಆತ್ಮಹತ್ಯೆ ಪ್ರಕರಣಗಳನ್ನು ಅರ್ಹವೆಂದು ಪರಿಗಣಿಸಿ ಪರಿಹಾರ ವಿತರಿಸಲಾಗಿದೆ.

2025ರ ಏಪ್ರಿಲ್ನಿಂದ ಅಕ್ಟೋಬರ್ 5ರವರೆಗೆ ಜಿಲ್ಲೆಯಲ್ಲಿ 27 ರೈತರು ವಿವಿಧ ಬಗೆಯ ಆತ್ಮಹತ್ಯೆ ದಾರಿ ತುಳಿದಿದ್ದಾರೆ. ಇದರಲ್ಲಿ 25 ರೈತರ ಪ್ರಕರಣಗಳನ್ನು ಅರ್ಹವೆಂದು ಪರಿಗಣಿಸಲಾಗಿದೆ. ಒಂದು ಪ್ರಕರಣ ತಿರಸ್ಕೃತಗೊಂಡಿದ್ದು, ಇನ್ನೊಂದು ಪ್ರಕರಣ ಪರಿಶೀಲನಾ ಹಂತದಲ್ಲಿದೆ.

‘ಸೆಪ್ಟೆಂಬರ್ನಲ್ಲಿ ಇನ್ನೂ ಕೆಲವೆಡೆ ರೈತರ ಆತ್ಮಹತ್ಯೆಗಳು ವರದಿಯಾಗಿವೆ. ಆದರೆ ಆ ಬಗೆಗೆ ಇನ್ನಷ್ಟೇ ಅಧಿಕೃತ ದಾಖಲೆಗಳು ಕೈಸೇರಬೇಕಿದೆ’ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಂಬೋಣ.

2024ರ ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟ 45 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಲ್ಲಿ 14 ಪ್ರಕರಣಗಳು ತಿರಸ್ಕತಗೊಂಡಿದ್ದವು. ಮಿಕ್ಕ 31 ಪ್ರಕರಣಗಳಲ್ಲಿ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿತ್ತು.

ಬರಪೀಡಿತ 2023–24ನೇ ಸಾಲಿನಲ್ಲಿ 88 ಅನ್ನದಾತರು ಉಸಿರು ಚೆಲ್ಲಿದ್ದರು. ಅದರಲ್ಲಿ 69 ರೈತರ ಆತ್ಮಹತ್ಯೆಯನ್ನು ಅರ್ಹವೆಂದು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಆಗ 19 ಪ್ರಕರಣಗಳು ತಿರಸ್ಕೃತಗೊಂಡಿದ್ದವು.

‘ಬದುಕಿನಲ್ಲಿ ಭರವಸೆ ಇರಲಿ’

‘ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಭರವಸೆಯೇ ಬದುಕಿನ ಜೀವದ್ರವ್ಯ. ಸಂಕಷ್ಟದಲ್ಲಿರುವ ರೈತರು ಭವಿಷ್ಯದ ಬಗೆಗೆ ನಂಬಿಕೆ ಇಟ್ಟುಕೊಳ್ಳಬೇಕು. ಭರವಸೆ ಮಾತ್ರವೇ ಯಾವುದೇ ವ್ಯಕ್ತಿಯನ್ನು ಆತ್ಮಹತ್ಯೆ ಯೋಚನೆಯಿಂದ ಪಾರುಮಾಡುವ ಮಂತ್ರ. ಕುಟುಂಬ ಸೇರಿದಂತೆ ಇಡೀ ಸಮಾಜ ಸಂಕಷ್ಟದಲ್ಲಿರುವ ರೈತರಿಗೆ ಸ್ಥೈರ್ಯ ತುಂಬಿ ಅವರತ್ತ ಆತ್ಮಹತ್ಯೆ ಯೋಚನೆ ಸುಳಿಯದಂತೆ ನೋಡಿಕೊಳ್ಳಬೇಕಿದೆ’ ಎನ್ನುತ್ತಾರೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಮೊಹಮ್ಮದ್ ಇರ್ಫಾನ್ ಮಹಾಗಾವಿ.

ಹಾನಿಯಾದ ಬೆಳೆಗಳಿಗೆ ಈಗಾಗಲೇ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಅದರೊಂದಿಗೆ ಬೆಳೆ ವಿಮೆ ಪರಿಹಾರವೂ ಸಿಗಲಿದೆ. ಸಂಕಷ್ಟದಲ್ಲಿರುವ ರೈತರು ದುಡುಕಬಾರದು
-ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ

ಬೆಳೆ ಹಾನಿ ಸಾಲದಿಂದ ಸಂಕಷ್ಟದಲ್ಲಿರುವ ರೈತರ ಆತ್ಮಹತ್ಯೆಯತ್ತ ಹೊರಳದಂತೆ ತಡೆಯಲು ಕೇಂದ್ರ–ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಬೇಕು. ಪರಿಹಾರವನ್ನೂ ನೀಡಬೇಕು
ಶರಣಬಸಪ್ಪ ಮಮಶೆಟ್ಟಿ, ಕೆಪಿಆರ್ಎಸ್ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.