ಗುರುವಾರ , ಅಕ್ಟೋಬರ್ 22, 2020
24 °C

10 ಗ್ರಾಮಗಳನ್ನು ಸುತ್ತುವರಿದ ಭೀಮೆ: ಗಾಣಗಾಪುರ, ಚಿನಮಳ್ಳಿ ಸೇತುವೆ ಮುಳುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಭೀಮಾ ನದಿಗೆ ಹರಿದು ಬರುತ್ತಿರುವುದರಿಂದ ಜಿಲ್ಲೆಯ ನದಿ ಪಾತ್ರದ ಗ್ರಾಮಗಳ ಪರಿಸ್ಥಿತಿ ಇನ್ನಷ್ಟು ಗಂಭೀರಗೊಂಡಿದೆ.

ಈಗಾಗಲೇ ಕಾಗಿಣಾ, ಬೆಣ್ಣೆತೊರಾ ನೀರಿನಿಂದ ಕಾಳಗಿ ತಾಲ್ಲೂಕಿನ ಹೆಬ್ಬಾಳ ಮತ್ತು ಹಳೆ ಹೆಬ್ಬಾಳ  ನಡುಗಡ್ಡೆಯಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಕಳೆದ ರಾತ್ರಿಯಿಂದ ಇದುವರೆಗೂ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿರುವುದರಿಂದ ಭೀಮಾ ನದಿ, ಬೋರಿ ಹಳ್ಳ ಅಪಾಯದ ಮಟ್ಟಕ್ಕೆ‌ ತಲುಪಿವೆ. 

ಅಫಜಲಪುರ ತಾಲ್ಲೂಕಿನ ದಿಕ್ಸಂಗಾ, ಜೇವರ್ಗಿ ಕೆ, ಜೇವರ್ಗಿ ಬಿ, ಕಲಬುರ್ಗಿ ತಾಲ್ಲೂಕಿನ ಹಾಗರಗುಂಡಗಿ, ಜೇವರ್ಗಿ ತಾಲ್ಲೂಕಿನ ಇಟಗಾ, ಚಿತ್ತಾಪುರ ತಾಲ್ಲೂಕಿನ ಕಡಬೂರು, ಬಳವಡಗಿ  ಸೇರಿದಂತೆ  ಹತ್ತಕ್ಕೂ ಹೆಚ್ಚಿನ ಗ್ರಾಮಗಳಿಗೆ ನೀರು ನುಗ್ಗಿದೆ. 

ಸೊನ್ನ ಬ್ಯಾರೇಜ್ ನಿಂದ 2.23. ಲಕ್ಷ  ಕ್ಯುಸೆಕ್ ನೀರು ಹರಿ ಬಿಟ್ಟಿದ್ದರಿಂದ. ದೇವಲ ಗಾಣಗಾಪುರ, ಚಿನಮಳ್ಳಿ ಸೇತುವೆಗಳು ಮುಳುಗಿವೆ. ಘತ್ತರಗಿ ಬ್ಯಾರೇಜ್ ಸೇತುವೆ ಸಹ ಮುಳುಗಡೆ ಹಂತಕ್ಕೆ ಬಂದಿದೆ.

ಮುಳುಗಡೆ ಭೀತಿಯಲ್ಲಿ ಕಡಬೂರು ಗ್ರಾಮ 

ವಾಡಿ ಸಮೀಪ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಸತತ ಏರಿಕೆಯಾಗಿದ್ದರಿಂದ‌ ಮನೆಗಳು ಸಂಪೂರ್ಣ ಮುಳುಗಿದ್ದು, ಜನರು ಭೀತಿಯಿಂದ ಮನೆಯ ಮಾಳಿಗೆ ಮೇಲೇರಿ ಕುಳಿತಿದ್ದಾರೆ. ಅನ್ನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. 

ಒಂದೆಡೆ ಹಳ್ಳದ ನೀರು ರಭಸವಾಗಿ ಗ್ರಾಮ ಹೊಕ್ಕುತ್ತಿದ್ದರೆ, ಪಕ್ಕದಲ್ಲೇ ಹರಿಯುತ್ತಿರುವ ಭೀಮಾನದಿಯ ರಭಸ ಎದೆ ಝಲ್ಲೆನ್ನಿಸುತ್ತಿದೆ. ಅನ್ನ ಆಹಾರಕ್ಕಾಗಿ ಜನದಾಡುತ್ತಿದ್ದಾರೆ. ಕಾರು, ಎತ್ತಿನ ಬಂಡಿಗಳು ಮುಳುಗಡೆಯಾಗಿವೆ. ಸಹಾಯಕ್ಕಾಗಿ‌ ಜನರು ಅಂಗಲಾಚುತ್ತಿದ್ದಾರೆ. ಸಾಮಾನುಗಳು, ದವಸ ದಾನ್ಯಗಳು ಕೊಚ್ಚಿಹೋಗಿ ಬದುಕೇ ಬೀದಿಗೆ ಬಂದಿದೆ ಎಂದು ಸ್ಥಳೀಯರು ಗೋಳಿಡುತ್ತಿದ್ದಾರೆ. 

ನಾಲವಾರ ವ್ಯಾಪ್ತಿಯ ಕೊಲ್ಲೂರು ಹಾಗೂ ವಾಡಿ ಸಮೀಪದ ಇಂಗಳಗಿ ಪರಿಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಅಶೋಕನ ಕಾಲದ ಶಾಸನಗಳಿರುವ ಸನ್ನತಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಕೊಲ್ಲೂರು ಹೊರವಲಯದಲ್ಲಿ ಸುಮಾರು 15 ಅಡಿ ಎತ್ತರದಲ್ಲಿ ನಿರ್ಮಿಸಿದ ಸೇತುವೆ ಮುಳುಗಡೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು