ಶುಕ್ರವಾರ, ಮೇ 20, 2022
23 °C

ಬಾಲಕಿ ಗರ್ಭಿಣಿ: ಪತಿ ಸೇರಿ ಐವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಬಾಲಕಿಯನ್ನು ಮದುವೆಯಾಗಿ, ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯ ಪತಿ ಸೇರಿ ಐವರ ವಿರುದ್ಧ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಗುರುವಾರ ‘ಪೋಕ್ಸೊ’ ಅಡಿ ಪ್ರಕರಣ ದಾಖಲಿಸಲಾಗಿದೆ.

‘15 ವರ್ಷ ವಯಸ್ಸಿನ ಬಾಲಕಿಗೆ ಆಕೆಯ ಸಂಬಂಧಿಕನೇ ಆದ ಯುವಕನೊಂದಿಗೆ ಮಹಾರಾಷ್ಟ್ರದ ನಗರವೊಂದರಲ್ಲಿ ಮದುವೆ ಮಾಡಲಾಗಿದೆ. ಮದುವೆ ಮೂರು ತಿಂಗಳ ಹಿಂದೆಯೇ ನಡೆದಿದ್ದು, ಈಗ ಬಾಲಕಿ ಗರ್ಭಿಣಿ ಆಗಿದ್ದಾಳೆ. ಈ ವಿಷಯವನ್ನು ವ್ಯಕ್ತಿಯೊಬ್ಬರು ಪೊಲೀಸರಿಗೆ ಮುಟ್ಟಿಸಿದ ಬಳಿಕ ಸಂಬಂಧಿಕರನ್ನು ಕರೆದು ವಿಚಾರಣೆ ನಡೆಸಲಾಗಿದೆ. ಬಾಲಕಿಗೆ ಮದುವೆ ಮಾಡಿದ್ದು, ಆಕೆ ಗರ್ಭ ಧರಿಸಿದ್ದು ದೃಢಪಟ್ಟಿದ್ದರಿಂದ ಪತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಹಿಳಾ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

‘ಮುಂದೆ ನಿಂತು ಮದುವೆ ಮಾಡಿದ ಇತರ ನಾಲ್ವರನ್ನೂ ಆರೋಪಿಗಳನ್ನಾಗಿ ಮಾಡಿ ಎಫ್‌ಐಆರ್‌
ದಾಖಲಿಸಲಾಗಿದೆ. ಇನ್ನೂ ಇದರ ಹೆಚ್ಚುವರಿ ವಿಚಾರಣೆ ನಡೆಸಿದ ನಂತರವಷ್ಟೇ ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು