ಭಾನುವಾರ, ಏಪ್ರಿಲ್ 2, 2023
31 °C

ಗಾಣಗಾಪುರ, ಘತ್ತರಗಿ: ಕಾಣದ ದಟ್ಟಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ಅನ್‌ಲಾಕ್‌ ಸಡಿಲಿಸಿದ ರಾಜ್ಯ ಸರ್ಕಾರವು ಎಲ್ಲ ದೇವಸ್ಥಾನಗಳ ಬಾಗಿಲು ತೆರೆದು ಸೋಮವಾರಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಿದ್ದು, ತಾಲ್ಲೂಕಿನ ದೇವಲಗಾಣಗಾಪುರ ಹಾಗೂ ಘತ್ತರಗಿಗೆ ಬರುತ್ತಿರುವ ಭಕ್ತರ ಸಂಖ್ಯೆ ಬಹಳ ಕಡಿಮೆ ಇತ್ತು.

ಈ ಎರಡೂ ದೇವಸ್ಥಾನಗಳಿಗೆ ಬಹುತೇಕ ಭಕ್ತರು ನೆರೆಯ ಮಹಾರಾಷ್ಟ್ರದಿಂದ ಬರುತ್ತಾರೆ. ತಾಲ್ಲೂಕಿನ ಮಾಶಾಳ, ಬಳೂರ್ಗಿ, ಅರ್ಜುಣಗಿ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ಹಿಂದಿನ 24 ಗಂಟೆಯ ಒಳಗೆ ಕೊರೊನಾ ನೆಗಟಿವ್ ಇದ್ದರೆ ಮಾತ್ರ ತಾಲ್ಲೂಕಿನ ಗಡಿ ಪ್ರವೇಶಿಸಲು ಅನುಮತಿ ಇದೆ.

ಮತ್ತೊಂದು ಕಡೆ ಮಳೆಗಾಲ ಇರುವುದರಿಂದ ಭಕ್ತರ ಸಂಖ್ಯೆ ಕ್ಷೀಣಿಸಿದೆ. ಸೋಮವಾರ ಕೇವಲ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಿದರು.

‘ಸೋಮವಾರದಿಂದ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಭಾನುವಾರ ದೇವಸ್ಥಾನ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗಿತ್ತು. ಮಹಾದ್ವಾರ ಮುಚ್ಚಿ ಸಣ್ಣ ದ್ವಾರದಿಂದ ಯಾತ್ರಿಕರನ್ನು ವ್ಯಕ್ತಿಗತ ಅಂತರ ಕಾಯ್ದುಕೊಂಡು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಒಂದು ವಾರದ ಬಳಿಕ ಯಾತ್ರಿಕರ ಸಂಖ್ಯೆ ಹೆಚ್ಚಾಗಬಹುದು‘ ಎಂದು ದೇವಲಗಾಣಗಾಪುರ ದತ್ತ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ರಾಠೋಡ ಹಾಗೂ ಅರ್ಚಕರ ಸಂಘದ ಅಧ್ಯಕ್ಷ ಧನಂಜಯ ಲಕ್ಷ್ಮಣ ಭಟ್ ಪೂಜಾರಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.